ಡೇರಿ ಕಾರ್ಯದರ್ಶಿ ಮತ್ತು ಅಧ್ಯಕ್ಷರ ಮನೆ ಮುಂದೆ ಹಾಲು ಸುರಿದು ಪ್ರತಿಭಟನೆ

ಡೇರಿ ಕಾರ್ಯದರ್ಶಿ ಮತ್ತು ಅಧ್ಯಕ್ಷರ ಮನೆ ಮುಂದೆ ಹಾಲು ಸುರಿದು ಪ್ರತಿಭಟನೆ

ಕೃಷ್ಣರಾಜಪೇಟೆ: ತಾಲ್ಲೂಕಿನ ಐಕನಹಳ್ಳಿ ಕೊಪ್ಪಲು ಗ್ರಾಮದ ಹಾಲು ಉತ್ಪಾದಕ ಮಹಿಳಾ ಸಹಕಾರ ಸಂಘದಲ್ಲಿ ಕಾರ್ಯದರ್ಶಿ ಶ್ರೀಮತಿ ಯಶೋಧ ದೇವೇಗೌಡ ರವರು  ಲಕ್ಷಾಂತರ ರೂಪಾಯಿ ಅಗರಣ  ಮಾಡಿದ್ದಾರೆ ಎಂದು ಆರೋಪ ಇದ್ದು ಕಾರ್ಯದರ್ಶಿಯಾಗಿ ಕಾರ್ಯನಿರ್ವಯಿಸುತ್ತಿದ್ದ ಶ್ರೀಮತಿ ಯಶೋಧ ದೇವೇಗೌಡ್ರು ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಕಳೆದ ಮೂರು ನಾಲ್ಕು ದಿನದಿಂದ ಕಾರ್ಯದರ್ಶಿ ಡೇರಿಗೆ ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು,
ಸಂಘದ ಹಾಲಿ ಅಧ್ಯಕ್ಷರಾಗಿರುವ ಶ್ರೀಮತಿ ರಾಧ ಕುಮಾರ್ ರವರು ಕಾರ್ಯದರ್ಶಿರವರಿಗೆ ಸ್ವಂತ ಸಂಬಂಧಿಕರಾಗಿದ್ದು ಹಗರಣ ಬಗ್ಗೆ ಈಗಾಗಲೇ ಸಂಘದ ಷೇರುದಾರು ದೂರು ನೀಡಿದ್ದಾರೆ ಆದರೆ ಸಂಘದ ನಿರ್ದೇಶಕರಿಗೆ ತಿಳಿಯದಂತೆ ಏಕಾ ಏಕಿ ರಾಜಿನಾಮೆ ಪಡೆದು ಅಂಗಿಕಾರ ಮಾಡಿದ್ದಾರೆ ಎಂದು  ಅಧ್ಯಕ್ಷೆ, ಮತ್ತು ಕಾರ್ಯದರ್ಶಿಯ ಮನೆಗೆ ಮುತ್ತಿಗೆ ಹಾಕಿ ರೈತರು ತಾವು ತಂದಿದ್ದ 450 ಲೀಟರ್ ಹಾಲನ್ನು ಅವರ ಮನೆಯ ಮುಂದೆ ನೆಲಕ್ಕೆ  ಸುರಿದು ಪ್ರತಿಭಟನೆ ನಡೆಸಿದರು,
ಕಳೆದ ನಾಲ್ಕು ದಿನದಿಂದ ಡೇರಿಯಲ್ಲಿ  ಕಾರ್ಯದರ್ಶಿ ಬಾರದ ಹಿನ್ನೆಲೆ  ಹಾಲಿನ ಕಂಪ್ಯೂಟರ್ ಬಿಲ್ ನೀಡುತ್ತಿಲ್ಲ  ರೈತರು ಎಷ್ಟು ಲೀಟರ್  ಹಾಲು ಹಾಕಿದ್ದಾರೆ  ಒಂದು‌ ಲೀಟರ್ ಗೆ ಎಷ್ಟು ಹಣ  ಎಂದು ಸರಿಯಾದ ಮಾಹಿತಿ ಸಿಗುತ್ತಿಲ್ಲ ಅಂದು ಆಕ್ರೋಷ ವ್ಯಕ್ತಪಡಿಸಿದರು,

ಕಾರ್ಯದರ್ಶಿ ಹೇಳಿಕೆ: ಸದ್ಯ ಸಂಘದ ಕಾರ್ಯದರ್ಶಿ ಯಶೋಧ ಆರೋಗ್ಯದ ಸಮಸ್ಯೆ ಇಂದ 13-7-25 ರಂದು ರಾಜೀನಾಮೆಯನ್ನು ಸಂಘದ ಆಡಳಿತ ಮಂಡಳಿಗೆ ನೀಡಿದ್ದು  31-08-25 ರಾಜೀನಾಮೆಯನ್ನು  ಅಂಗಿಕಾರ ಮಾಡಲಾಗಿದೆ ನನ್ನ ಮೇಲೆ ಇಲ್ಲ ಸಲ್ಲದ ಸುಳ್ಳು ಆರೋಪ ಮಾಡುತ್ತಿದ್ದಾರೆ ಅದರೇ ಇಲಾಖೆಯಿಂದ ವಿಚಾರಣೆ ನೆಡೆದರೆ ನಾನು ತನಿಖೆಯಲ್ಲಿ ಭಾಗಿಯಾಗುತ್ತೇನೆ ಮತ್ತು ನಮ್ಮ ಸಂಘದ ಯಾವ ಸದಸ್ಯರು ಇದುವರೆಗೂ ಸಂಬಂಧಿಸಿದ ಇಲಾಖೆಯಾಗಲಿ ಅಥವಾ ನಮ್ಮ ಸಂಘಕ್ಕಾಗಲಿ ಲಿಖಿತವಾಗಿ ಯಾವುದೇ ದೂರು ನೀಡಿರುವುದಿಲ್ಲ ಎಂದು‌ ಮಾದ್ಯಮಕ್ಕೆ ತಿಳಿಸಿದ್ದರು, ಈ ಸಂದರ್ಭದಲ್ಲಿ ಮುಖಂಡರಾದ ಮೂರ್ತಿ, ಕಂತರಾಜು, ನಾಗರಾಜು, ಪ್ರದೀಪ್, ಜಯಮ್ಮ, ಗುಂಡ, ಮಂಜ್ಜಣ್ಣ, ಆನಂದ,  ರವಿ, ವೆಂಕಟೇಶ, ನಾಗೇಶ್, ಮಂಜಣ್ಣ, ದಿವಾಕರ, ಪ್ರಸನ್ನ, ದೀಲೀಪ್, ಪ್ರಕಾಶ್, ಸಾಗರ್,  ಸೇರಿದಂತೆ ಮತ್ತಿತ್ತರು ಇದ್ದರು.
Spread the love

Leave a Reply

Your email address will not be published. Required fields are marked *