ನೆಲಮಂಗಲದ ಅರಿಶಿಣಕುಂಟೆಯ ಸರ್ಕಾರಿ ಶಾಲೆ ಆವರಣದಲ್ಲಿ ಶ್ರೀಗಜಮುಖ ಗೆಳೆಯರ ಬಳಗದ ವತಿಯಿಂದ ನಡೆದ ಶ್ರೀಚಾಮುಂಡೇಶ್ವರಿ ವಾರ್ಷಿಕೋತ್ಸವದಲ್ಲಿ ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ, ಜೆಡಿಎಸ್ ತಾಲೂಕು ಅಧ್ಯಕ್ಷ ಟಿ.ತಿಮ್ಮರಾಯಪ್ಪ ಅವರನ್ನು ಅಭಿನಂದಿಸಲಾಯಿತು.

ನೆಲಮಂಗಲ: ನಮ್ಮ ಧಾರ್ಮಿಕ ಆಚರಣೆಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕಾದ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳಿಗೆ ಹಬ್ಬ ಹರಿದಿನಗಳ ಪ್ರಾಮುಖ್ಯತೆಯನ್ನು ತಿಳಿಸಿಕೊಡಬೇಕು ಎಂದು ಮಾಜಿ ಶಾಸಕ ಡಾ.ಕೆ. ಶ್ರೀನಿವಾಸಮೂರ್ತಿ ತಿಳಿಸಿದರು.

ಪಟ್ಟಣದ ಅರಿಶಿಣಕುಂಟೆ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿದಸರಾ ಪ್ರಯುಕ್ತ ಶ್ರೀಗಜಮುಖ ಗೆಳೆಯರ ಬಳಗದ ವತಿಯಿಂದ ನಡೆದ ಶ್ರೀಚಾಮುಂಡೇಶ್ವರಿ ಮಾತನಾಡಿದರು. 9ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ

ಸ್ವಾಗತಾರ್ಹ: ಅರಿಶಿಣಕುಂಟೆ ಗ್ರಾಮ ದಲ್ಲಿ ದಸರಾ ಪ್ರಯುಕ್ತ ಯುವಕರು ಸಂಘ ಕಟ್ಟಿಕೊಂಡು ಧಾರ್ಮಿಕ ಆಚರಣೆಯನ್ನು ಮಾಡುವ ಮೂಲಕ ಪರಸ್ಪರರಲ್ಲಿ ಸೌಹಾರ್ದತೆಯನ್ನು ಮೂಡಿಸಲು ಮುಂದಾಗಿರುವುದು ಶ್ಲಾಘನೀಯ, ಲೋಕಕಲ್ಯಾರ್ಣಾರ್ಥ ವಿವಿಧ ಧಾರ್ಮಿಕ ಆಚರಣೆಗಳನ್ನು ಮಾಡುವ ಮೂಲಕ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಮುಂ ದಾಗಿರುವುದು ಸ್ವಾಗತಾರ್ಹವೆಂದರು.

ಶ್ರೀಗಜಮುಖ ಗೆಳೆಯರ ಬಳದ 14 ವರ್ಷಗಳಿಂದ ಅಧ್ಯಕ್ಷ ಆರ್.ಪ್ರಕಾಶ್ ಮಾತನಾಡಿ, ಕಳೆದ ಶ್ರೀಚಾಮುಂಡೇಶ್ವರಿ ದೇವಿ ಪ್ರತಿಷ್ಠಾಪಿಸಿ 9 ದಿನ ವಿವಿಧಪೂಜೆ ಹಮ್ಮಿಕೊಂಡು ಲೋಕ ಕಲ್ಯಾಣಾರ್ಥ ಚಂಡಿಕಾ ಹೋಮ ಮತ್ತಿತರ ಹೋಮ ಹೋಮ ಆಯೋಜಿಸಿ ಪ್ರಕೃತಿಮಾತೆಗೆ ಯಾವುದೇ ರೀತಿಯ ಸಮಸ್ಯೆ ತಲೆ ದೋರಬಾರದೆಂದು ವಿಶೇಷವಾಗಿ ಪೂಜೆ ಆಯೋಜಿಸಲಾಗಿತ್ತು ಎಂದರು.

ಕಾರ್ಯಕ್ರಮದ ಅಂಗವಾಗಿ ಶ್ರೀಶಾಂಭವಿ ಮಹಾತ್ಮ ಎಂಬ ಭಕ್ತಿ ಪ್ರದಾನ ಪೌರಾಣಿಕ ನಾಟಕ ಪ್ರದರ್ಶಿ ಸಲಾಯಿತು. ಶ್ರೀಚಾಮುಂಡೇಶ್ವರಿ ದೇವಿ ಮೂರ್ತಿಯನ್ನು ಗ್ರಾಮದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮೂಲಕ ವಿಸರ್ಜನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಟಿ.ತಿಮ್ಮರಾಯಪ್ಪ ಶ್ರೀಗಜಮುಖ ಗೆಳೆಯರ ಬಳದ ಅಧ್ಯಕ್ಷ ಪ್ರಕಾಶ್, ಪದಾಧಿಕಾರಿಗಳಾದ ಕೃಷ್ಣಪ್ಪ, ಕಿರಣ್ ಕುಮಾರ್, ನವೀನ್, ಆನಂದ, ಮಂಜುನಾಥ್, ಗೋವಿಂದರಾಜು, ಮದನ್‌ಕುಮಾರ್, ಮುಖಂಡರಾದ ರಾಮಕೃಷ್ಣಪ್ಪ ಹೆಗ್ಡೆ, ರಾಮಮೂರ್ತಿ, ಎಂ.ಲಕ್ಷ್ಮೀನಾರಾಯಣ್, ಕೃಷ್ಣಪ್ಪ, ಎಚ್‌. ರಾಜಣ್ಣಮತ್ತಿತರರು ಇದ್ದರು.

Spread the love

Leave a Reply

Your email address will not be published. Required fields are marked *