ಚಂದ್ರಶೇಖರ್ ಅವರ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ ಮತ್ತು ಆರೋಗ್ಯ ಶಿಬಿರ
ದೇವನಹಳ್ಳಿ :ತಾಲೂಕಿನ ಅಣ್ಣೇಶ್ವರ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಅಣ್ಣೇಶ್ವರ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಎನ್.ಚಂದ್ರಶೇಖರ್ ಅವರ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ ಮತ್ತು ಆರೋಗ್ಯ ಶಿಬಿರ ಹಾಗೂ ಪಂಚಾಯತಿ ವತಿಯಿಂದ ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಹೊಲಿಗೆಗೆ ಅವಶ್ಯಕವಾದ ಸಾಮಗ್ರಿಗಳ ಕಿಟ್ಗಳು ವಿತರಣೆ ಮಾಡಲಾಯಿತು.
ಈ ವೇಳೆಯಲ್ಲಿ ಅಣ್ಣೇಶ್ವರ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಎನ್.ಚಂದ್ರಶೇಖರ್ ಮಾತನಾಡಿ
ಒಂದು ಜೀವವನ್ನು ಉಳಿಸಲು ರಕ್ತದಾನ ಮಾಡುವುದು ಶ್ರೇಷ್ಠವಾದ ಕಾರ್ಯ, ಸೂಕ್ತ ಸಮಯಕ್ಕೆ
ಅನುಗುಣವಾಗಿ ರಕ್ತದಾನ ಮಾಡುವುದರ ಮೂಲಕ ನಮ್ಮ ದೇಹದ ಆರೋಗ್ಯವನ್ನು ಸಹ ಸುಸ್ಥಿತಿಯಲ್ಲಿಡಬಹುದು ಹಾಗಾಗಿ ಪ್ರತಿಯೊಬ್ಬರೂ ರಕ್ತದಾನ ಮಾಡಿ ಎಂದು ಹೇಳಿದರು.
ಪ್ರತಿ ವರ್ಷದಂತೆ ಇಂದು ಸಹ ರಕ್ತದಾನ ಮತ್ತು ಆರೋಗ್ಯ ಶಿಬಿರ ,ಹೊಲಿಗೆ ತರಬೇತಿಗೆ ಅವಶ್ಯಕ ಕಿಟ್ ವಿತರಣೆ, ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ಹಂಚುತ್ತಾ ಬಂದಿದ್ದೇವೆ,ಇಂದಿನ ಯುವ ಜನಾಂಗವು ಸಹ ಆಡಂಬರದ ಜನ್ಮದಿನ ಆಚರಿಸದೇ, ಸಾಮಾಜಿಕ ಸೇವೆಯ ಆಚರಣೆಯಾಗಬೇಕು. ಜನ್ಮದಿನ ಬಂತೆಂದರೆ, ಪ್ರತಿಯೊಬ್ಬರಿಗೂ ಖುಷಿ, ಆ ಖುಷಿಯನ್ನು ಹಂಚಿ ಕೊಳ್ಳಲು ಒಬ್ಬಬ್ಬರೂ ಒಂದೊಂದು ರೀತಿಯಲ್ಲಿ ಆಚರಿಸಿಕೊಳ್ಳುತ್ತಾರೆ.ತಮ್ಮ ಹುಟ್ಟುಹಬ್ಬಕ್ಕೆ ಶುಭ ಕೋರಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸಿದರು.
ಹುಟ್ಟಿದ ವ್ಯಕ್ತಿ ಒಂದಲ್ಲಾ ಒಂದು ದಿನ ಕಣ್ಮರೆಯಾ ಗುತ್ತಾನೆ. ಬದುಕಿನ ಬಾಳ್ವೆಯಲ್ಲಿ ಸಮಾಜಕ್ಕೆ ಸಾರ್ಥಕ ಸೇವೆಯನ್ನು ನೀಡುವ ಹೆಗ್ಗುರತನ್ನು ನಿಲ್ಲಿಸುವಂತೆ ಪ್ರತಿ ಯೊಬ್ಬರು ಮೈಗೂಡಿಸಿಕೊಳ್ಳಬೇಕು. ತಮ್ಮ ಕೈಲಾದ ಸಹಾಯವನ್ನು ನಮ್ಮ ಸುತ್ತಮುತ್ತಲಿನ ಅಶಕ್ತರಿಗೆ,
ನೊಂದವರಿಗೆ ನೀಡುವಂತಾಗಬೇಕು. ಜನ್ಮದಿನ ಬರುತ್ತದೆ ಹೋಗುತ್ತದೆ ಆದರೆ ಅವರ ಮಾಡುವ ಸೇವೆಯೇ ಶಾಶ್ವತವಾಗಿರುತ್ತದೆ ಎಂದರು.
ತಾಲೂಕಿನ ಹಲವು ಮುಖಂಡರು ಎನ್. ಚಂದ್ರಶೇಖರ್ ಅವರಿಗೆ ಹುಟ್ಟುಹಬ್ಬದ ಪ್ರಯುಕ್ತ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷದ ಜಿಲ್ಲಾಧ್ಯಕ್ಷ ಪ್ರಸನ್ನ ಕುಮಾರ್,ಬಯಪ ಮಾಜಿ ಅಧ್ಯಕ್ಷ ವಿ. ಶಾಂತಕುಮಾರ್ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಸಿ .ಜಗನ್ನಾಥ್ ಮುಖಂಡರುಗಳಾದ ರಘು,ನಾಗೇಂದ್ರ ಸೇರಿದಂತೆ ತಾಲೂಕಿನ ಹಲವು ಮುಖಂಡರು ಮತ್ತು ಗ್ರಾಮಸ್ಥರು ಭಾಗಿಯಾಗಿದ್ದರು.
