ತಾಂಡವಪುರ: ಮೈಸೂರಿನಲ್ಲಿ ನವೆಂಬರ್ 26ರಂದು ರಾಜ್ಯ ಮಟ್ಟದ ಸಂವಿಧಾನ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಹಾಗೂ ಯಶಸ್ವಿಯಾಗಿ ಆಯೋಜಿಸುವ ನಿಟ್ಟಿನಲ್ಲಿ ಇಂದು ಬೆಂಗಳೂರಿನ ಕಾವೇರಿ ಗೃಹ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸಚಿವರು ಶಾಸಕರುಗಳು ಭಾಗಿಯಾಗಿ ತಮ್ಮ ತಮ್ಮ ಸಲಹೆಗಳನ್ನು ಸಿದ್ದರಾಮಯ್ಯನವರಿಗೆ ನೀಡಿದರು.
ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರು ಸಭೆಯಲ್ಲಿ ಮಾತನಾಡಿ ನವಂಬರ್ 26ರಂದು ರಾಜ್ಯಮಟ್ಟದ ಸಂವಿಧಾನ ದಿನವನ್ನಾಗಿ ಆಚರಿಸಲಾಗುತ್ತಿದ್ದು ಅಂದು ಸಂವಿಧಾನ ದಿನವನ್ನು ಬಹಳ ಅರ್ಥಪೂರ್ಣವಾಗಿ ದೊಡ್ಡಮಟ್ಟದಲ್ಲಿ ಆಚರಿಸಬೇಕು ಅದಕ್ಕೆ ಸಚಿವರು ಮತ್ತು ಶಾಸಕರುಗಳು ತಮ್ಮ ತಮ್ಮ ಸಲಹೆ ಸೂಚನೆಗಳನ್ನು ನೀಡಿದ್ದೀರಿ ನಿಮ್ಮ ಸಲಹೆ ಸೂಚನೆಯನ್ನು ಸ್ವೀಕರಿಸಿದ ಸಿದ್ದರಾಮಯ್ಯ ಅವರು ನವೆಂಬರ್ 26ರಂದು ಬಹಳ ದೊಡ್ಡ ಮಟ್ಟದಲ್ಲಿ ಸಂವಿಧಾನ ದಿನವನ್ನು ಆಚರಿಸಬೇಕು ಅದಕ್ಕೆ ಬೇಕಾಗುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಈ ಪೂರ್ವಭಾವಿ ಸಭೆಯಲ್ಲಿ ಸಿದ್ದರಾಮಯ್ಯನವರು ತಿಳಿಸಿದರು ಹಾಗೂ ಸಿದ್ದರಾಮಯ್ಯನವರ ಮಾರ್ಗದರ್ಶನದಲ್ಲಿ ನಡೆದ ಸಭೆಯಲ್ಲಿ, ಭಾರತದ ಸಂವಿಧಾನದ ಆಶಯಗಳು, ಮೌಲ್ಯಗಳು ಮತ್ತು ಪ್ರಜಾಪ್ರಭುತ್ವದ ಮಹತ್ವವನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯಕ್ರಮದ ರೂಪುರೇಷೆಗಳು ಹಾಗೂ ಸಿದ್ಧತೆಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿಸಚಿವರಾದ ಡಾ, ಎಸ್ ಯತೀಂದ್ರ ಸಿದ್ದರಾಮಯ್ಯನವರು, ಕೆ.ಎಚ್. ಮುನಿಯಪ್ಪರವರು, ಯು.ಟಿ. ಖಾದರ್ ಪಿ.ಎಂ. ನರೇಂದ್ರಸ್ವಾಮಿರವರು, ಸಿ ಪುಟ್ಟರಂಗಶೆಟ್ಟಿ , ಎನ್. ಚೆಲುವರಾಯಸ್ವಾಮಿರವರು ಪಿರಿಯ ಪತ್ರಕರ್ತರು ಹಾಗೂ ವಿಧಾನಪರಿಷತ್ ಸದಸ್ಯರಾದ ಕೆ ಶಿವಕುಮಾರ್ ಸೇರಿದಂತೆ ಮೈಸೂರು ಭಾಗದ ಶಾಸಕರು ಹಾಗೂ ಹಿರಿಯ ಮುಖಂಡರು ಈ ಪೂರ್ವಭಾವಿ ಸಭೆಯಲ್ಲಿ ಭಾಗಿಯಾಗಿದ್ದರು.
ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬ ನಾಗರಿಕನಿಗೂ ತಲುಪಿಸಿ, ಸಮಾನತೆ, ನ್ಯಾಯ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಮೌಲ್ಯಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಮಹತ್ವದ ವೇದಿಕೆಯಾಗಲಿದೆ. ಸಂವಿಧಾನದ ವಿಚಾರಧಾರೆಗಳ ಅರಿವು ಈ ಸಂವಿಧಾನ ದಿನಾಚರಣೆಯಲ್ಲಿ ನಡೆಯಲಿದೆ.
