ಪೋರ್ಚುಗಲ್‌ನಲ್ಲಿ ‘ಗತವೈಭವ’ ಶೂಟಿಂಗ್ ಮುಗಿಸಿದ ಸಿಂಪಲ್ ಸುನಿ…ಈ ವರ್ಷವೇ ತೆರೆಗೆ ಬರಲಿದೆ ದುಷ್ಯಂತ್-ಆಶಿಕಾ ಜೋಡಿ ಸಿನಿಮಾ

ಪೋರ್ಚುಗಲ್‌ನಲ್ಲಿ ‘ಗತವೈಭವ’ ಶೂಟಿಂಗ್ ಮುಗಿಸಿದ ಸಿಂಪಲ್ ಸುನಿ…ಈ ವರ್ಷವೇ ತೆರೆಗೆ ಬರಲಿದೆ ದುಷ್ಯಂತ್-ಆಶಿಕಾ ಜೋಡಿ ಸಿನಿಮಾ

ಸಿಂಪಲ್ ಸುನಿ ಸಾರಥ್ಯದ ‘ಗತವೈಭವ’ ಚಿತ್ರೀಕರಣ ಮುಕ್ತಾಯ..ದುಷ್ಯಂತ್-ಆಶಿಕಾ ಜೋಡಿ ಸಿನಿಮಾ ಯಾವಾಗ ರಿಲೀಸ್?

ದುಷ್ಯಂತ್-ಆಶಿಕಾ ನಟನೆಯ ‘ಗತವೈಭವ’ ಶೂಟಿಂಗ್ ಮುಕ್ತಾಯ..ಈ ವರ್ಷದ ಮೊದಲಾರ್ಧದಲ್ಲಿ ಬಿಡುಗಡೆಯಾಗ್ತಿದೆ ಸಿಂಪಲ್ ಸುನಿ ಸಿನಿಮಾ

ಸ್ಯಾಂಡಲ್ ವುಡ್ ಬೆಳ್ಳಿಪರದೆಯಲ್ಲಿ ಗತವೈಭವ ಕಥೆಯನ್ನು ಹರವಿಡೋದಿಕ್ಕೆ ಟ್ಯಾಲೆಂಡ್ ಡೈರೆಕ್ಟರ್ ಸಿಂಪಲ್ ಸುನಿ ರೆಡಿಯಾಗಿದ್ದಾರೆ. ಸುನಿ ಭತ್ತಳಿಕೆಯಿಂದ ಬರ್ತಿರುವ ಬಹುನಿರೀಕ್ಷಿತ ಚಿತ್ರ ಗತವೈಭವ ಚಿತ್ರೀಕರಣ ಮುಕ್ತಾಯಗೊಂಡಿದೆ. ಪೋರ್ಚುಗಲ್ ನಲ್ಲಿ ಹಾಗು ಮುಂತಾದೆಡೆ ಯಶಸ್ವಿಯಾಗಿ 100 ಕಾಲ್ ಶೀಟ್ ಗಳಲ್ಲಿ ಶೂಟಿಂಗ್ ಮುಗಿಸಲಾಗಿದೆ. ನಾಯಕ ದುಷ್ಯಂತ್ ಹಾಗೂ ಆಶಿಕಾ ರಂಗನಾಥ್ ಚಿತ್ರೀಕರಣ ಅನುಭವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದೇ ವರ್ಷದ ಮೊದಲಾರ್ಧದಲ್ಲಿ ಗತವೈಭವ ಸಿನಿಮಾವನ್ನು ತೆರೆಗೆ ಬರಲಿದೆ ಎಂದು ಮಾಹಿತಿ ನೀಡಿದ್ದಾರೆ.

ಸಿಂಪಲ್ ಸುನಿ ಎಲ್ಲಾ ಪ್ರಕಾರದ ಸಿನಿಮಾಗೂ ಕೈ ಹಾಕಿದ್ದಾರೆ. ಕಾಮಿಡಿ, ಸಿರೀಯಸ್, ಫ್ಯಾಂಟಸಿ, ಹಾರರ್ ಹೀಗೆ ಭಿನ್ನ-ವಿಭಿನ್ನ ಕಥೆಯನ್ನು ಹೊತ್ತುತಂದಿದ್ದಾರೆ. ಲವ್‌ಸ್ಟೋರಿಯನ್ನು ಸೈಂಟಿಫಿಕ್ ಥ್ರಿಲ್ಲರ್ ಮಾದರಿಯ ಗತವೈಭವ ಚಿತ್ರದ ಮೂಲಕ ಯುವ ಪ್ರತಿಭೆ ದುಷ್ಯಂತ್ ನಾಯಕನಾಗಿ ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇಡುತ್ತಿದ್ದಾರೆ. ನಾಯಕಿಯಾಗಿ ಆಶಿಕಾ ರಂಗನಾಥ್ ನಟಿಸಿದ್ದಾರೆ. ಸಿಂಪಲ್ ಸುನಿ ಈ ಸಿನಿಮಾಗೆ ಕೇವಲ ನಿರ್ದೇಶಕ ಅಷ್ಟೇ ಅಲ್ಲ. ಅವರು ನಿರ್ಮಾಪಕ ಕೂಡ ಹೌದು.’ಗತವೈಭವ’ ಸಿನಿಮಾಕ್ಕೆ ಕಥೆ-ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದು, ಸುನಿ ಸಿನಿಮಾಸ್ ಸಂಸ್ಥೆಯಡಿ ದೀಪಿಕ್ ರವರ ಮಾತಾ ಮೂವಿ ಮೇಕರ್ಸ್ ಹಾಗೂ ಸುನಿ ಚಿತ್ರ ನಿರ್ಮಾಣ ಮಾಡ್ತಿದ್ದು, ವಿಲಿಯಂ ಡೇವಿಡ್ ಕ್ಯಾಮೆರಾ ವರ್ಕ್, ಜೂಡಾ ಸ್ಯಾಂಡಿ ಸಂಗೀತ ಚಿತ್ರಕ್ಕಿದೆ.

ಶೂಟಿಂಗ್ ಎಲ್ಲೆಲ್ಲಿ ನಡೆದಿದೆ?
ಗತವೈಭವ ಚಿತ್ರದ ಸಂಪೂರ್ಣ ಚಿತ್ರೀಕರಣ ಪೂರ್ಣಗೊಂಡಿದೆ. ಕೂರ್ಗ್, ಮಂಗಳೂರು, ಪೋರ್ಚುಗಲ್ ನಲ್ಲಿ ಸಿನಿಮಾದ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಬರೋಬ್ಬರಿ 100 ಕಾಲ್ ಶೀಟ್ ಗಳಲ್ಲಿ ಶೂಟಿಂಗ್ ಮುಕ್ತಾಯಗೊಂಡಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ಈ ವರ್ಷಾಂತ್ಯಕ್ಕೆ ಗತವೈಭವ ಸಿನಿಮಾವನ್ನು ಚಿತ್ರತಂಡ ತೆರೆಗೆ ತರುವ ಆಲೋಚನೆ ಹಾಕಿಕೊಂಡಿದೆ.

Spread the love

Leave a Reply

Your email address will not be published. Required fields are marked *