ವೆಂಟಿಲೇಟರ್​ನಲ್ಲಿದ್ದ ಗಗನಸಖಿ ಮೇಲೆ ಆಸ್ಪತ್ರೆ ಸಿಬ್ಬಂದಿಯಿಂದ ಲೈಂಗಿಕ ದೌರ್ಜನ್ಯ Hospital staff abuses Gaganakhi who was on ventilator

ವೆಂಟಿಲೇಟರ್​ನಲ್ಲಿದ್ದ ಗಗನಸಖಿ ಮೇಲೆ ಆಸ್ಪತ್ರೆ ಸಿಬ್ಬಂದಿಯಿಂದ ಲೈಂಗಿಕ ದೌರ್ಜನ್ಯ Hospital staff abuses Gaganakhi who was on ventilator

ವೆಂಟಿಲೇಟರ್​ನಲ್ಲಿದ್ದ ಗಗನಸಖಿ ಮೇಲೆ ಆಸ್ಪತ್ರೆ ಸಿಬ್ಬಂದಿ ದೈಹಿಕ ಸಂಪರ್ಕ ಬೆಳೆಸಲು ಮುಂದಾಗಿದ್ದ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಈಜುಕೊಳದಲ್ಲಿ ಈಜಾಡುತ್ತಿದ್ದ ಸಂದರ್ಭದಲ್ಲಿ ಆಕೆ ಮುಳುಗಿ ಸಾಯುವ ಹಂತಕ್ಕೆ ತಲುಪಿದ್ದರು. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಸ್ಥಿತಿ ತೀರಾ ಹದಗೆಟ್ಟಿದ್ದ ಪರಿಣಾಮ ಅವರನ್ನ ವೆಂಟಿಲೇಟರ್​ನಲ್ಲಿರಿಸಲಾಯಿತು. ಆಗ ಆಸ್ಪತ್ರೆ ಸಿಬ್ಬಂದಿಯೊಬ್ಬರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದರು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಗುರುಗ್ರಾಮ, ಏಪ್ರಿಲ್ 16: ವೆಂಟಿಲೇಟರ್​ನಲ್ಲಿದ್ದ ಗಗನಸಖಿ(Air Hostess) ಮೇಲೆ ಆಸ್ಪತ್ರೆ ಸಿಬ್ಬಂದಿ ಲೈಂಗಿಕ ಸೌರ್ಜನ್ಯವೆಸಗಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ರೋಗಿಯನ್ನು ಗುಣಪಡಿಸಬೇಕಾದವರೇ ಆಕೆಯ ಜತೆ ಅನುಚಿತವಾಗಿ ವರ್ತಿಸಿದ್ದು, ಇದೀಗ ಆಕ್ರೋಶವನ್ನು ಹುಟ್ಟುಹಾಕಿದೆ. ಗಗನಸಖಿ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಮತ್ತು ವೆಂಟಿಲೇಟರ್‌ನಲ್ಲಿದ್ದಾಗ ಆಸ್ಪತ್ರೆ ಸಿಬ್ಬಂದಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.

ವಿಮಾನಯಾನ ತರಬೇತಿಗಾಗಿ ಗುರುಗ್ರಾಮಕ್ಕೆ ಬಂದಿದ್ದ ಅವರು, ತಾನು ತಂಗಿದ್ದ ಹೋಟೆಲ್​ನ ಈಜುಕೊಳದಲ್ಲಿ ಈಜಾಡಲು ಹೋಗಿ ಮುಳುಗಿ ಸಾಯುವ ಹಂತಕ್ಕೆ ತಲುಪಿದ್ದರು. ತುರ್ತು ಆರೈಕೆಗಾಗಿ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ, ಏಪ್ರಿಲ್ 6 ರಂದು, ಆಕೆಯ ಆರೋಗ್ಯ ಹದಗೆಟ್ಟ ಕಾರಣ, ಆಕೆಯ ಪತಿ ಸದರ್ ಪ್ರದೇಶದ ಮತ್ತೊಂದು ಖಾಸಗಿ ಆಸ್ಪತ್ರೆಗೆ ವರ್ಗಾಯಿಸಿದರು, ಅಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ತಾನು ಪ್ರಜ್ಞಾಹೀನಳಾಗಿ, ವೆಂಟಿಲೇಟರ್​ ಸಪೋರ್ಟ್​ನಲ್ಲಿರುವಾಗ ಆಸ್ಪತ್ರೆ ಸಿಬ್ಬಂದಿಯಿಂದ ಅನುಚಿತವಾಗಿ ವರ್ತಿಸಿದ್ದು, ದೈಹಿಕ ಸಂಪರ್ಕ ಬೆಳೆಸಲು ಮುಂದಾಗಿದ್ದ, ಆಗ ನನಗೆ ಎಚ್ಚರವಾದರೂ ಕೂಗಿಕೊಳ್ಳಲು ಅಥವಾ ಓಡಲು ಸಾಧ್ಯವಾಗಲಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.

ಏಪ್ರಿಲ್ 13 ರಂದು ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಮನೆಗೆ ಹಿಂದಿರುಗಿದ ನಂತರ, ಅವರು ತಮ್ಮ ಪತಿಗೆ ನಡೆದ ಹಲ್ಲೆಯ ಬಗ್ಗೆ ಮಾಹಿತಿ ನೀಡಿದರು ಮತ್ತು ಸಹಾಯವಾಣಿ ಸಂಖ್ಯೆ 112 ಅನ್ನು ಸಂಪರ್ಕಿಸಿದರು. ನಂತರ ದಂಪತಿಗಳು ತಮ್ಮ ಕಾನೂನು ಸಲಹೆಗಾರರ ​​ಸಹಾಯದಿಂದ ಸದರ್ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದರು.

ದೂರಿನ ನಂತರ, ಗುರುಗ್ರಾಮ ಪೊಲೀಸರು ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಪೂರ್ಣ ಪ್ರಮಾಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಪಿಆರ್‌ಒ ದೃಢಪಡಿಸಿದ್ದಾರೆ.

ನಾವು ಈ ವಿಷಯವನ್ನು ತುಂಬಾ ಗಂಭೀರವಾಗಿ ಪರಿಗಣಿಸುತ್ತಿದ್ದೇವೆ. ಹೇಳಿಕೆಗಳನ್ನು ದಾಖಲಿಸಲಾಗುತ್ತಿದೆ, ಆಸ್ಪತ್ರೆ ಸಿಬ್ಬಂದಿಯನ್ನು ವಿಚಾರಣೆ ಮಾಡಲಾಗುತ್ತಿದೆ ಮತ್ತು ಆಸ್ಪತ್ರೆ ಆವರಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *