ತಾಂಡವಪುರ: ನಾಡಿನ ಸಮಸ್ತ ಜನತೆಗೆ ನರಕ ಚತುರ್ದಶಿ ಹಾಗೂ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯ ಕೋರಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾಕ್ಟರ್ ಎಸ್ ಯತೀದ್ರ ಸಿದ್ದರಾಮಯ್ಯ ರವರು.


ಬೆಂಗಳೂರಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡುತ್ತಾ ದೀಪಾವಳಿ ಹಬ್ಬ ಬೆಳಕಿನ ಹಬ್ಬ ಕತ್ತಳಿಂದ ಬೆಳಕಿನೆಡೆಗೆ ಸಾಗುವ ದೀಪಾವಳಿ ಹಬ್ಬ ಅಷ್ಟೇ ಅಲ್ಲ ಗ್ರಾಮೀಣ ಭಾಗದ ರೈತ ವರ್ಗದ ಸುಗ್ಗಿಯ ಹಬ್ಬ ಕೂಡ ಇದು ಎಂದು ಹೇಳಿದ ಸಚಿವರು ಅಜ್ಞಾನ ಹಾಗೂ ಕೆಡುಕಿನ ಮೇಲಿನ ಸಜ್ಜನಿಕೆಯ ವಿಜಯದ ಸಂಕೇತವಾದ ನರಕ ಚತುರ್ದಶಿ ಮತ್ತು ದೀಪಾವಳಿಯು ಪ್ರತಿಯೊಬ್ಬರ ಜೀವನದಲ್ಲೂ ಹೊಸ ಭರವಸೆ ಹೊಸ, ಚೈತನ್ಯ ಹಾಗೂ ಕ್ರಾಂತಿಕಾರಿ ಬೆಳಕನ್ನು ತರಲಿ. ಜನತೆಯ ಬಾಳು ಸದಾ ಬೆಳಗುವಂತಾಗಲಿ ಎಂದು ಸಚಿವರು ನಾಡಿನ ಜನತೆಗೆ ದೀಪಾವಳಿಯ ಹಬ್ಬದ ಹಾರ್ದಿಕ ಶುಭಾಶಯ ಕೋರಿದರು.


ದೀಪಾವಳಿಯ ಹಬ್ಬದ ಪ್ರಯುಕ್ತ ಪಟಾಕಿ ಹಚ್ಚುವ ಸಂದರ್ಭದಲ್ಲಿ ಎಚ್ಚರವಹಿಸಿ
ದೀಪಾವಳಿಯ ಈ ಸಂದರ್ಭದಲ್ಲಿ, ನಮ್ಮ ನಗರಗಳು ಕೇವಲ ದೀಪಗಳ ಸಾಲಿನಿಂದಷ್ಟೇ ಅಲ್ಲದೆ ಸ್ವಚ್ಛತೆ, ಸುಸ್ಥಿರ ಅಭಿವೃದ್ಧಿ, ಹಸಿರು ಮತ್ತು ನವೀನ ಮೂಲಸೌಕರ್ಯಗಳ ಬೆಳಕಿನಿಂದ ಕಂಗೊಳಿಸಲಿ. ಪರಿಸರಸ್ನೇಹಿ ಆಚರಣೆಯ ಮೂಲಕ ನಮ್ಮ ನಗರ ಹಾಗೂ ಪಟ್ಟಣಗಳನ್ನು ಮಾಲಿನ್ಯಮುಕ್ತವಾಗಿಸಿ, ಪ್ರತಿಯೊಬ್ಬರಿಗೂ ಸುರಕ್ಷಿತ ವಾತಾವರಣ ನಿರ್ಮಿಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ.
ಸಾಂಪ್ರದಾಯಿಕ ಸೌಹಾರ್ದತೆ ಮತ್ತು ಸಹೋದರತ್ವದ ಬೆಸುಗೆಯೊಂದಿಗೆ, ಈ ದೀಪಾವಳಿಯು ನಾಡಿನ ಪ್ರತಿಯೊಂದು ಮನೆ-ಮನಗಳಲ್ಲೂ ಆರೋಗ್ಯ, ಸಂಪತ್ತು, ಶಾಂತಿ ಹಾಗೂ ಸಮೃದ್ಧಿಯನ್ನು ತರಲೆಂದು ಹೃತ್ಪೂರ್ವಕವಾಗಿ ಹಾರೈಸುತ್ತೇನೆ. ಎಂದು ಸಚಿವರು ಹೇಳಿದರು.

Spread the love

Leave a Reply

Your email address will not be published. Required fields are marked *