ಆ ಪ್ರೇಮಿಗಳಿಬ್ಬರು ಹೋಟೆಲ್ ರೂಂ ಬುಕ್ ಮಾಡಿ, ಏಕಾಂತ ಕಳೆಯೋಕೆ ಅಂತ ಬಂದಿದ್ರು. ಆದ್ರೆ ಏಕಾಏಕಿ ಪ್ರಿಯಕರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ! ಅಷ್ಟಕ್ಕೂ ಅಲ್ಲಿ ಆಗಿದ್ದೇನು?
ನೋಯ್ಡಾ: ಆತ ತನ್ನ ಗೆಳತಿಯೊಂದಿಗೆ (Girl Friend) ಹೋಟೆಲ್ (Hotel) ಒಂದಕ್ಕೆ ಬಂದಿದ್ದ, ಅಲ್ಲಿ ರೂಂ (Hotel Room) ಒಂದನ್ನು ಬುಕ್ ಮಾಡಿದ್ದ. ತನ್ನ ಗೆಳತಿ ಜೊತೆ ಸ್ವಲ್ಪ ಸಮಯವನ್ನು ಏಕಾಂತವಾಗಿ ಕಳೆಯಬೇಕು ಅನ್ನೋ ರೊಮ್ಯಾಂಟಿಕ್ ಮೂಡ್‌ನಲ್ಲಿ ಆತ ಇದ್ದ. ತನ್ನ ಗೆಳತಿ ಜೊತೆ ತನ್ನ ಮುದ್ದಿನ ನಾಯಿಯನ್ನೂ (Pet Dog) ಆ ಹೋಟೆಲ್ ರೂಂಗೆ ಆತ ಕರೆದುಕೊಂಡು ಬಂದಿದ್ದ. ಹೀಗೆ ಬಂದ ಆತ ಮತ್ತು ಆತನ ಗೆಳತಿ ರೂಂನಲ್ಲಿ ಏಕಾಂತವಾಗಿ ಸ್ವಲ್ಪ ಸಮಯ ಕಳೆದಿದ್ದಾರೆ. ಬಳಿಕ ಆಕೆ ಸ್ನಾನಕ್ಕೆ ಅಂತ ಬಾತ್ ರೂಂಗೆ (Bath Room) ಹೋಗಿದ್ದಾಳೆ. ಆದರೆ ಬರುವಷ್ಟರಲ್ಲಿ ಆತ ಶವವಾಗಿ, ಫ್ಯಾನ್‌ಗೆ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದ!
ಹೋಟೆಲ್‌ಗೆ ಬಂದಿದ್ದ ಯುವಕ ಆತ್ಮಹತ್ಯೆ
ಗೆಳತಿಯೊಂದಿಗೆ ಸಮಯ ಕಳೆಯಲು ಯುವಕನೊಬ್ಬ ಹೋಟೆಲ್‌ನಲ್ಲಿ ಕೊಠಡಿ ಬುಕ್ ಮಾಡಿದ್ದ. ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಯುವಕನ ನೇಣು ಬಿಗಿದ ಸ್ಥಿತಿಯಲ್ಲಿ ಆ ಕೋಣೆಯ ಫ್ಯಾನ್‌ನಲ್ಲಿ ಪತ್ತೆಯಾಗಿದ್ದಾನೆ. ಉತ್ತರ ಪ್ರದೇಶದ ನೋಯ್ಡಾದ ಹೋಟೆಲ್ ಒಂದರಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.