ಸಂಬಂಧಿಯ ಕೊಂದು, ರುಂಡ ಹಿಡಿದು ಪೊಲೀಸ್​ ಠಾಣೆಗೆ ಬಂದ ಯುವಕ A young man who killed his relative and came to the police station with a gun

ಸಂಬಂಧಿಯ ಕೊಂದು, ರುಂಡ ಹಿಡಿದು ಪೊಲೀಸ್​ ಠಾಣೆಗೆ ಬಂದ ಯುವಕ A young man who killed his relative and came to the police station with a gun

ಭೂ ವಿವಾದ ಕೊಲೆಯಲ್ಲಿ ಅಂತ್ಯವಾಗಿದೆ, ಯುವಕನೊಬ್ಬ ಭೂಮಿಗೋಸ್ಕರ ತನ್ನ ಸಂಬಂಧಿಯನ್ನೇ ಹತ್ಯೆ ಮಾಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಆರೋಪಿ ಯುವಕ ಸ್ವತಃ ಪೊಲೀಸ್ ಠಾಣೆಗೆ ಹೋಗಿ ತನ್ನ ಅಪರಾಧವನ್ನು ಒಪ್ಪಿಕೊಂಡು ಶರಣಾಗಿದ್ದಾನೆ. ಆರೋಪಿಯನ್ನು ಕಬಿ ದೇಹುರಿ ಎಂದು ಗುರುತಿಸಲಾಗಿದ್ದು, ಶುಕ್ರವಾರ ತಡರಾತ್ರಿ ತನ್ನ ಸಂಬಂಧಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ. ಕಬಿಗೆ ತನ್ನ ಸಂಬಂಧಿ ಮೇಲೆ ಬಹಳ ದಿನಗಳಿಂದ ದ್ವೇಷವಿತ್ತು ಎಂದು ಹೇಳಲಾಗುತ್ತಿದೆ, ಇದಕ್ಕೆ ಕಾರಣ ಭೂಮಿಯ ವಿವಾದ.

ಒಡಿಶಾ, ಏಪ್ರಿಲ್ 13: ವ್ಯಕ್ತಿಯೊಬ್ಬ ತನ್ನ ಸಂಬಂಧಿಯನ್ನು ಕೊಂದು, ರುಂಡ ಹಿಡಿದು ಪೊಲೀಸ್​ ಠಾಣೆಗೆ ಬಂದಿರುವ ಘಟನೆ ಒಡಿಶಾದ ಕಿಯೋಂಜಾರ್​ನಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಸಂಬಂಧಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ(Murder) ಮಾಡಿ, ತಲೆಯನ್ನು ಕತ್ತರಿಸಿ ಚೀಲದಲ್ಲಿ ತುಂಬಿಕೊಂಡು ಪೊಲೀಸ್​ ಠಾಣೆಗೆ ಬಂದಿದ್ದ.

ಆರೋಪಿ ಯುವಕ ಸ್ವತಃ ಪೊಲೀಸ್ ಠಾಣೆಗೆ ಹೋಗಿ ತನ್ನ ಅಪರಾಧವನ್ನು ಒಪ್ಪಿಕೊಂಡು ಶರಣಾಗಿದ್ದಾನೆ. ಆರೋಪಿಯನ್ನು ಕಬಿ ದೇಹುರಿ ಎಂದು ಗುರುತಿಸಲಾಗಿದ್ದು, ಶುಕ್ರವಾರ ತಡರಾತ್ರಿ ತನ್ನ ಸಂಬಂಧಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ. ಕಬಿಗೆ ತನ್ನ ಸಂಬಂಧಿ ಮೇಲೆ ಬಹಳ ದಿನಗಳಿಂದ ದ್ವೇಷವಿತ್ತು ಎಂದು ಹೇಳಲಾಗುತ್ತಿದೆ, ಇದಕ್ಕೆ ಕಾರಣ ಭೂಮಿಯ ವಿವಾದ.

ಪೊಲೀಸ್ ಮೂಲಗಳ ಪ್ರಕಾರ, ಘಟನೆ ನಡೆದ ರಾತ್ರಿ ಗ್ರಾಮದಲ್ಲಿ ‘ದಂಡಾ ನಾಚಾ’ ಎಂಬ ಸಾಂಪ್ರದಾಯಿಕ ನೃತ್ಯ ನಡೆಯುತ್ತಿತ್ತು, ಇದರಿಂದಾಗಿ ಹೆಚ್ಚಿನ ಗ್ರಾಮಸ್ಥರು ಕಾರ್ಯನಿರತರಾಗಿದ್ದರು. ಈ ಅವಕಾಶವನ್ನು ಬಳಸಿಕೊಳ್ಳುತ್ತಾ, ಕಬಿ ತನ್ನ ಸಂಬಂಧಿಯನ್ನು ಹೊಲಕ್ಕೆ ಕರೆದೊಯ್ದು, ಕೊಡಲಿಯಿಂದ ಕೊಚ್ಚಿ ಶಿರಚ್ಛೇದ ಮಾಡಿದ್ದ.

ಕೊಲೆಯ ನಂತರ, ಆರೋಪಿ ಕಬಿ ಕತ್ತರಿಸಿದ ತಲೆಯನ್ನು ಚೀಲದಲ್ಲಿ ಇಟ್ಟುಕೊಂಡು ನೇರವಾಗಿ ಸುಕತಿ ಪೊಲೀಸ್ ಠಾಣೆಗೆ ಹೋಗಿದ್ದಾನೆ. ಅಲ್ಲಿ ಅವನು ಇಡೀ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಶರಣಾಗಿದ್ದಾರೆ.

ಪೊಲೀಸರು ಮೃತರ ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಇಡೀ ಪ್ರಕರಣದ ಬಗ್ಗೆ ಆಳವಾದ ತನಿಖೆ ಆರಂಭಿಸಿದ್ದಾರೆ. ಕಿಯೋಂಜಾರ್ ಸದರ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ವಿವಿಧ ವಿಷಯಗಳಿಗಾಗಿ ಅವರ ನಡುವೆ ಜಗಳಗಳು ನಡೆಯುತ್ತಿದ್ದವು ಎಂದು ಆರೋಪಿಯ ಚಿಕ್ಕಪ್ಪ ಅರ್ಜುನ್ ದೇಹುರಿ ಹೇಳಿದ್ದಾರೆ. ಕಿಯೋಂಜಾರ್ ಸದರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ. ಬಲಿಪಶುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

Spread the love

Leave a Reply

Your email address will not be published. Required fields are marked *