ಐಷಾರಾಮಿ ಕಾರುಗಳು, ಪ್ರೊಡಕ್ಷನ್‌ ಹೌಸ್ ಮಾಲಕಿ.. ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಹೆಸರಿನಲ್ಲಿರುವುದು ಕೋಟಿ ಕೋಟಿ..!!

ಐಷಾರಾಮಿ ಕಾರುಗಳು, ಪ್ರೊಡಕ್ಷನ್‌ ಹೌಸ್ ಮಾಲಕಿ.. ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಹೆಸರಿನಲ್ಲಿರುವುದು ಕೋಟಿ ಕೋಟಿ..!!

Magnificent bungalow.. Luxury car, production house owner.. Ashwini Puneeth Rajkumar’s total assets in the name of how many crores?

ಅಶ್ವಿನಿ ಪುನೀತ್‌ ರಾಜಕುಮಾರ್‌ PRK ಪ್ರೊಡಕ್ಷನ್‌ ಹೌಸ್‌ನ ಜವಾಬ್ದಾರಿ ಹೊತ್ತಿದ್ದಾರೆ. ಅಷ್ಟೇ ಅಲ್ಲ ಹಲವು ಸಿನಿಮಾಗಳನ್ನು PRK ಬ್ಯಾನರ್‌ ಅಡಿ ನಿರ್ಮಾಣ ಕೂಡ ಮಾಡುತ್ತಿದ್ದಾರೆ. ಸಾವಿರಾರು ಜನ ಹೊಸ ಕಲಾವಿದರಿಗೆ ತಂತ್ರಜ್ಞರಿಗೆ ಈ production ಹೌಸ್ ಅನ್ನ ನೀಡುತ್ತಿದೆ. ಹಾಗಾದ್ರೆ ಅಶ್ವಿನಿ ಹೆಸರಿನಲ್ಲಿರುವ ಆಸ್ತಿ ಎಷ್ಟು? ಇಲ್ಲಿ ತಿಳಿಯೋಣ….

ಕರ್ನಾಟಕ ರತ್ನ ಪುನೀತ್‌ ರಾಜಕುಮಾರ್‌ ಕನ್ನಡದ ಮನೆ ಮಗ, ಬಾಲ್ಯದಲ್ಲಿ ನಟನೆ ಆರಂಭಿಸಿ ರಾಷ್ಟ್ರ ಪ್ರಶಸ್ತಿ ಪಡೆದ ಅಪ್ಪಟ ಕನ್ನಡಿಗ. ಅಣ್ಣಾವ್ರು ಎಂದೇ ಜನಮನದಲ್ಲಿ ಜಾಗಪಡೆದ ಮೇರುನಟ, ಕನ್ನಡದ ಕಣ್ಮಣಿ ಡಾ.ರಾಜಕುಮಾರ್‌ ವರ ಕಿರಿಯ ಪುತ್ರ ಪುನೀತ್‌. ಅವರ ಬಗ್ಗೆ ನಿಮಗೆ ಹೊಸದಾಗಿ ಪರಿಚಯ ಮಾಡಿಸಬೇಕು ಎಂದೇನಿಲ್ಲ, ಪ್ರತಿಯೊಬ್ಬ ಅಪ್ಪಟ ಕನ್ನಡಿಗನಿಗೂ ಗೊತ್ತು ಅಪ್ಪು ಗತ್ತು.

ಪುನಿತ್‌ ರಾಜಕುಮಾರ್‌ ಮತ್ತು ಅಶ್ವಿನಿ 1999 ರ ಡಿಸೆಂಬರ್ 1 ರಂದು ಮದುವೆ ಆದರು. ಇವರಿಗೆ ಧ್ರುತಿ ಮತ್ತು ವಂದಿತಾ ಎಂಬ ಇಬ್ಬರು ಪುತ್ರಿಯರಿದ್ದು, ಇಬ್ಬರೂ ವಿದ್ಯಾಭ್ಯಾಸದಲ್ಲಿ ಬ್ಯುಸಿಯಾಗಿದ್ದಾರೆ. 

ಪುನಿತ್‌ ರಾಜಕುಮಾರ್‌ 2021 ರ ಅಕ್ಟೋಬರ್‌ 29 ರಂದು ಹೃದಯಾಘಾತದಿಂದ ವಿಧಿವಶರಾದರು. ಅಂದು ಇಡಿ ಕರುನಾಡು ಶೋಕಸಾಗರದಲ್ಲಿ ಮುಳುಗಿತು, ಕರ್ನಾಟಕದ ಓರ್ವ ನಟ ಸಾವನ್ನಪ್ಪಿರುವ ಸುದ್ದಿ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿಯೂ ಪ್ರಸಾರವಾಯಿತು. ಮೂರು ದಿನಗಳ ಸಾರ್ವಜನಿಕ ದರ್ಶನದ ಬಳಿಕ ತಮ್ಮ ಪೋಷಕರ ಸಮಾಧಿ ಸ್ಥಳದಲ್ಲಿಯೇ ಅಪ್ಪು ಅಂತ್ಯಕ್ರಿಯೆ ನಡೆದಿತ್ತು. ಅಂದಿನಿಂದ ಪುನೀತ್‌ ಮಾಡುತ್ತಿದ್ದ ಎಲ್ಲ ಸಾಮಾಜಿಕ ಕಾರ್ಯಗಳು, PRK ಪ್ರೊಡಕ್ಷನ್‌ ಹೌಸ್‌ ಜವಾಬ್ದಾರಿಯನ್ನು ಅಶ್ವಿನಿ ಹೆಗಲಿಗೆ ಹಾಕಿಕೊಂಡಿದ್ದು ಕೊಂಚ ಧಕ್ಕೆಯೂ ಬರದಂತೆ ಮುನ್ನಡೆಸುತ್ತಿದ್ದಾರೆ.  

ಅಶ್ವಿನಿ ಪುನೀತ್‌ ರಾಜಕುಮಾರ್‌ 14 ಮಾರ್ಚ್‌ 1981 ರಲ್ಲಿ ಜನಿಸಿದರು. ಅವರಿಗೆ ಈಗ 43 ವರ್ಷ ವಯಸ್ಸು. ಅಶ್ವಿನಿ ಈಗಲೂ ಮೊದಲು ಪುನೀತ್‌ ಜೊತೆ ಇದ್ದ ಸದಾಶಿವ ನಗರದ ಭವ್ಯವಾದ ಬಂಗಲೆಯಲ್ಲಿಯೇ ವಾಸಿಸುತ್ತಿದ್ದಾರೆ. 

ಅಶ್ವಿನಿ ಪುನೀತ್‌ ರಾಜಕುಮಾರ್‌ ಐಷಾರಾಮಿ ಆಡಿ ಕ್ಯೂ 7 ಕಾರನ್ನು ಇತ್ತೀಚಿಗೆ ಖರೀದಿಸಿದ್ದರು ennalaaguttideಎನ್ನಲಾಗುತ್ತಿದೆ, ಈ ಕಾರಿನ ಬೆಲೆ 1.10 ಕೋಟಿಯಿಂದ 1.20 ಕೋಟಿ ರೂಪಾಯಿಗಳ ವರೆಗೂ ಇರಬಹುದು ಎನ್ನಲಾಗುತ್ತಿದೆ. ಲ್ಯಾಂಬರ್ಗಿನಿ ಸೇರಿದಂತೆ ಇವರ ಬಳಿ ಹಲವು ಐಷಾರಾಮಿ ಕಾರುಗಳ ಸಂಗ್ರಹವಿದೆ.

ಕೆಲವು ಮೂಲಕ ಪ್ರಕಾರ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಬಳಿ ಸುಮಾರು 200 ರಿಂದ 250 ಕೋಟಿ ಆಸ್ತಿ ಇದೆ ಎನ್ನಲಾಗುತ್ತಿದೆ (ಈ ಮಾಹಿತಿ ಕೆಲವು ಸಾಮಾಜಿಕ ಜಾಲತಾಣ ಹಾಗೂ ಬೇರೆ ಮಾಧ್ಯಮಗಳಲ್ಲಿ ಪ್ರಕಟವಾದದ್ದು)

Spread the love

Leave a Reply

Your email address will not be published. Required fields are marked *