ಯಳಂದೂರು: ಪಟ್ಟಣದ ಸೊಸೈಟಿ ಬೀದಿಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಭಾನುವಾರ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಕಸಾಪ ತಾಲೂಕು ಅಧ್ಯಕ್ಷ ಯರಿಯೂರು ನಾಗೇಂದ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿಯನ್ನು ಕಟ್ಟುವ ಕೆಲಸದಲ್ಲಿ ಸದಾ ಮುಂದಿದೆ. ನಮ್ಮ ಭಾಷೆಯನ್ನು ಪ್ರೀತಿಸುವ, ದಿನನಿತ್ಯ ಇದನ್ನು ಬಳಸುವ ಪರಿಪಾಠವನ್ನು ಎಲ್ಲರೂ ಬೆಳಸಿಕೊಳ್ಳಬೇಕು. ಪರಭಾಷಿಕರು ತಮ್ಮ ಮನೆಯಲ್ಲಿ ತಮ್ಮ ಮಾತೃಭಾಷೆಯನ್ನು ಬಳಸಬೇಕು. ವ್ಯಾವಹಾರಿಕವಾಗಿ ಕನ್ನಡ ಭಾಷೆಯನ್ನೇ ಬಳಸಬೇಕು. ನಮ್ಮ ಭಾಷೆ, ನೆಲ, ಜಲಕ್ಕೆ ತೊಂದರೆಯಾದರೆ ಎಲ್ಲರೂ ಒಗ್ಗಟ್ಟಿನಿಂದ ಹೋರಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲೇ ಕನ್ನಡ ಭಾಷೆಯ ಬಳಕೆ, ಇದನ್ನು ಕಲಿಸುವ ಬಗ್ಗೆ ಶಿಕ್ಷಕರು ಪ್ರಮಾಣಿಕ ಪ್ರಯತ್ನವನ್ನು ಮಾಡಬೇಕು. ಆಂಗ್ಲ ವ್ಯಾಮೋಹಕ್ಕೆ ಹೆಚ್ಚಿನ ಪೋಷಕರು ತಮ್ಮ ಮಕ್ಕಳಿಗೆ ಕನ್ನಡ ಕಲಿಕೆಯಿಂದ ದೂರ ಇಡುತ್ತಾರೆ. ಈ ಮನೋಭಾವನೆ ದೂರವಾಗಬೇಕು, ನಮ್ಮ ಭಾಷೆಗೆ ಪ್ರಥಮ ಆದ್ಯತೆಯನ್ನು ನೀಡಬೇಕು ಎಂದು ಸಲಹೆ ನೀಡಿದರು.
ಕಸಾಪ ಪ್ರಧಾನ ಕಾರ್ಯದರ್ಶಿ ಡಿಪಿ.ಮಹೇಶ್, ಕೋಶಾಧ್ಯಕ್ಷ ಫೈರೋಜ್ ಖಾನ್, ಪಪಂ ಮಾಜಿ ಸದಸ್ಯ ಲಿಂಗರಾಜಮೂರ್ತಿ, ಜೋಗಿ ಸಿದ್ಧಯ್ಯ, ಸರ್ಕಾರಿ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕಿ ಪುಟ್ಟಸಿದ್ದಮ್ಮ ಶಿಕ್ಷಕ ನಂಜುAಡಸ್ವಾಮಿ, ಜಯಲಕ್ಷಿö್ಮ ಸಹ ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಇದ್ದರು.
