ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ

ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ

ತುಮಕೂರು :‘ಶಾಲೆಯ ಹಳೆಯ ನೆನಪುಗಳು ಪರಿಶ್ರಮ, ಶಿಕ್ಷಣದ ಮಹತ್ವ, ಗುರುವಿನ ಶ್ರೇಷ್ಠತೆಯನ್ನು ತಿಳಿಸುತ್ತವೆ’ ಎಂದು ಉದ್ಯಮಿ ಪ್ರಗತಿ ಎಂಟರ್ಪ್ರೈಸಸ್ ಮಾಲೀಕರಾದ ವಿ ಜಿ ತೋಪೇಗೌಡ ಅಭಿಪ್ರಾಯಪಟ್ಟರು.


ಗೂಳೂರು ಹೋಬಳಿ ಮಸ್ಕಲ್ ಗ್ರಾಮದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಯ ಆವರಣದಲ್ಲಿ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1992/93ನೇ ಸಾಲಿನ ವಿದ್ಯಾರ್ಥಿಗಳು ಒಟ್ಟಾಗಿ ಸೇರಿ ಅಂದಿನಿಂದ ಇಲ್ಲಿಯವರೆಗೂ ಸೇವೆ ಸಲ್ಲಿಸಿದ ಗುರುಗಳಿಗೆ ಅಭಿನಂದನೆ ಸಲ್ಲಿಸುವ ಮೂಲಕ ವಿದ್ಯಾರ್ಥಿ ಜೀವನದ ನೂರಾರು ನೆನಪುಗಳು ಕಣ್ಣು ಮುಂದೆ ಬರುವಂತೆ ಮಾಡಿದೆ. ಗುರುವಿನ ಶ್ರೇಷ್ಠತೆ ವಿದ್ಯಾರ್ಥಿ ಜೀವನದಲ್ಲಿ ತಿಳಿಯುವುದಕ್ಕಿಂತ ವೃತ್ತಿ ಜೀವನದ ಪಯಣದಲ್ಲಿ ತಿಳಿಯುವುದು ಹೆಚ್ಚು ಎಂದರು.


ಗುರುಗಳ ಮಾರ್ಗದರ್ಶನದಲ್ಲಿ ನಾವು ವಿದ್ಯೆ, ಸಂಸ್ಕಾರವನ್ನು ಕಲಿತು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವುದರಿಂದ ಸಮಾಜದಲ್ಲಿ ದೊಡ್ಡಮಟ್ಟದಲ್ಲಿ ಬೆಳೆದಿದ್ದೇವೆಎಂದರು ಹಳೇ ವಿದ್ಯಾರ್ಥಿಯಶೋದಾಮಸ್ಕಲ್ ಮಾತನಾಡಿ ಗುರುಗಳು ನಮ್ಮ ಪಾಲಿಗೆ ದೇವರಿದ್ದಂತೆ. ಇಂದಿನ ಯುವ ಪೀಳಿಗೆ ಗುರುಗಳ ಮಾರ್ಗದಲ್ಲಿ ನಡೆದಾಗ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.
ಶಿಕ್ಷಕರಾದ ಜಿ. ಡಿ ಹನುಮಂತರಾ ಯಪ್ಪ ಮಾತನಾಡಿಶಿಕ್ಷಕವೃತ್ತಿ ಪವಿತ್ರವಾದ ವೃತ್ತಿಯಾಗಿದ್ದು ಈ ಗುರುವಂದನಾ ಕಾರ್ಯಕ್ರಮ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಿದ್ದು ಸದಾ ಸ್ಮರಿಸುವ ದಿನವಾಗಿರುತ್ತದೆ ಎಂದರುಬಿಲ್ಲು ಮತ್ತು ಬೆಲ್ಲಿಗಾಗಿ ಕೆಲಸ ಮಾಡುವವರು ಶಿಕ್ಷಕರಾಗುವುದಿಲ್ಲ ಮಕ್ಕಳನ್ನು ಉರಿದುಂಬಿಸಿ ಪ್ರೊಸ್ತಾಹಿಸಿ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನು ನಿರ್ಮಾಣಮಾಡುವವರು ಶಿಕ್ಷಕರಾಗುತ್ತಾರೆ ಎಂದರುಬಿಜೆಪಿ ಮುಖಂಡ ಬಿದರಕಟ್ಟೆಸಿದ್ದೇಗೌಡ ಮಾತನಾಡಿ ನಾವು ಸಮಾಜದಲ್ಲಿ ಇಂದು ಗುರುತಿಸಿಕೊಂಡು ಮೇಲ್ಪoಕ್ತಿಹಾಕಿ ಬೆಳೆಯಲು ಕಾರಣರಾದವರೇ ನಮಗೆ ಶಿಕ್ಷಣ ಕೊಟ್ಟ ಗುರುಗಳು ಎಂದರು ವೀರಸಾಗರ ವಿ. ಎನ್. ದೇವರಾಜು, ಶ್ರೀಪತಿಹಳ್ಳಿನಟರಾಜು ಮಾತನಾಡಿದರು.

ಗುರುವಂದನಾ ಕಾರ್ಯಕ್ರಮ ವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು ಮೊದಲಿಗೆ ವಿದ್ಯಾರ್ಥಿಗಳು ಜೊತೆಗೂಡಿ ಶಿಕ್ಷಕರನ್ನು ಸರೋಟಿನಲ್ಲಿ ಕುಳ್ಳಿರಿಸಿಕೊಂಡುವೀರಗಾಸೆ, ತಮಟೆ ವಾದ್ಯಗಳೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿಕೊಂಡು ಪೂರ್ಣ ಕುಂಭ ಸ್ವಾಗತ ದೊಂದಿಗೆ ವೇದಿಕೆಗೆ ಕರೆತರಲಾಯಿತುನಂತರವೇದಿಕೆ ಮೇಲೆ ಭರತ ನಾಟ್ಯ,ಕರಾಟೆ, ಮಿಮಿಕ್ರಿ. ಇನ್ನುಮುಂತಾದ ಮನರಂಜನೆ ಕಾರ್ಯಕ್ರಮ ನೆಡೆದವು ಕಾರ್ಯಕ್ರಮದಲ್ಲಿ ಬಾಗವಹಿಸಿದ್ದವರಿಗೆ ಸಾವಿರಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು ಶಿಕ್ಷಕರಿಗೆ ಗುರುವಂದನೆ ಸಲ್ಲಿಸಿ ಸನ್ಮಾನಿಸಿ ಗೌರವಿಸಲಾಯಿತು, ಪದ್ಮರಾಜು ಮಮತ, ವಂದಿಸಿದರು. ಈ ಸಂದರ್ಭದಲ್ಲಿ ಸಾನಿಧ್ಯ ವಹಿಸಿದ್ದ ತಮ್ಮಡಿಹಳ್ಳಿ ಮಠದ ಸಿದ್ದಲಿಂಗದೇಶಿಕೇಂದ್ರಸ್ವಾಮೀಜಿ ಭೂಮಿ ದಾನಿಗಳಾದ ಜಿ ಮಡಿಯಪ್ಪಹಾಗೂ ಕುಟುಂಬಸ್ಥರು ,ನಿವೃತ್ತ ಪ್ರೌಢಶಾಲಾ ಶಿಕ್ಷಕರಾದ ಕೋದಂಡರಾಮಯ್ಯ, ಹೆಗ್ಗೆರೆ ನರಸಿಂಹಮೂರ್ತಿ, ಸುಬ್ರಮಣ್ಯ, ಕೆಂಪಹನುಮಯ್ಯ, ರಂಜನಾ ಉಮೇಶ್ ನಾಯಕ್, ಗಂಗಸಿದ್ದಯ್ಯ ಹಾಗೂ ಹಳೇ ವಿದ್ಯಾರ್ಥಿಗಳಾದ ಶಿವಾನಂದ್ ಶ್ರೀಪತೀಹಳ್ಳಿ ಶ್ರೀನಿವಾಸ್, ಶ್ರೀಧರ್, ಕೆ ಆರ್ ಚಿಕ್ಕಣ್ಣ, ಕೆ.ಸಿ.ಚಿಕ್ಕಣ್ಣ, ಕೆ ಹನುಮಂತರಾಜು, ಪೂರ್ಣಿಮಾ, ಮಂಜುಳಾ, ಭಾಗ್ಯಮ್ಮ, ಎಂ. ಪಿ ಮಂಜುನಾಥ್, ಇತರರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *