ಮೈಸೂರು | ಮನೆ ಹಿಂಬಾಗಿಲಿನ ಬೀಗ ಮುರಿದು 22 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ, ನಗದು ಕಳ್ಳತನ Mysuru | Gold, silver, cash worth Rs 22 lakh stolen after breaking the lock of the back door of a house

ಮೈಸೂರು | ಮನೆ ಹಿಂಬಾಗಿಲಿನ ಬೀಗ ಮುರಿದು 22 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ, ನಗದು ಕಳ್ಳತನ Mysuru | Gold, silver, cash worth Rs 22 lakh stolen after breaking the lock of the back door of a house

ಮೈಸೂರು: ಮನೆಯ ಹಿಂಬಾಗಿಲಿನ ಬೀಗ ಮುರಿದು ಸುಮಾರು 22 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ, ನಗದು ಕಳ್ಳತನ ಮಾಡಿರುವ ಘಟನೆ ಮೈಸೂರು (Mysuru) ತಾಲೂಕಿನ ನಾಗವಾಲದಲ್ಲಿ ನಡೆದಿದೆ.

ನಾಗವಾಲದ (Nagwala) ನಿವಾಸಿ ರೇಣುಕಾ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯವರು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದ ವೇಳೆ ಹಿಂಬಾಗಿಲಿನ ಬೀಗ ಮುರಿದು ಕಳ್ಳತನ ಮಾಡಲಾಗಿದೆ.

3,26,700 ರೂ., ನಗದು 276 ಗ್ರಾಂ ಚಿನ್ನ, 1,350 ಗ್ರಾಂ ಬೆಳ್ಳಿ ಸೇರಿ ಸುಮಾರು 22 ಲಕ್ಷ ಮೌಲ್ಯದ ವಸ್ತುಗಳನ್ನ ಖದೀಮರು ದೋಚಿದ್ದಾರೆ. ಸದ್ಯ ಇಲವಾಲ ಪೊಲೀಸರು (Ilavala Police) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Spread the love

Leave a Reply

Your email address will not be published. Required fields are marked *