ಬೆಂಗಳೂರು: ಬೊಮ್ಮಸಂದ್ರದಿಂದ ತಮಿಳುನಾಡಿನ ಹೊಸೂರಿಗೆ ನಮ್ಮ ಮೆಟ್ರೋ ಹಳದಿ ಮಾರ್ಗ ವಿಸ್ತರಿಸುವ ಪ್ರಸ್ತಾವನೆಗೆ ಕರ್ನಾಟಕದಲ್ಲಿ ವಿರೋಧ ವ್ಯಕ್ತವಾಗಿದೆ. ಕನ್ನಡಪರ ಸಂಘಟನೆಗಳು ರಾಜ್ಯದ ಹಿತಾಸಕ್ತಿ ಮತ್ತು ಕೈಗಾರಿಕಾ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಆತಂಕ ವ್ಯಕ್ತಪಡಿಸಿವೆ.

ಕರವೇ ಮುಖಂಡ ಪ್ರವೀಣ್ ಶೆಟ್ಟಿ, ಅತ್ತಿಬೆಲೆ ಮೆಟ್ರೋ ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದ್ದು, ಇಲ್ಲದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಕೂಡ ಹೊಸೂರಿನಲ್ಲಿ ಕಡಿಮೆ ಜೀವನ ವೆಚ್ಚ ಮತ್ತು ಕೈಗಾರಿಕಾ ಭೂಮಿ ಲಭ್ಯತೆಯಿಂದ ಕರ್ನಾಟಕದ ಹೂಡಿಕೆ ಹಾಗೂ ಮಾನವ ಸಂಪನ್ಮೂಲದ ಮೇಲೆ ಪರಿಣಾಮ ಬೀರಬಹುದು ಎಂಬ ಕಳವಳ ವ್ಯಕ್ತಪಡಿಸಿದ್ದರು.

ತಮಿಳುನಾಡು ಸರ್ಕಾರವು ಹೊಸೂರಿನಿಂದ ಬೊಮ್ಮಸಂದ್ರದವರೆಗೆ 23 ಕಿ.ಮೀ. ಮೆಟ್ರೋ ಕಾರಿಡಾರ್ ನಿರ್ಮಿಸಲು ಆಸಕ್ತಿ ತೋರಿಸಿದ್ದು, ಯೋಜನೆಗೆ ಅನುಮೋದನೆ ಮತ್ತು ಹಣಕಾಸು ನೆರವು ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ಮತ್ತೊಂದೆಡೆ, ಬೊಮ್ಮಸಂದ್ರದಿಂದ ಅತ್ತಿಬೆಲೆ ಕೈಗಾರಿಕಾ ಪ್ರದೇಶದ ಮೂಲಕ ಗಡಿಯವರೆಗೆ 9 ನಿಲ್ದಾಣಗಳ ಮಾರ್ಗದ ಪ್ರಸ್ತಾವನೆಯೂ ಇದೆ.

ಬಿಎಂಆರ್‌ಸಿಎಲ್‌ನ 750V DC ಮತ್ತು ತಮಿಳುನಾಡಿನ 25kV AC ವಿದ್ಯುತ್ ವ್ಯವಸ್ಥೆಗಳ ವ್ಯತ್ಯಾಸ ಸೇರಿದಂತೆ ತಾಂತ್ರಿಕ ಸವಾಲುಗಳು ಯೋಜನೆಯ ಮುಂದಿವೆ. ಕನ್ನಡಪರ ಸಂಘಟನೆಗಳ ವಿರೋಧದ ನಡುವೆ ಯೋಜನೆಯ ಮುಂದಿನ ನಿರ್ಧಾರಗಳ ಮೇಲೆ ಎಲ್ಲರ ಗಮನ ನೆಟ್ಟಿದೆ

Spread the love

Leave a Reply

Your email address will not be published. Required fields are marked *