ಯಳಂದೂರು: ಪಟ್ಟಣದ ಬಳೆಪೇಟೆಯಲ್ಲಿ ಬುಧವಾರ ಉಪ್ಪಾರ ಸಮುದಾಯಕ್ಕೆ ಸೇರಿದ ಆಸ್ತಿಯ ಜಾಗವನ್ನು ಸಮುದಾಯದ ಯಜಮಾನರು ಹಾಗೂ ಮುಖಂಡರು ಮಾತನಾಡಿ, ವಿಧಿವತ್ತಾಗಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮುದಾಯದ ಯಜಮಾನರು ಹಾಗೂ ಮುಖಂಡರು, ಉಪ್ಪಾರ ಜನಾಂಗದ ಆಸ್ತಿಯಾಗಿರುವ ಈ ಜಾಗವನ್ನು ಎಲ್ಲರೂ ಒಗ್ಗಟ್ಟಿನಿಂದ ಕಾಪಾಡಿಕೊಂಡು, ಸಮುದಾಯದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿಂಗರಾಜ್, ಉಮೇಶ್, ಬಸವರಾಜ್, ವೆಂಕಟೇಶ್, ಬಂಗಾರಸ್ವಾಮಿ, ಶಿವಣ್ಣ, ರೇವಣ್ಣ, ರಾಮ, ನಿಂಗರಾಜು, ಚಂದ್ರ, ಮಾದಣ್ಣ, ನಂಜುಂಡ ಸೇರಿದಂತೆ ಉಪ್ಪಾರ ಸಮುದಾಯದ ಮುಖಂಡರು ಹಾಗೂ ಗಣ್ಯರು ಭಾಗವಹಿಸಿದ್ದರು.
