ತಾಂಡವಪುರ: ಆಯುಧ ಪೂಜೆ ವಿಜಯದಶಮಿಯ ಹಾಗೂ ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಮೈಸೂರು ತಾಲೂಕು ಕಡಕೋಳ ಗ್ರಾಮದ ಕಾಳಮ್ಮ ಬೀರೇಶ್ವರ ಸ್ವಾಮಿ ಟ್ರಸ್ಟಿನ ವತಿಯಿಂದ ಕಡಕೋಳ ಬಿಕೆಟಿ ಪಬ್ಲಿಕ್ ಶಾಲೆಯ ವನದಲ್ಲಿ ಶಾಲೆಯ ಸಂಸ್ಥಾಪಕ ಬಿ ನಾಗರಾಜ್ ರವರ ನೇತೃತದಲ್ಲಿ ಕಡಕೋಳ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಬರುವ ಎಲ್ಲಾ ಪೌರಕಾರ್ಮಿಕರಿಗೆ ಸಮವಸ್ತ್ರ ಸಿಹಿ ವಿತರಿಸಿ ಸನ್ಮಾನಿಸಿ ಗೌರವಿಸಿದರು.
ಸನ್ಮಾನಿಸಿ ಗೌರವಿಸಿ ಮಾತನಾಡಿದ ಬಿಕೆಟಿ ಪಬ್ಲಿಕ್ ಶಾಲೆಯ ಸಂಸ್ಥಾಪಕ ಹಾಗೂ ಕಾಳಮ್ಮ ಬೀರೇಶ್ವರ ಸ್ವಾಮಿ ಟ್ರಸ್ಟಿನ ಅಧ್ಯಕ್ಷರಾದ ಬಿ ನಾಗರಾಜ್ ರವರು ಪೌರಕಾರ್ಮಿಕರು ನಿಮ್ಮಂತೆ ಅವರು ಕೂಡ ಅವರು ನಮ್ಮ ಗ್ರಾಮಗಳ ಸ್ವಚ್ಛತೆ ಕಾರ್ಯದಲ್ಲಿ ತೊಡಗಿ ಸ್ವಚ್ಛತೆ ಮಾಡುವ ಮೂಲಕ ಗ್ರಾಮಗಳಲ್ಲಿ ಬರುವಂಥ ವೈರಾಣು ರೋಗಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದಾರೆ ಅವರಿಗೆ ನಮ್ಮ ಸಂಸ್ಥೆ ವತಿಯಿಂದ ಸಣ್ಣದಾಗಿ ಒಂದು ಗೌರವ ಸಮರ್ಪಣೆಯನ್ನು ಮಾಡುತ್ತಿದ್ದೇವೆ ಅವರು ಕೂಡ ನಮ್ಮಂತೆ ನಾವು ಕೂಡ ಅವರಂತೆ ಎಂದು ಭಾವಿಸಿ ಅವರಿಗೆ ನಾವು ಇವತ್ತು ಸನ್ಮಾನಿಸಿ ಗೌರವಿಸಿದ್ದೇವೆ ಎಂದು ಬಿ ನಾಗರಾಜ್ ರವರು ಹೇಳಿದರು ಪೌರಕಾರ್ಮಿಕರ ಸಂಘದ ಅಧ್ಯಕ್ಷ ಆನಂದ್ ರವರು ಮಾತನಾಡಿ ಬಿಕೆಟಿ ಪಬ್ಲಿಕ್ ಶಾಲೆಯ ಸಂಸ್ಥಾಪಕರಾದ ನಾಗರಾಜ್ ರವರು ಮತ್ತು ಅವರ ತಂಡದವರು ಪ್ರತಿವರ್ಷನೂ ವಿಜಯದಶಮಿ ಹಬ್ಬದ ಪ್ರಯುಕ್ತ ನಮ್ಮ ಪೌರಕಾರ್ಮಿಕರಿಗೆ ಅವರ ಕೈಲಾದ ಮಟ್ಟಿಗೆ ಸಮಸ್ತ ನೀಡಿ ಸಿಹಿ ವಿತರಿಸಿ ಸನ್ಮಾನಿಸಿ ವಿನೂತನವಾಗಿ ವಿಶೇಷವಾಗಿ ನಮ್ಮ ಪೌರಕಾರ್ಮಿಕರನ್ನು ಗೌರವ ಮತ್ತು ಸನ್ಮಾನಿಸುತ್ತಿರುವುದಕ್ಕೆ ನಾವು ಅವರಿಗೆ ಆಭಾರಿಯಾಗಿದ್ದೇವೆ ಎಂದು ತಿಳಿಸಿದರು.
ಇದೆ ವೇಳೆ ಆಯುಧ ಪೂಜೆ ಪ್ರಯತ್ನ ಶಾಲೆಯ ಶಾಲಾ ಮಕ್ಕಳ ವಾಹನಗಳಿಗೆ ಪೂಜೆ ಸಲ್ಲಿಸಿ ಶಾಲೆಯ ಶಿಕ್ಷಕರು ಸಿಬ್ಬಂದಿ ವರ್ಗದವರಿಗೆ ಸಿಹಿತರಿಸಿದರು.
ಈ ಸಂದರ್ಭದಲ್ಲಿ ಬಿ ಕೆ ಟಿ ಪಬ್ಲಿಕ್ ಶಾಲೆ, ಹಾಗೂ ಬೀರೇಶ್ವರ ಸ್ವಾಮಿ ಮತ್ತು ಕಾಳಮ್ಮ ಟ್ರಸ್ಟಿನ ಅಧ್ಯಕ್ಷರು, ಆದ ಬಿ ನಾಗರಾಜ್ ರವರು ಹಾಗೂ ನಂಜುಂಡೇಗೌಡ, ಕೃಷ್ಣಪ್ಪ, ಕೆಟಿ ಶಿವಣ್ಣ, ಸಿದ್ದರಾಮೇಗೌಡ, ಕೆಂಪೇಗೌಡ, ಖಜಾಂಚಿ ಈರಪ್ಪ, ಖಜಾಂಚಿ ಕಾಳಪ್ಪ, ಈರಪ್ಪ, ಮಾಲೆಗೌಡರು, ಸಿದ್ದಪ್ಪ, ಚಂದ್ರಶೇಖರ್, ಮಹದೇವು, ರಾಕೇಶ್ ಕುಮಾರ್, ಸಿದ್ದರಾಜು, ವಿಶ್ವನಾಥ್, ರವೀಂದ್ರ, ಚಿಕ್ಕ ಪುಟ್ಟ, ಶಿವಬೀರ, ದೊಡ್ಡ ರಾಮೇಗೌಡ, ಮಂಜುನಾಥ್, ಹುಚ್ಚೇಗೌಡ, ಶಿವಕುಮಾರ, ಹುಚ್ಚಪ್ಪ, ರಾಜು, ಜಯಕುಮಾರ್, ಜಯಪ್ಪ, ಮಹದೇವು ಸೋಮಲಿಂಗ, ಚನ್ನಬಸವ, ಚಿಕ್ಕ ಬೀರಪ್ಪ, ಮುಖ್ಯ ಶಿಕ್ಷಕರಾದ ಕುಮಾರಸ್ವಾಮಿ, ಹಾಗೂ ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ಸನ್ಮಾನ ಸ್ವೀಕರಿಸಿದ ಕಡಕೋಳ ಪಟ್ಟಣ ಪಂಚಾಯಿತಿಯ ಪೌರಕಾರ್ಮಿಕರು ಭಾಗವಹಿಸಿದ್ದರು.
