‘ಅಗ್ನಿಸಾಕ್ಷಿ’ ನಟಿ ವೈಷ್ಣವಿ ಗೌಡ ಎಂಗೇಜ್‌ಮೆಂಟ್ ಫೋಟೋ ಗ್ಯಾಲರಿ ‘Agnisakshi’ actress Vaishnavi Gowda engagement photo gallery

‘ಅಗ್ನಿಸಾಕ್ಷಿ’ ನಟಿ ವೈಷ್ಣವಿ ಗೌಡ ಎಂಗೇಜ್‌ಮೆಂಟ್ ಫೋಟೋ ಗ್ಯಾಲರಿ ‘Agnisakshi’ actress Vaishnavi Gowda engagement photo gallery

ಕಿರುತೆರೆಯ ಜನಪ್ರಿಯ ನಟಿ ವೈಷ್ಣವಿ ಗೌಡ (Vaishnavi Gowda) ಅವರು ಎಂಗೇಜ್ ಆಗುವ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ನೀಡಿದ್ದಾರೆ. ‘ಅಗ್ನಿಸಾಕ್ಷಿ’ ನಟಿಯ ನಿಶ್ಚಿತಾರ್ಥದ‌ (Engagement) ಅದ್ಧೂರಿ ಫೋಟೋಗಳು ಇಲ್ಲಿವೆ.

ಏ.14ರಂದು ಬೆಂಗಳೂರಿನ ರೆಸಾರ್ಟ್‌ವೊಂದರಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ವೆಸ್ಟರ್ನ್ ಹಾಗೂ ನಾರ್ತ್ ಇಂಡಿಯನ್ ಸ್ಟೈಲ್‌ನಲ್ಲಿ ವೈಷ್ಣವಿ ಮತ್ತು ಅನುಕೂಲ್ ಮಿಶ್ರಾ (Anukool Mishra) ಎಂಗೇಜ್‌ಮೆಂಟ್ ಜರುಗಿದೆ.

ಬೆಳಗ್ಗೆ ನಡೆದ ಶಾಸ್ತ್ರದಲ್ಲಿ ಕ್ರೀಮ್ ಕಲರ್ ಬಣ್ಣದ ಉಡುಗೆಯಲ್ಲಿ ಇವರಿಬ್ಬರು ಕಾಣಿಸಿಕೊಂಡಿದ್ದರು. ಸಂಜೆ ನಡೆದ ಎಂಗೇಜ್‌ಮೆಂಟ್ ಕಾರ್ಯಕ್ರಮದಲ್ಲಿ ವೈಷ್ಣವಿ ಅವರು ಕ್ರೀಮ್ ಕಲರ್ ಗೌನ್‌ನಲ್ಲಿ ಮಿಂಚಿದ್ದರೆ, ಅನುಕೂಲ್ ಅವರು ಬ್ಲ್ಯಾಕ್ ಡ್ರೆಸ್ ಧರಿಸಿದ್ದಾರೆ.

ನಿಶ್ಚಿತಾರ್ಥದ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡ ವೈಷ್ಣವಿ, ಅವನದ್ದು ಆಕಾಶ ಸೇವೆ, ನನ್ನದು ಸ್ಕ್ರೀಪ್ಟ್ ಹಾಗೂ ವೇದಿಕೆ. ವಿಧಿ ಒಂದು ಸುಂದರ ಲವ್‌ಸ್ಟೋರಿ ಹೆಣೆದಿದೆ ಎಂದು ಬರೆದುಕೊಂಡಿದ್ದಾರೆ.

ವರ ಅನುಕೂಲ್ ಮಿಶ್ರಾ ಅವರು ಇಂಡಿಯನ್ ಏರ್‌ಫೋರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಪೋಷಕರು ಮೆಚ್ಚಿದ ವರನೊಂದಿಗೆ ಖುಷಿಯಿಂದ ಹಸೆಮಣೆ ಏರಲು ನಟಿ ರೆಡಿಯಾಗಿದ್ದಾರೆ.

ವೈಷ್ಣವಿ ಭಾವಿ ಪತಿಗೆ ಕನ್ನಡ ಬರೋದಿಲ್ಲ. ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಅನುಕೂಲ್ ಮಾತನಾಡುತ್ತಾರೆ.

ನಿಶ್ಚಿತಾರ್ಥದಂದು ಮಂಡಿಯೂರಿ ವೈಷ್ಣವಿಗೆ ಅನುಕೂಲ್ ಪ್ರಪೋಸ್ ಮಾಡಿರೋದು ಅಭಿಮಾನಿಗಳ ಗಮನ ಸೆಳೆದಿದೆ.

ಎಂಗೇಜ್ ಆದ ಖುಷಿಯಲ್ಲಿ ಅನುಕೂಲ್ ಜೊತೆ ವೈಷ್ಣವಿ ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಇಬ್ಬರ ಜಬರ್‌ದಸ್ತ್ ಡ್ಯಾನ್ಸ್ ವಿಡಿಯೋ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ನಟಿಯ ನಿಶ್ಚಿತಾರ್ಥ ಸಂಭ್ರಮಕ್ಕೆ ನಟಿ ಅಮೂಲ್ಯ ಮತ್ತು ಜಗದೀಶ್ ದಂಪತಿ, ಚೈತ್ರಾ ವಾಸುದೇವನ್, ಪೂಜಾ ಲೋಕೇಶ್ ಸೇರಿದಂತೆ ‘ಸೀತಾ ರಾಮ’ ಸೀರಿಯಲ್ ತಂಡ ಕೂಡ ಭಾಗಿಯಾಗಿದೆ.

ಅಗ್ನಿಸಾಕ್ಷಿ’ ಸೀರಿಯಲ್ ಟೀಮ್ ಕಡೆಯಿಂದ ಸಿಹಿ ಕಹಿ ಚಂದ್ರು, ಚಿತ್ಕಲಾ, ಇಶಿತಾ ವರ್ಷ ದಂಪತಿ, ಕಿಶೋರ್ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.

Spread the love

Leave a Reply

Your email address will not be published. Required fields are marked *