ನೆಲಮಂಗಲ : ಇತ್ತೀಚೆಗೆ ಖಾಸಗಿ ಮಾದ್ಯಮವೊಂದಲ್ಲಿ ನನ್ನ ಮೇಲೆ ಮಾಡಿದ್ದ ಅರೋಪ ಸತ್ಯಕ್ಕೆ ದೂರವಾಗಿದೆ ಎಂದು ತಹಸೀಲ್ದಾರ್ ಅಮೃತ್ಆತ್ರೇಶ್ ಸ್ಪಷ್ಟನೆ ನೀಡಿದರು.
ನಗರದ ತಾಲೂಕು ಕಚೇರಿಯಲ್ಲಿ ಶನಿವಾರ ಅಯೋಜಿಸಿದ್ದ ಸುದ್ದಿ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ತಾಲೂಕಿನ ಬೈರಸಂದ್ರ (Byrasandra) ವೃತ್ತದಲ್ಲಿ ಗ್ರಾಮ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಪೂಜಾ (Pooja) ಅವರು ಮಹಿಳೆಯೊಬ್ಬರ ಬಳಿ ಪವತಿ ಖಾತೆ ಮಾಡಿಸಿ ಕೊಡಲು 60ಸಾವಿರ ಬೇಡಿಕೆ ನೀಡಿದ್ದ ವಿಚಾರ ಸಾರ್ವಜನಿಕರು ಕಳೆದ ಒಂದು ವರ್ಷದ ಹಿಂದೆ ನನ್ನ ಗಮನಕ್ಕೆ ಬಂದಿದ್ದು ವಿಎ ಪೂಜಾ ಅವರಿಗೆ ಕಾರಣ ನೀಡುವಂತೆ ನೋಟಿಸ್ ನೀಡಲಾಗಿತ್ತು. ನೋಟೀಸ್ಗೆ ಸರಿಯಾದ ರೀತಿ ಸ್ಪಂಧಿಸದೇ ಹಾಗೂ ಸಾರ್ವಜನಿಕರ ದೂರು ಹಾಗೂ ಶಾಸಕರ ಬಳಿ ಮೌಖಿಕವಾಗಿ ಸಾರ್ವಜನಿಕರು ದೂರು ನೀಡಿದ್ದ ಹಿನ್ನಲೆ ವರ್ಗಾವಣೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ರವಾನಿಸಲಾಗಿತ್ತು. ಈ ನಿಟ್ಟಿನಲ್ಲಿ ಗ್ರಾಮಾಂತರ ಜಿಲ್ಲಾಧಿಕಾರಿಗಳು (Bangalore rural dist DC) ನೆಲಮಂಗಲ (Nelamangala) ತಾಲೂಕಿನಿಂದ ದೇವನಹಳ್ಳಿ (Devanahalli) ತಾಲೂಕಿನ ಚನ್ನರಾಯಪಟ್ಟಣ (Channarayapatna) ವೃತ್ತಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದರು. ಈ ಹಿನ್ನಲೆ ವಿಎ ಪೂಜಾ ಅವರು ದೇವನಹಳ್ಳಿ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ ಎಂದರು.
ತಹಸೀಲ್ದಾರ್ ಹೆಸರು ದುರುಪಯೋಗ: ಗ್ರಾಮ ಆಡಳಿತಾಧಿಕಾರಿ ಪೂಜಾ ಪವತಿ ಖಾತೆ ಮಾಡಲು ರಾಜಸ್ವನಿರೀಕ್ಷಕರು, ತಹಸೀಲ್ದಾರ್ ಅವರ ಹೆಸರನ್ನು ದುರುಪಯೋಗ ಮಾಡಿಕೊಂಡು ಮಹಿಳೆಯೊಬ್ಬರ ಬಳಿ ಸುಮಾರು 60 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿರುವ ಲಂಚಕ್ಕೆ ಇಟ್ಟಿದ್ದಾರೆ. ನನ್ನ ಗಮನಕ್ಕೆ ಸಾರ್ವಜನಿಕರು ದೂರ ನೀಡಿದ್ದ ಹಿನ್ನಲೆ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದು ಈಗಾಗಲೇ ವರ್ಗಾವಣೆ ಮಾಡಲಾಗಿದೆ. ಇತ್ತೀಚೆಗೆ ಖಾಸಗಿ ಮಾದ್ಯಮವೊಂದಲ್ಲಿ ನನ್ನ ಹೆಸರು ಉಲ್ಲೇಖ ಮಾಡಿ ಸುದ್ದಿ ಪ್ರಸಾರವಾಗಿದ್ದು ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ. ಎವಿ ಪೂಜಾ ಅವರು ಮಾಡಿದ್ದ ತಪ್ಪಿಗೆ ವರ್ಗಾವಣೆಯಾಗಿದ್ದಾರೆ.ಈ ಮದ್ಯ ನನ್ನ ಹೆಸರು ದುರುಪಯೋಗ ಪಡಿಸಿಕೊಂಡಿದ್ದಾರೆಂದು ತಹಸೀಲ್ದಾರ್ ಅಮೃತ್ಆತ್ರೇಶ್ (Amrith Athresh) ತಿಳಿಸಿದರು.
ತಾಲೂಕಿನಲ್ಲಿ ತಹಸೀಲ್ದಾರ್ರಾಗಿ ನೇಮಕಗೊಂಡ ಬಳಿಕ ಸುಮಾರು 5 ಸಾವಿರಕ್ಕೂ ಹೆಚ್ಚು ಪವತಿ ಖಾತಾ ಪ್ರಕರಣ ಬಗೆಹರಿಸಲಾಗಿದೆ. ನಕಾಶೆ ರಸ್ತೆ ತೆರವು, ಸರ್ಕಾರಿ ಭೂಮಿ ಒತ್ತುವರಿ ತೆರವು ಸೇರಿದಂತೆ ಜನಸ್ನೇಹ ಹಾಗೂ ಪಾರದರ್ಶಕ ಆಡಳಿತವನ್ನು ಕಳೆದ ಒಂದು ವರ್ಷದಿಂದ ನೀಡಲಾಗುತ್ತಿದೆ ಎಂದು ತಹಸೀಲ್ದಾರ್ ಅಮೃತ್ಆತ್ರೇಶ್ ತಿಳಿಸಿದರು.