ಬೆಂಗಳೂರು: ನಾಡಪ್ರಭು ಕೆಂಪೇಗೌಡ ಸೇವಾ ಟ್ರಸ್ಟ್ ವತಿಯಿಂದ ನಿರ್ಮಿಸಲಾಗಿರುವ ನಾಡಪ್ರಭು ಕೆಂಪೇಗೌಡರ ಕೋಟೆ, ಕೆಂಪೇಗೌಡರ ಕಂಚಿನ ಪ್ರತಿಮೆ ಹಾಗೂ ಕಾವೇರಿ ಮಾತೆಯ ಪ್ರತಿಮೆಯ ಲೋಕಾರ್ಪಣಾ ಸಮಾರಂಭವು ನವೆಂಬರ್ 20 ಮತ್ತು 21ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಯಿತು.

ನಾಡಪ್ರಭು ಕೆಂಪೇಗೌಡ ಸೇವಾ ಟ್ರಸ್ಟ್‌ನ ಅಧ್ಯಕ್ಷರಾದ ಎಚ್.ಎಸ್. ಸಿದ್ದೇಗೌಡರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ, ಮುಂಬರುವ ಲೋಕಾರ್ಪಣಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಾಗೂ ಅದ್ಧೂರಿಯಾಗಿ ನಡೆಸುವ ಕುರಿತು ಚರ್ಚಿಸಲಾಯಿತು. ಕಾರ್ಯಕ್ರಮದ ರೂಪುರೇಷೆ, ಸಿದ್ಧತೆಗಳು ಹಾಗೂ ವಿವಿಧ ಜವಾಬ್ದಾರಿಗಳ ನಿರ್ವಹಣೆ ಕುರಿತು ಸಭೆಯಲ್ಲಿ ಸಮಾಲೋಚನೆ ನಡೆಸಲಾಯಿತು.

ಅಧ್ಯಕ್ಷರಾದ ಸಿದ್ದೇಗೌಡರು ಮಾತನಾಡಿ ಲಗ್ಗೆರೆಯಲ್ಲಿ ನಾಡಪ್ರಭು ಕೆಂಪೇಗೌಡ ಕೋಟೆ ಮತ್ತು ಕೆಂಪೇಗೌಡರ ಕಂಚಿನ ಪುತ್ತಳ್ಳಿ, ಕಾವೇರಿ ಮಾತೆಯ ಪುತ್ತಳಿ ನವಂಬರ್ 20 ರಿಂದ 21 ರವರೆಗೆ ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ಪರಮಪೂಜ್ಯ ಡಾ ನಿರ್ಮಲಾನಂದನಾಥ ಮಹಾಸ್ವಾಮೀಜಿಗಳು, ಪರಮಪೂಜ್ಯ ಜಗದ್ಗುರು ನಂಜಾವಧೂತ ಮಹಾ ಸ್ವಾಮೀಜಿಗಳು, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು, ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು, ಕೇಂದ್ರ ಸಚಿವರಾದ ಎಚ್ ಡಿ ಕುಮಾರಣ್ಣನವರು, ಡಿ.ಕೆ. ಸುರೇಶ್ ರವರು, ಸಚಿವರು, ಸಂಸದರು, ಶಾಸಕರು, ಎಲ್ಲ ಜನ ಪ್ರತಿನಿಧಿಗಳು , 25000 ಹೆಚ್ಚು ಕೆಂಪೇಗೌಡರ ಅಭಿಮಾನಿಗಳು ಬರಲಿದ್ದು ಇದು ಐತಿಹಾಸಿಕ ಕಾರ್ಯಕ್ರಮವಾಗಿದೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಟ್ರಸ್ಟ್‌ನ ಗೌರವಾಧ್ಯಕ್ಷರಾದ ಅಂದಾನಪ್ಪ ಮತ್ತು ಮುನಿಗಂಗಪ್ಪ, ಅಧ್ಯಕ್ಷರಾದ ಎಚ್.ಎಸ್. ಸಿದ್ದೇಗೌಡ, ಉಪಾಧ್ಯಕ್ಷರಾದ ಎಂ. ಬೈರಪ್ಪ, ಚಾಮರಾಜು ಮತ್ತು ರಮೇಶ್, ಪ್ರಧಾನ ಕಾರ್ಯದರ್ಶಿ ಬ್ಯಾಟರಾಯಪ್ಪ, ಕಾರ್ಯದರ್ಶಿ ಹನುಮಯ್ಯ, ಸಂಚಾಲಕರಾದ ಪಟೇಲ್ ದೇವರಾಜು, ಲಕ್ಷ್ಮಣ್, ಚಂದ್ರಶೇಖರ್, ಹರೀಶ್, ವೆಂಕಟೇಶ್ ಸೇರಿದಂತೆ ಟ್ರಸ್ಟ್‌ನ ಸರ್ವ ಸದಸ್ಯರು ಹಾಗೂ ನಾಡಪ್ರಭು ಕೆಂಪೇಗೌಡರ ಅಭಿಮಾನಿಗಳು ಭಾಗವಹಿಸಿದ್ದರು

Spread the love

Leave a Reply

Your email address will not be published. Required fields are marked *