ಬೆಂಗಳೂರು: ಪ್ರತಿಯೊಬ್ಬ ಯುವ ಜನರು ದೇಶವನ್ನು ಕಟ್ಟುವ ವೀರ ಸೇನಾನಿಗಾಳಗಬೇಕು ರಾಷ್ಟ್ರ ದ ಗೌರವ ಕಾಪಾಡಬೇಕು ಎಂದು ರಾಜ್ಯ ಪ್ರಶಸ್ತಿ ವಿಜೇತ ರಾಜ್ಯ ಯುವ ಜನ ಸಭಾ ಅಧ್ಯಕ್ಷ ಆನಂದ್ ಸಿ ತಿರುಮಲ ಹೇಳಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ತಮ್ಮನಾಯಕನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ 79ನೇ ಸ್ವತಂತ್ರ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿ ಬ್ರಿಟಿಷರು ಸಾಂಬಾರು ಪದಾರ್ಥಗಳ ವ್ಯಪಾರಕ್ಕಾಗಿ ಭಾರತ ದೇಶಕ್ಕೆ ಬಂದು ತಮ್ಮ ಅಸ್ತಿತ್ವ ವನ್ನು ರಾಜಕೀಯವಾಗಿ ಬೆಳಸಿಕೊಂಡು ಇಡೀ ದೇಶವನ್ನು ತಮ್ಮ ಹಿಡಿತದಲ್ಲಿ ತೆಗೆದುಕೊಂಡು ಸುಮಾರು ವರ್ಷಗಳ ಕಾಲ ದೇಶವನ್ನು ಆಳ್ವಿಕೆ ಮಾಡಿ ಸಂಪತ್ತು ಲೂಟಿ ಮಾಡಿದ್ದರು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಭಾರತದ ಉದ್ದಗಲಕು ಸ್ವಾತಂತ್ರ ಸಂಗ್ರಾಮ ದ ಹೋರಾಟ ಪಲವಾಗಿ ಅನೇಕ ವೀರ ಯೋಧರು ಬಲಿದಾನ ಮಾಡಿ ಇಂದು ದೇಶಕ್ಕೆ ಸ್ವತಂತ್ರ ದಿನವನ್ನು ಬಹಳ ಸಂಭ್ರಮ ದಿಂದ ಆಚರಣೆ ಮಾಡುತ್ತಿರುವುದು ವಿಶೇಷ ವಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯತ್ ಸದಸ್ಯರು ವಕೀಲರು ಆದ ಶ್ರೀಮತಿ ಡಿ ರೇಣುಕಾ ಮಾತನಾಡಿ ಇಂದಿನ ಯುವ ಜನತೆ ದೇಶದ ಆಸ್ತಿ ನಮ್ಮ ಭಾರತ ದೇಶಕ್ಕೆ ಬ್ರಿಟಿಷರಿಂದ ಸ್ವತಂತ್ರ ಸಿಕ್ಕಿ 79ವರ್ಷ ಆಚರಣೆ ಯಲ್ಲಿ ಇದ್ದೇವೆ ಆಧುನಿಕ ಜಗತ್ತು ಬಹಳ ವೇಗವಾಗಿ ಬೆಳೆಯುತ್ತಿದೆ ಮನುಷ್ಯನ ರೂಪದಲ್ಲಿ ರೋಬೋಟ್ ಗಳು ಜಗತ್ತಿಗೆ ಕಾಲು ಇಡುತ್ತಿವೆ ನಾವು ಎಷ್ಟೇ ಮುಂದುವರೆದರು ಸಹ ಮಾನವೀಯತೆ ಕಳೆದುಕೊಳಬಾರದು ಈ ನಿಟ್ಟಿನಲ್ಲಿ ಒಳ್ಳೆ ನಾಗರೀಕ ರಾಗಿ ದೇಶದ ಸಾರ್ವಭೌಮ ವನ್ನು ಕಾಪಾಡಬೇಕು ಎಂದು ಹೇಳಿದರು,
ಸರ್ಕಾರಿ ಶಾಲಾ ಮುಖ್ಯ ಶಿಕ್ಷಕ ಮಾಜರ್ ಖಾನ್ ಮಾತನಾಡಿ ಒಬ್ಬರೇ ಅತಿಥಿ ಶಿಕ್ಷಕರ ಸಹಕಾರ ದಿಂದ ನನ್ನ ಅವಧಿಯಲ್ಲಿ ಶಾಲೆಯಲ್ಲಿ ಬಹಳ ಬದಲಾವಣೆ ತಂದಿದ್ದೇವೆ ಪಠ್ಯ ದ ಜೊತೆಗೆ ವಿಶೇಷ ಕೌಶಲ್ಯ ತರಬೇತಿ ನೀಡುತ್ತಿದ್ದೇವೆ ಮಕ್ಕಳನ್ನು ಇತರೇ ಕಲಿಕಾ ಚಟುವಟಿಕೆ ಯಲ್ಲಿ ತೊಡಗಿಸಿ ಒಳೆ ವಿದ್ಯಾರ್ಥಿಗಳಬೇಕು ಇವತ್ತು ಸ್ವತಂತ್ರ ದಿನಾಚರಣೆ ಪ್ರಯುಕ್ತ ರಾಜ್ಯ ಪ್ರಶಸ್ತಿ ವಿಜೇತರು ಆನಂದ್ ಸಿ ತಿರುಮಲ ಮತ್ತು ಗ್ರಾಮ ದ ಯುವಕರು ಮಕ್ಕಳಿಗೆ ಬ್ಯಾಗ್ ನೋಟ್ ಬುಕ್ಸ್ ಕಲಿಕಾ ಸಮಗ್ರಿ ಗಳನ್ನು ತಂದು ಕೊಟ್ಟರು ಗ್ರಾಮದ ಜನತೆಗೆ ಅಭಿನಂದನೆಗಳು ತಿಳಿಸುತ್ತೇನೆ ನಮ್ಮಗೆ ಈ ವಿಶೇಷ ದಿನ ಬಹಳ ಆನಂದ ತಂದಿದ್ದೆ ಎಂದು ಹೇಳಿದರು.
ಇನ್ನು ಕಾರ್ಯಕ್ರಮದಲ್ಲಿ ಶ್ರೀಮತಿ ರೇಣುಕಾ, ವಕೀಲರು, ಸದಸ್ಯರು ಇಂಡ್ಲವಾಡಿ ಗ್ರಾಮ ಪಂಚಾಯತ್ ,ಆನಂದ್ ಸಿ ತಿರುಮಲ ರಾಜ್ಯ ಪ್ರಶಸ್ತಿ ವಿಜೇತರು,ಪತ್ರಕರ್ತರು, ರಾಜ್ಯ ಯುವ ಜನ ಸಭಾ ಅಧ್ಯಕ್ಷರು, ಬಿ ಬಸವರಾಜು
ಸದಸ್ಯರು, ಮುನಿರಾಜು ನಿರ್ದೇಶಕರು ಸರ್ಕಾರಿ ನ್ಯಾಯ ಬೆಲೆ ಅಂಗಡಿ, ಯುವ ಮುಖಂಡರಾದ ಆರ್ ಡಿ ವಿಶ್ವನಾಥ್, ಎಸ್, ಪ್ರಕಾಶ್, ಚಂದ್ರಪ್ಪ, ಸಿ ಫೀಲ್ಡ್ ಆಫೀಸ್ರ್ ರ್ ಪಂಜಾಬ್ ನ್ಯಾಷನಲ್ ಬ್ಯಾಂಕ್,ಆನಂದ್ ಬಾಬು, ಟಿ ಆರ್ ಸುನೀಲ್ ಕುಮಾರ್, ಕಾಶೀನಾಥ್ ಮೋಹನ್ ಕುಮಾರ್ ಅಧ್ಯಾಪಕರು, ಶಿವು, ಪ್ರಕಾಶ್, ಮುನಿರಾಜು, ಎಸ್ ಡಿ ಎಂ ಸಿ ಅಧ್ಯಕ್ಷರು, ಶಾಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.