ಮೈ ಭಾರತ್- ವಿಕಸಿತ ಭಾರತ್ ಯುವ ಸಂವಾದ ಕಾರ್ಯಕ್ರಮ

ದೇವನಹಳ್ಳಿ: ಪಟ್ಟಣದ ಪ್ರಸನ್ನಹಳ್ಳಿ ರಸ್ತೆಯಲ್ಲಿರುವ ಆಕಾಶ್ ಸಮೂಹ ಶಿಕ್ಷಣ ಸಂಸ್ಥೆಯ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೈ ಭಾರತ್(ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ), ಆಕಾಶ್ ಸಮೂಹ ಶಿಕ್ಷಣ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ನಡೆದ ನಿಮ್ಮ ಮತದ ಬಗ್ಗೆ ತಿಳಿಯಿರಿ ಕುರಿತ ಮೈ ಭಾರತ್- ವಿಕಸಿತ ಭಾರತ್ ಯುವ ಸಂವಾದ ಕಾರ್ಯಕ್ರಮವನ್ನು
ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯ ಸಿ.ಟಿ.ರವಿ
ಉದ್ಘಾಟಿಸಿದರು.

ಈ ವೇಳೆಯಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯ ಸಿ.ಟಿ.ರವಿ ಮಾತನಾಡಿ ದೇಶವನ್ನು ಮೊದಲ ಆದ್ಯತೆಯಾಗಿ ತೆಗೆದುಕೊಂಡು ಯಾವುದೇ ಜಾತಿ, ವ್ಯಕ್ತಿ, ಧರ್ಮಕ್ಕೆ ಮತ ನೀಡದೆ ವಿಚಾರ ಮಾಡಿ ನಂತರ ಸೂಕ್ತ ವ್ಯಕ್ತಿಗೆ ಮತ ಚಲಾಯಿಸಬೇಕು. ಸಂವಿಧಾನಿಕವಾಗಿ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಒಂದು ಕಾನೂನನ್ನು ಜಾರಿಗೆ ತರಲಾಗಿದೆ ಅದನ್ನು ಪ್ರತಿಯೊಬ್ಬರೂ ಗೌರವಿಸಬೇಕು. ತಾಂತ್ರಿಕತೆಯೊಂದಿಗೆ ದೇಶ ಮುಂದುವರಿಯಬೇಕು .ಎಲ್ಲಾ ಕಡೆ ನಾವೇ ನಮ್ಮ ಕೆಲಸಗಳನ್ನ ಮಾಡುವುದಕ್ಕೆ ಆಗುವುದಿಲ್ಲ, ಅದಕ್ಕಾಗಿ ಜನಪ್ರತಿನಿಧಿಗಳು ಅವಶ್ಯಕ ಹಾಗಾಗಿ ಮತಚಲಾಯಿಸಿ ಸೂಕ್ತ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು ಎಂದರು.

ಮತದಾನ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಶೇ. 80ರಷ್ಟು ಬಿ ಎಲ್ ಓ ಗಳು ಶಿಕ್ಷಕರೇ ಆಗಿದ್ದು ,ಬಹಳ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದ್ದಾರೆ ಆದರೆ ತೆಗೆದು ಹಾಕಿರುವ 99 ಲಕ್ಷ ಮತದಾರರು ವಿಚಾರವಾಗಿ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದ್ದಾರೆ. ವೈಯಕ್ತಿಕವಾಗಿ ಪರಿಶೀಲನೆ ಮಾಡಿದ ನನಗೆ ತಿಳಿದಿದೆ ,ನಾನು ಒಂದು ಚಾಲೆಂಜ್ ಮಾಡಲಿದ್ದೇನೆ 99 ಲಕ್ಷ ಮತದಾರರಲ್ಲಿ ಶೇ.ಹತ್ತರಷ್ಟು ಅರ್ಜಿಗಳನ್ನು ನಾವು ಬದುಕಿದ್ದೇವೆ ,ನಮ್ಮ ಅಸ್ತಿತ್ವ ಇದೆ ಎಂದು ಅರ್ಜಿ ಹಾಕಿಸಲಿ ನಾವು ಮತದಾನ ಚಲಾವಣೆಗೆ ಅವಕಾಶ ನೀಡಲು ಸಿದ್ದ ಎಂದು ಹೇಳಿದರು.

ಭಾರತ ದೇಶವನ್ನು ಸೋಲಲು ನೀವು ಬಯಸದೆ ಇದ್ದಲ್ಲಿ ಮೋದಿಯವರ ಕನಸಿನಂತೆ ಆತ್ಮನಿರ್ಭರ್ ನಿರ್ಮಾಣ ಮಾಡಲು ನಿಮ್ಮಂತಹ ಯುವಕರ ಸಹಕಾರ
ಬಹುಮುಖ್ಯ. ವಾಸ್ತವಿಕ ಸತ್ಯದ ಅನಾವರಣವಾಗಲು ನಾವೆಲ್ಲರೂ ಒಂದಾಗೋಣ ,ಸಿಜಿಪಿ(CJP) ಹೆಸರಲ್ಲಿ ಸುಳ್ಳುಗಳನ್ನು ಸತ್ಯ ಎಂಬಂತೆ ದೇಶದ ಜನತೆಯಲ್ಲಿ ಭ್ರಮೆ ಮೂಡಿಸುತ್ತಿರುವುದು ಕಾಂಗ್ರೆಸ್ ಪಕ್ಷ ,ಅಂತಹ ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಜ್ಞಾವಂತ ಮತದಾನದ ಮಹತ್ವ ಮತ್ತು ಜವಾಬ್ದಾರಿಗಳ ಕುರಿತು ಅರಿವು ಮೂಡಿಸಿ ನಂತರ ವಿದ್ಯಾರ್ಥಿಗಳಿಗೆ ಸಂವಿಧಾನದ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.

ಇದೇ ಸಂದರ್ಭದಲ್ಲಿ ದೇವನಹಳ್ಳಿಯ ಆಕಾಶ್ ಗ್ಲೋಬಲ್ ಕಾಲೇಜ್ ಆಫ್ ಮ್ಯಾನೇಜ್ ಮೆಂಟ್ ಅಂಡ್ ಸೈನ್ಸ್ ನ ಪ್ರಾಂಶುಪಾಲರು ಮತ್ತು ನಿರ್ದೇಶಕರು ಡಾ. ಚನ್ನವೀರ ಗೌಡ ಬಿ.ಎನ್, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ರಾಷ್ಟ್ರೀಯ ಯುವ ಐಕಾನ್ ವರುಣ್ ಆರ್ಯ, ಅಂತರಾಷ್ಟ್ರೀಯ ಬಾಡಿಬಿಲ್ಡಿಂಗ್ ಚಾಂಪಿಯನ್ ಶಶಿ ಕುಮಾರ್ ,ಕರ್ನಾಟಕ ವಲಯದ ರಾಷ್ಟ್ರೀಯ ಯುವ ಯೋಜನೆಯ ಸಮನ್ವಯಕಾರ ಡಾ. ವಿ. ಪ್ರಶಾಂತ, ಆಕಾಶ್ ಗ್ಲೋಬಲ್ ಕಾಲೇಜ್ ಆಫ್ ಮ್ಯಾನೇಜ್ ಮೆಂಟ್ ಅಂಡ್ ಸೈನ್ಸ್ ನ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಪ್ರೋ. ಖಲೀಲ್ ಉಲ್ಲಾ ಎಸ್. ಎ., ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಯುವ ಅಧಿಕಾರಿ ಡಾ. ಧೀರಜ್ ಕುಮಾರ್ ಬಿ. ಉಪ್ಪಿನ್ ಅವರು ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

Spread the love

Leave a Reply

Your email address will not be published. Required fields are marked *