ಯಳಂದೂರು: ತಾಲೂಕಿನ ಪ್ರಸಿದ್ದ ಯಾತ್ರಸ್ಥಳವಾಗಿರುವ ಬಿಳಿಗಿರಿರಂಗನಬೆಟ್ಟದಲ್ಲಿ ಮಂಗಳವಾರ ಸಂಭ್ರಮ ಸಡಗರಗಳಿಂದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಣೆ ಮಾಡಲಾಯಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾಲ್ಮೀಕಿರವರ ಭಾವಚಿತ್ರವನ್ನು ವಿವಿಧ ಕಲಾತಂಡಗಳೊAದಿಗೆ ರಥದ ಬೀದಿಯಿಂದ ಯರಕನಗದ್ದೆ ಕಾಲೋನಿವರೆಗೆ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು. ಗ್ರಾಪಂ ಮಾಜಿ ಅಧ್ಯಕ್ಷ ಪ್ರತೀಪ್ಕುಮಾರ್ ಮಾತನಾಡಿ, ಕಳೆದ ಮೂರು ವರ್ಷಗಳಿಂದಲೂ ಬಿಳಿಗಿರಿರಂಗನಬೆಟ್ಟದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ. ಮಹರ್ಷಿ ವಾಲ್ಮೀಕಿ ರಾಮಾಯಣದ ಮೂಲಕ ಜೀವನ ಸಾರಾಂಶವನ್ನು ನೀಡಿದ್ದಾರೆ. ಇಲ್ಲಿರುವ ಪ್ರತಿ ಪಾತ್ರಗಳೂ ಕೂಡ ಒಂದೊAದು ವಿಷಯವನ್ನು ನಮಗೆ ಕಲಿಸುತ್ತದೆ. ಇದರ ಸಾರವನ್ನು ಅರಿತುಕೊಂಡು ಬದುಕಿದರೆ, ಇದರ ಅನುಸರಣೆಯನ್ನು ಮಾಡಿದರೆ ಜೀವನವನ್ನು ಸುಖಮಯವಾಗಿಸಿಕೊಳ್ಳಬಹುದು. ಇಲ್ಲಿರುವ ತತ್ವಾದರ್ಶಗಳನ್ನು ಪಾಲಿಸಿದರೆ ನೆಮ್ಮದಿಯನ್ನು ಕಾಣಬಹುದು ಜಗತ್ತಿನ ಎಲ್ಲಾ ಸಮಸ್ಯೆಗಳಿಗೂ ಇದರಲ್ಲಿ ಪರಿಹಾರವಿದೆ ಇದರ ಅನುಸರಣೆಯನ್ನು ಮಾಡಬೇಕು ಎಂದು ಸಲಹೆ ನೀಡಿದರು.
ನಂತರ ರಾಜ್ಯಮಟ್ಟದ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತರಾದ ಕೇತಮ್ಮ, ಬಾಲಸುಬ್ರಹ್ಮಣ್ಯ ಗುರೂಜಿ, ಇತಿಹಾಸಕಾರ ಶ್ರೀನಿವಾಸ್, ಬಿಳಿಗಿರಿರಂಗನಬೆಟ್ಟದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುಂಬಳ್ಳಿ ರಾಜಣ್ಣ, ರವರನ್ನು ಸನ್ಮಾನಿಸಲಾಯಿತು. ಅಲ್ಲದೆ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಯಜಮಾನರಾದ ಎಚ್. ನಾಗೇಶ್, ಶ್ರೀನಿವಾಸ್, ನಾಗರಾಜು, ನಾಗೇಂದ್ರ, ಗ್ರಾಪಂ ಮಾಜಿ ಅಧ್ಯಕ್ಷ ಪ್ರತೀಪ್ಕುಮಾರ್, ಬಿ.ಆರ್. ರಂಗನಾಥ, ಶಂಕರ, ಬಿಳಿಗಿರಿ, ಪುಟ್ಟಮ್ಮ, ಕೃಷ್ಣವೇಣಿ, ಲೀಲಾ, ಮಮತಾ, ಮೀನಾಕ್ಷಿ ಸೇರಿದಂತೆ ಅನೇಕರು ಇದ್ದರು.
