ಗಂಜಲಗುಂಟೆ ಗ್ರಾಮದಲ್ಲಿ 3 ತಿಂಗಳಿಂದ ನೀಗದ ನೀರಿನ ಬವಣೆ – ಗ್ರಾಮಸ್ಥರು ಕಂಗಾಲು Ganjalagunte village has been facing water scarcity for 3 months – villagers are in distress

ಗಂಜಲಗುಂಟೆ ಗ್ರಾಮದಲ್ಲಿ 3 ತಿಂಗಳಿಂದ ನೀಗದ ನೀರಿನ ಬವಣೆ – ಗ್ರಾಮಸ್ಥರು ಕಂಗಾಲು Ganjalagunte village has been facing water scarcity for 3 months – villagers are in distress

ಶಾಶ್ವತ ನೀರಿನ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದ ಸಚಿವ ಡಿ.ಸುಧಾಕರ್

ಚಿತ್ರದುರ್ಗ: ಬೇಸಿಗೆ (Summer) ವೇಳೆ ಒಂದೊತ್ತಿನ ಊಟವಿಲ್ಲವಾದರೂ ಪರವಾಗಿಲ್ಲ, ಕುಡಿಯುವ ನೀರಿದ್ದರೆ (Drinking Water) ಸಾಕೆಂದು ಜನ ಭಾವಿಸುತ್ತಾರೆ. ಆದರೆ ಕಳೆದ ಮೂರು ತಿಂಗಳಿಂದ ನೀರಿಗಾಗಿ ಗ್ರಾಮಸ್ಥರು ಪರದಾಡುತ್ತಿರುವ ಪರಿಸ್ಥಿತಿ ಚಿತ್ರದುರ್ಗ (Chitradurga) ಜಿಲ್ಲೆಯ ಹಿರಿಯೂರು ತಾಲೂಕಿನ ಗಂಜಲಗುಂಟೆ (Ganjalagunte) ಗ್ರಾಮದಲ್ಲಿ ನಿರ್ಮಾಣವಾಗಿದೆ.

ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ ಮುಗಿಲು ಮುಟ್ಟಿದೆ. ಸುಮಾರು 3-4 ಕಿಲೋಮೀಟರ್ ದೂರದ ತೋಟದಿಂದ ನೀರು ತರುವ ಪರಿಸ್ಥಿತಿ ಎದುರಾಗಿದೆ. ಈ ಗ್ರಾಮದ ಮಹಿಳೆಯರು, ಮಕ್ಕಳು ಮತ್ತು ವೃದ್ಧರು ನೀರಿಗಾಗಿ ಪರದಾಡಿ ಹೈರಾಣಾಗಿದ್ದಾರೆ. ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸ್ವಕ್ಷೇತ್ರದಲ್ಲಿಯೇ ಈ ಸಮಸ್ಯೆ ತಲೆದೂರಿದ್ದು, ಚುನಾವಣೆಗೆ ಬರುವ ರಾಜಕಾರಣಿಗಳು ಮತ್ತೆ ಈ ಗ್ರಾಮಕ್ಕೆ ಬರಲ್ಲವೆಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.

ನೀರಿನ ಸಂಕಷ್ಟ ಆಲಿಸದ ಜಿಲ್ಲಾಡಳಿತ ವಿರುದ್ಧವೂ ಗುಡುಗಿರುವ ಗ್ರಾಮಸ್ಥರು, ಪ್ರತಿವರ್ಷ ಬೇಸಿಗೆ ವೇಳೆ ನಾವು ನೀರಿನ ಸಮಸ್ಯೆ ಎದುರಿಸುತ್ತೇವೆ. ಕಳೆದ ಚುನಾವಣೆ ವೇಳೆ ಸಚಿವ ಸುಧಾಕರ್ ಅವರು ಶಾಶ್ವತ ನೀರಿನ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದರು. ಆದರೆ ಮತ್ತೆ ನಮ್ಮ ಗ್ರಾಮದತ್ತ ಸಚಿವರು ಸುಳಿದಿಲ್ಲವೆಂದು ಆಕ್ರೋಶ ಹೊರಹಾಕಿದ್ದಾರೆ. ಸಚಿವರ ವಿರುದ್ಧ ಖಾಲಿ ಕೊಡ ಪ್ರದರ್ಶಿಸಿ, ಮುಂದಿನ ಚುನಾವಣೆ ವೇಳೆ ಸಚಿವರಿಗೆ ತಕ್ಕಪಾಠ ಕಲಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

Spread the love

Leave a Reply

Your email address will not be published. Required fields are marked *