ಹತ್ತಿರವಾಯಿತು ಮಹಾ ಪ್ರಳಯದ ದಿನ !ಭೂಪಟದಿಂದಲೇ ಮಾಯವಾಗಲಿದೆ ದೇಶ ! The day of the great flood is near! This country will disappear from the face of the earth!
ಆಸ್ಟ್ರೇಲಿಯಾದ ಈಶಾನ್ಯ ಭಾಗದಲ್ಲಿರುವ ತುವಾಲು ದ್ವೀಪವು ಜಾಗತಿಕ ತಾಪಮಾನದಿಂದ ಸಮುದ್ರದೊಳಗೆ ಸೇರುತ್ತಿದೆ.ಸಮುದ್ರದ ನೀರಿನಲ್ಲಿ ನಿರಂತರವಾಗಿ ಈ ದ್ವೀಪ ಮುಳುಗುತ್ತಿದೆ. ಮಹಾ ಪ್ರಳಯದ ದಿನಗಳು ಸಮೀಪಿಸುತ್ತಿವೆ ಎಂದು ಹಲವು…
ಕರವೇ ಪ್ರವೀಣ್ ಶೆಟ್ಟಿ ಬಣದ ನೆಲಮಂಗಲ ತಾಲ್ಲೂಕು ಆಟೋ ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನ ಆಚರಿಸಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ನೆಲಮಂಗಲ ತಾಲ್ಲೂಕು ಆಟೋ ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯ ಉಪಾಧ್ಯಕ್ಷ ಉಮೇಶ್…
Nelamangala BJP: ಬಸ್ ನಿಲ್ದಾಣಕ್ಕೆ ಅಹೋರಾತ್ರಿ ಪ್ರತಿಭಟನೆಗೆ ನೆಲಮಂಗಲ ಬಿಜೆಪಿ ನಿರ್ಧಾರ
ನೆಲಮಂಗಲ: ತಾಲೂಕಿನ ದಾಬಸ್ಪೇಟೆಯ ಬಸ್ ನಿಲ್ದಾಣ ಶಿಥಿಲಗೊಂಡಿದ್ದು ದುರಸ್ತಿ ಮಾಡಿ ಪ್ರಯಾಣಿಕರಿಗೆ ಅನುವು ಮಾಡಿಕೊಡುವಂತೆ ಒತ್ತಾಯಿಸಿ ಜ.೫ರಂದು ದಾಬಸ್ಪೇಟೆಯ ನಿಲ್ದಾಣದಲ್ಲಿ ಶಾಂತಿಯುತ ಧರಣಿ ನಡೆಸಲಾಗುತ್ತಿದೆ ಎಂದು ಬಿಜೆಪಿ…
ಗೌಡಹಳ್ಳಿ ಗ್ರಾಮದಲ್ಲಿ ವಿದ್ಯಾರ್ಥಿಗಳಿಗೆ ಕ್ರೀಡಾ ಮೈದಾನಕ್ಕಾಗಿ ಪ್ರತಿಭಟನೆ
ಶಾಲಾ ಆಟದ ಮೈದಾನಕ್ಕೆ ಮೀಸಲಿಟ್ಟಿರುವ ಜಾಗವನ್ನು ಅಕ್ರಮವಾಗಿ ಕಬಳಿಸುತ್ತಿದ್ದು ಅದನ್ನು ಉಳಿಸಿಕೊಡಿ ಎಂದು ನೆಲಮಂಗಲ ಸಮೀಪದ ಗೌಡಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ಕುರಿತು ಗ್ರಾಮ ಪಂಚಾಯ್ತಿ ಸದಸ್ಯ ಚಂದ್ರಶೇಖರ್ ಜಿ.ವಿ ಮಾತನಾಡಿ ಬೆಂಗಳೂರು ಉತ್ತರ ತಾಲ್ಲೂಕು, ದಾಸನಪುರ ಹೋಬಳಿ, ಗೌಡಹಳ್ಳಿ ಗ್ರಾಮದ ಸರ್ವೆ ನಂ.58 ರಲ್ಲಿ 1:00 ಎಕರೆ ಜಮೀನನ್ನು ಶಾಲೆ ಆಟದ ಮೈದಾನಕ್ಕೆ ಈಗಾಗಲೇ ಸರ್ಕಾರದಿಂದ ಮೀಸಲು ಇಡಲು ಶಿಫಾರಸ್ಸು ಮಾಡಲಾಗಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಮತ್ತು ತಾಲ್ಲೂಕು ದಂಡಾಧಿಕಾರಿ ತಹಶೀಲ್ದಾರ್ ಮತ್ತು ರಾಜಸ್ವ ನಿರ್ವಸ್ಥಕರು ಹಾಗೂ ಗ್ರಾಮ ಲೆಕ್ಕಾಧಿಕಾರಿ ಸರ್ವೆ ಇಲಾಖೆಯ ನಕ್ಷೆಯನ್ನು ಸಹ ಸಿದ್ದ ಪಡಿಸಿ, ವರದಿಯನ್ನು ನೀಡಿರುತ್ತಾರೆ. ಸದ್ಯ ಈ ಜಾಗವನ್ನು ರತ್ನಮ್ಮ ಮತ್ತು ಸಂಘಟಿಗರು ಏಕಾಏಕಿ ಬಂದು ರಾತ್ರಿಯ ಸಮಯದಲ್ಲಿ ಜೆ.ಸಿ.ಬಿ ಮುಖಾಂತರ ಸ್ವಚ್ಚಗೊಳಿಸಿ ಸ್ವಾಧೀನ ಪಡಿಸಿಕೊಳ್ಳಲು ಪ್ರಯತ್ನಿಸಿಸುತ್ತಿದ್ದು, ಈಗಾಗಲೇ ಸರ್ವೆ ನಂಬರ್ 58 ರಲ್ಲಿ ಬಿಲ್ಡಿಂಗ್ ನಿರ್ಮಾಣ ಮಾಡುತ್ತಿದ್ದಾರೆ. ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನಿರಾಶಿತರಿಗೆ ಮನೆ ನಿರ್ಮಾಣ ಮಾಡುತ್ತಿರುವುದಾಗಿ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಮನೆಗಳಿಗನ್ನ ಪಡೆಯುತ್ತಿರುವ ಫಲಾನುಭವಿಗಳು ಯಾರು ಸ್ಥಳೀಯರಲ್ಲಿ, ಎಲ್ಲರೂ ಹೊರಗಿನವರೇ ಹಾಗೂ ಎಲ್ಲರೂ ಅನುಕೂಲಸ್ಥರೆ. ನಮ್ಮ ಗ್ರಾಮದಲ್ಲಿ ಶಾಲೆ ವಿದ್ಯಾರ್ಥಿಗಳಿಗೆ ಕ್ರೀಡಾ ಚಟುವಟಿಕೆಗಳನ್ನು ಮಾಡಲು ಗ್ರಾಮದಲ್ಲಿ ಬೇರೆಯಾವುದೇ ಜಾಗವಿರುವುದಿಲ್ಲ. ಅಲ್ಲದೆ ಈ ಬೆಳವಣಿಗೆಯ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೂ ಕೂಡ ತರಲಾಗಿದೆ. ಆದುದ್ದರಿಂದ ಗೌಡಹಳ್ಳಿ ಮತ್ತು ಕಾಲೋನಿ ಗ್ರಾಮಸ್ಥರ ಒತ್ತಾಯದ ಮೇರೆಗೆ ಈ ಸರ್ಕಾರಿ ಜಾಗವನ್ನು ಶಾಲೆ ಆಟದ ಮೈದಾನಕ್ಕೆ ಮೀಸಲಿಡ ಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರಾದ ಪದ್ಮ ತಿಮ್ಮೇಗೌಡ, ಗ್ರಾಮಸ್ಥರ ಸಿದ್ದರಾಜು, ಗುರುಪ್ರಸಾದ್, ಶ್ರೀನಿವಾಸ್, ನಾಗರಾಜ್, ತಾಯಮ್ಮ, ಮಂಜುಳಾ, ವನಜಾಕ್ಷಮ್ಮ ಸೇರಿದಂತೆ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು.
ಬಾಲಕಿ ಮೇಲೆ ದೈಹಿಕ ಶಿಕ್ಷಕನಿಂದ ಅತ್ಯಾಚಾರ, ಮದುವೆ ಆಗುವುದಾಗಿ ನಂಬಿಸಿ ಯುವತಿಗೆ ವಂಚನೆ
ನೆಲಮಂಗಲ: 17 ವರ್ಷದ ಬಾಲಕಿ ಮೇಲೆ ಬಲವಂತವಾಗಿ ದೈಹಿಕ ಶಿಕ್ಷಕನಿಂದ ಅತ್ಯಾಚಾರ ಎಸಗಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ಪೇಟೆನಲ್ಲಿ ನಡೆದಿದೆ. 22 ವರ್ಷದ ದೈಹಿಕ ಶಿಕ್ಷಕ…
ಪತ್ನಿ ಮೇಲೆ ಅನುಮಾನ.. ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತಿ
ಬೆಂಗಳೂರು. (ನವೆಂಬರ್ 29): ಪತಿಯೊಬ್ಬ ಹೆಂಡ್ತಿಯ ಶೀಲ ಶಂಕಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಬಳಿಕ ತಾನು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ…
19ರ ಯುವತಿಯನ್ನ ಪ್ರೀತಿಸಿ ಮದ್ವೆಯಾಗಿದ್ದಕ್ಕೆ 40 ವರ್ಷದ ವ್ಯಕ್ತಿಯ ಬರ್ಬರ ಹತ್ಯೆ!
ಚಿತ್ರದುರ್ಗ: ಆತ ಮದ್ವೆಯಾಗಿ ಸುಖಿ ಸಂಸಾರ ನಡೆಸಬೇಕೆಂಬ ಕನಸು ಕಂಡವನು. ಆದ್ರೆ ಎರಡು ಮದ್ವೆಯಾದ್ರೂ ಪತ್ನಿಯರೊಂದಿಗೆ ಸಂಸಾರ ಮಾಡುವ ಭಾಗ್ಯ ಇಲ್ಲದೇ ಕೊಲೆಯಾಗಿದ್ದಾನೆ. ಪ್ರೀತಿ ಮದುವೆಯಾಗಿದ್ದ 46 ವರ್ಷದ…
ಪತಿಯ ಸಾವಿನ ಸುದ್ದಿ ಕೇಳಿ ಕುಸಿದು ಬಿದ್ದು ಪತ್ನಿ ಸಾವು: ಸಾವಿನಲ್ಲೂ ಒಂದಾದ ದಂಪತಿ
65 ವರ್ಷದ ಕಸ್ತೂರಿ ರಂಗಪ್ಪ ಅವರು ಪಡಿತರ ಪಡೆಯಲು ಹೋಗಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಈ ಸುದ್ದಿ ಕೇಳಿ ಅವರ ಪತ್ನಿ ಜಯಮ್ಮ (58) ಕೂಡ ಕುಸಿದು…
Nelamangala: 15 ವರ್ಷದ ಬಾಲಕಿ ಮೇಲೆ 70 ವರ್ಷದ ವೃದ್ಧನಿಂದ ಅತ್ಯಾಚಾರ
ಬೆಂಗಳೂರಿನ ನೆಲಮಂಗಲದಲ್ಲಿ 70 ವರ್ಷದ ವೃದ್ಧನಿಂದ 15 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದಿದ್ದ ವೇಳೆ ಈ ಅತ್ಯಾಚಾರ ನಡೆದಿದೆ. ಕಿರುಚಾಡದಂತೆ…