​ನೆಲಮಂಗಲ: ಇದೇ ತಿಂಗಳ ನವೆಂಬರ್ 20 ಹಾಗೂ 21 ರಂದು ನಡೆಯಲಿರುವ 27ನೇ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನೆಲಮಂಗಲ ತಾಲೂಕು ಸೋಲೂರು ಹೋಬಳಿ ಪಾಲನಹಳ್ಳಿ ಮಠದ ಪರಮ ಪೂಜ್ಯ ಶ್ರೀ ಡಾ. ಸಿದ್ದರಾಜು ಸ್ವಾಮೀಜಿಯವರನ್ನು ಆಯ್ಕೆ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯ ನಿರ್ಣಯದಂತೆ ಜಿಲ್ಲಾಧ್ಯಕ್ಷರಾದ ಬಿ.ಎನ್. ಕೃಷ್ಣಪ್ಪ ಅವರು ಈ ಅಧಿಕೃತ ಘೋಷಣೆ ಹಾಗೂ ಆಹ್ವಾನವನ್ನು ನೀಡಿದ್ದಾರೆ.


​ರಂಗಭೂಮಿ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಶ್ರೀಗಳು, ಇದುವರೆಗೆ ಒಟ್ಟು 375 ಕ್ಕೂ ಹೆಚ್ಚು ನಾಟಕಗಳಲ್ಲಿ ವಿವಿಧ ಪೌರಾಣಿಕ ಪಾತ್ರಗಳಿಗೆ ಜೀವತುಂಬಿದ್ದಾರೆ. ಕಲ್ಕತ್ತಾ ಯೂನಿವರ್ಸಿಟಿಯಿಂದ ಆಯುರ್ವೇದ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಡಾಕ್ಟರೇಟ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಕೇವಲ ನಾಟಕಗಳಷ್ಟೇ ಅಲ್ಲದೆ, ನಾಡಿನಾದ್ಯಂತ 9,000ಕ್ಕೂ ಹೆಚ್ಚು ಹರಿಕಥೆ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿರುವ ಸ್ವಾಮೀಜಿಯವರು, ತಮ್ಮ ಪಾಲನಹಳ್ಳಿ ಮಠದಲ್ಲಿ ಸುಮಾರು 9,000ಕ್ಕೂ ಹೆಚ್ಚು ಉಚಿತ ವಿವಾಹಗಳನ್ನು ನೆರವೇರಿಸುವ ಮೂಲಕ ಬಡ ಕುಟುಂಬಗಳಿಗೆ ಆಸರೆಯಾಗಿ ನಿಂತು ಮಹತ್ತರವಾದ ಸಾಮಾಜಿಕ ಸೇವೆಗೈದಿದ್ದಾರೆ.

Spread the love

Leave a Reply

Your email address will not be published. Required fields are marked *