ಹೆಂಡತಿಯನ್ನು ಕೊಂದು ಚರಂಡಿಗೆಸೆದ ದೆಹಲಿ ಉದ್ಯಮಿ – ಪತ್ನಿಯ ಮೂಗುತಿಯಿಂದ ಗುರುತು ಪತ್ತೆ Delhi businessman who killed wife and dumped her in drain – identified by wife’s nose

ಹೆಂಡತಿಯನ್ನು ಕೊಂದು ಚರಂಡಿಗೆಸೆದ ದೆಹಲಿ ಉದ್ಯಮಿ – ಪತ್ನಿಯ ಮೂಗುತಿಯಿಂದ ಗುರುತು ಪತ್ತೆ  Delhi businessman who killed wife and dumped her in drain – identified by wife’s nose

ನವದೆಹಲಿ: ದೆಹಲಿ (Delhi) ಉದ್ಯಮಿ ತನ್ನ ಪತ್ನಿಯನ್ನು ಕೊಂದು ಚರಂಡಿಗೆಸೆದ 15 ದಿನಗಳ ಬಳಿಕ ಆಕೆಯ ಮೂಗುತಿಯ ಮೂಲಕ ಪೊಲೀಸರು ಗುರುತನ್ನು ಪತ್ತೆಹಚ್ಚಿದ್ದಾರೆ. ಈ ಘಟನೆ ದ್ವಾರಕಾದ (Dwaraka) ಚಾವ್ಲಾ ಪ್ರದೇಶದಲ್ಲಿ ನಡೆದಿದೆ.

ಮಾ.15 ರಂದು ಸೀಮಾ ಸಿಂಗ್ (47) ಎಂಬ ಮಹಿಳೆಯ ಮೃತದೇಹ ಚರಂಡಿಯೊಂದರಲ್ಲಿ ಪತ್ತೆಯಾಗಿತ್ತು. ಆದರೆ ಪತ್ತೆಯಾಗಿ 15 ದಿನ ಕಳೆದರೂ ಆಕೆಯ ಗುರುತು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಬಳಿಕ ತನಿಖಾಧಿಕಾರಿಗಳು ಆಕೆ ಹಾಕಿಕೊಂಡಿದ್ದ ಮೂಗುತಿಯ ಆಧಾರದ ಮೇಲೆ ತನಿಖೆ ಆರಂಭಿಸಿದ್ದರು.

ಅಧಿಕಾರಿಗಳು ಮೂಗುತಿ ಖರೀದಿಸಿದ್ದ ಅಂಗಡಿಯನ್ನು ಪತ್ತೆ ಹಚ್ಚಿ, ಖರೀದಿದಾರರ ಮೊಬೈಲ್ ಸಂಖ್ಯೆ ಹಾಗೂ ಇನ್ನಿತರ ಮಾಹಿತಿಯನ್ನು ಪಡೆದುಕೊಂಡರು. ಇದರಿಂದ ಸಂಪರ್ಕಕ್ಕೆ ಸಿಕ್ಕ ದೆಹಲಿ ಉದ್ಯಮಿಯನ್ನು ವಿಚಾರಿಸಿದಾಗ ನನ್ನ ಪತ್ನಿ ವೃಂದಾವನಕ್ಕೆ (Vrindavan) ಹೋಗಿರುವುದಾಗಿ ತಿಳಿಸಿದ್ದಾನೆ.

ಹೆಚ್ಚಿನ ತನಿಖೆಗಾಗಿ ವಿಚಾರಣೆಗೊಳಪಡಿಸಿದಾಗ ಉದ್ಯಮಿ ತಪ್ಪೊಪ್ಪಿಕೊಂಡಿದ್ದು, ತನ್ನ ಪತ್ನಿಯನ್ನು ಭದ್ರತಾ ಸಿಬ್ಬಂದಿಯ ಸಹಾಯದಿಂದ ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ ಹಾಗೂ ನಮ್ಮಿಬ್ಬರ ಸಂಬಂಧದಲ್ಲಿ ತುಂಬಾ ಭಿನ್ನಾಭಿಪ್ರಾಯಗಳಿದ್ದ ಕಾರಣ ಕೊಲೆ ಮಾಡಿರುವುದಾಗಿ ತಿಳಿಸಿದ್ದು, ಸದ್ಯ ಪೊಲೀಸರು ಪತಿ ಹಾಗೂ ಭದ್ರತಾ ಸಿಬ್ಬಂದಿಯನ್ನು ಬಂಧಿಸಿದ್ದಾರೆ.

Spread the love

Leave a Reply

Your email address will not be published. Required fields are marked *