ತಾಂಡವಪುರ: ಮೊದಲು ನಂದಿ ಕಂಬಕ್ಕೆ ಪೂಜೆ ಸಲ್ಲಿಸಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಜಿಲ್ಲಾ ಮಂತ್ರಿಗಳು ಸಚಿವರುಗಳು ನಂತರ ನಾಡ ಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಗೆ ಮೈಸೂರು ಅರಮನೆ ಆವರಣದಲ್ಲಿ ಚಿನ್ನದ ಅಂಬಾರಯ ತಾಯಿ ಚಾಮುಂಡೇಶ್ವರಿ ದೇವಿಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾಕ್ಟರ್ ಎಸ್ ಸಿದ್ದರಾಮಯ್ಯನವರು ಸಚಿವರಾದ ಶಿವರಾಜ್ ತಂಡಗಿ ಬಸಂತಪ್ಪ ಸಂಸದ ಯದುವೀರ್ ಒಡೆಯರ್ ರವರು ಹಾಗೂ ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್‌ ರೆಡ್ಡಿ, ಕೇರಳಂ ಮುಖ್ಯಮಂತ್ರಿ ವಿ.ಡಿ ಸತೀಶನ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಮೈಸೂರು ಜಿಲ್ಲಾಧಿಕಾರಿಗಳಾದ .ಲಕ್ಷ್ಮೀಕಾಂತ ರೆಡ್ಡಿ. ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ರವರು ತಾಯಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಿ ಗೌರವ ವಂದನೆ ಸಲ್ಲಿಸಿದರು.


ಬಳಿಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದು ಈ ಬಾರಿಯ ದಸರಾ ಮಹೋತ್ಸವ ಬಹಳ ವಿಜೃಂಭಣೆಯಿಂದ ಜರುಗಿದ್ದು ನಾನು ಮತ್ತು ನಮ್ಮ ಸಚಿವ ಸಂಪುಟದ ಸಹೋದ್ಯೋಗಳು ತಾಯಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಈ ಬಾರಿ ತಾಯಿ ಚಾಮುಂಡೇಶ್ವರಿ ಕೃಪೆಯಿಂದ ಮಳೆ ಬೆಳೆಯಾಗಿ ರೈತರ ಬದುಕು ಹಸನಾಗಲಿ ನಾಡಿನ ಜನತೆ ಸುಖ ಶಾಂತಿಯಿಂದ ಬದುಕುವಂತಾಗಲಿ ಶಾಂತಿ ಸಹ ಬಾಳ್ವೆ ಸ್ನೇಹ ಬಾಂಧವ್ಯ ಬಿಸಿಯುವಂತಾಗಲಿ ವೈರತ್ವ ತೊಲಗಲಿ ಮತ್ತಷ್ಟು ಬಾಂಧವ್ಯ ಬಿಸಿಯುವಂತಾಗಲಿ ಎಂದು ತಾಯಿಯಲ್ಲಿ ಬೇಡಿಕೊಂಡಿದ್ದೇವೆ ಎಂದು ತಿಳಿಸಿದರು ಅಲ್ಲದೆ ಭಕ್ತಿಯ ಭಾವ, ಪರಂಪರೆಯ ವೈಭವ : ಐತಿಹಾಸಿಕ ಜಂಬೂಸವಾರಿಗೆ ಶುಭಾರಂಭ ವಾಗಿದ್ದು ವಿಶ್ವವಿಖ್ಯಾತ ಮೈಸೂರು ದಸರಾ ಅಂಗವಾಗಿ ಅರಮನೆಯ ಆವರಣದಲ್ಲಿ ಇಂದು ಶುಭ ಮೀನ ಲಗ್ನದಲ್ಲಿ ವಿಜಯದಶಮಿ ಮೆರವಣಿಗೆಯನ್ನು ಸನ್ಮಾನ್ಯ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಉದ್ಘಾಟಿಸಿ ಗಜರಾಜ “ಪ್ರಶಾಂತ” ಹೊತ್ತ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿದ್ದ ನಾಡಿನ ಅಧಿದೇವತೆ ತಾಯಿ ಶ್ರೀ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಐತಿಹಾಸಿಕ ಜಂಬೂಸವಾರಿಗೆ ಭವ್ಯ ಚಾಲನೆ ನೀಡಿದರು.


ಶತಮಾನಗಳ ಇತಿಹಾಸ, ಭಕ್ತಿ ಮತ್ತು ಕನ್ನಡ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸಾರುವ ಜಂಬೂಸವಾರಿ, ಮೈಸೂರು ದಸರೆಯ ವೈಭವದ ಕಿರೀಟಪ್ರಾಯ. ತಾಯಿ ಚಾಮುಂಡೇಶ್ವರಿಯ ಕೃಪಾಶೀರ್ವಾದದೊಂದಿಗೆ ನಾಡಿನ ಜನತೆಯ ಬದುಕಿನಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಂಬ ಆಶಯದೊಂದಿಗೆ ಈ ಬಾರಿಯ ವಿಜಯದಶಮಿಯ ಸಂಭ್ರಮ ಕಳೆಗಟ್ಟಿತು.
ಈ ಶುಭ ಸಂದರ್ಭದಲ್ಲಿ ಮೈಸೂರು ರಾಜವಂಶದ ಪ್ರತಿನಿಧಿ ಹಾಗೂ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾಕ್ಟರ್ ಎಸ್ ಯತೀಂದ್ರ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಸಂತಪ್ಪ ಶಿವರಾಜ ತಂಗಡಗಿ, ಸಿ ಪುಟ್ರಂಗ್ ಶೆಟ್ಟಿ ಆರ್ ನರೇಂದ್ರಸ್ವಾಮಿ ಶಾಸಕರಾದ ತನ್ವೀರ್ ಸೆಟ್ ಕೆ ಹರೀಶ್ ಗೌಡವಿಶೇಷ ಅತಿಥಿಗಳಾದ ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್‌ ರೆಡ್ಡಿ, ಕೇರಳಂ ಮುಖ್ಯಮಂತ್ರಿ ವಿ.ಡಿ ಸತೀಶನ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಮೈಸೂರು ಜಿಲ್ಲಾಧಿಕಾರಿಗಳಾದ .ಲಕ್ಷ್ಮೀಕಾಂತ ರೆಡ್ಡಿ.ಜಿ, ಮೈಸೂರು ನಗರ ಪೊಲೀಸ್ ಆಯುಕ್ತರಾದ ಶ್ರೀಮತಿ ಸೀಮಾ ಲಾಟ್ಕರ್ ಉಪಸ್ಥಿತರಿದ್ದರು.


ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ನಗರಾಭಿವೃದ್ಧಿ ಸಚಿವರು ಆದ ಡಾಕ್ಟರ್ ಎಸ್ ಯತೀಂದ್ರ ಸಿದ್ದರಾಮಯ್ಯನವರು ಎದೆ ವೇಳೆ ಮಾತನಾಡಿ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಭವ್ಯ ಮೆರವಣಿಗೆಯಲ್ಲಿ ವಿವಿಧ ಜಿಲ್ಲೆಗಳು, ರಾಜ್ಯಗಳು ಹಾಗೂ ಇಲಾಖೆಗಳ ಸ್ತಬ್ಧಚಿತ್ರಗಳು ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆ, ಐತಿಹಾಸಿಕ ಪರಂಪರೆ, ಜನಪದ ಕಲೆಗಳು ಮತ್ತು ಸಾಧನೆಗಳನ್ನು ಅನಾವರಣಗೊಳಿಸಿದ ಕ್ಷಣಗಳಿಗೆ ಸಾಕ್ಷಿಯಾದೆ. ಎಂದು ಹೇಳಿದ ಅವರು
ಭಾರತೀಯ ವಾಯುಸೇನೆ ಹಾಗೂ ನೌಕಾಪಡೆಯ ಸ್ತಬ್ಧಚಿತ್ರಗಳು ದೇಶದ ರಕ್ಷಣಾ ಶಕ್ತಿ ಮತ್ತು ಶೌರ್ಯವನ್ನು ಸಾರಿದರೆ, ಕೇರಳದ ಪ್ರವಾಸೋದ್ಯಮದ ಪ್ರಾಕೃತಿಕ ಸೌಂದರ್ಯ ಹಾಗೂ ತಮಿಳುನಾಡಿನ ಸಾಂಪ್ರದಾಯಿಕ ಜಲ್ಲಿಕಟ್ಟು ಕ್ರೀಡೆಯ ಸ್ತಬ್ಧಚಿತ್ರಗಳು ವಿಶೇಷ ಆಕರ್ಷಣೆ ಯಾಗಿವೆ ಎಂದು ಹೇಳಿದ ಸಚಿವರು ಕರ್ನಾಟಕದ ಸಾರಿಗೆ ಸಂಸ್ಥೆಗಳ ಸೇವಾ ಬದ್ಧತೆ, ಸಮಾಜ ಕಲ್ಯಾಣ ಇಲಾಖೆಯ ಜನಪರ ಯೋಜನೆಗಳು, ವಿವಿಧ ಇಲಾಖೆಗಳ ಹಾಗೂ ವಿವಿಧ ಜಿಲ್ಲೆಗಳ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಬಿಂಬಿಸಿದ ಸ್ತಬ್ಧಚಿತ್ರಗಳು ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿವೆ ಎಂದು ತಿಳಿಸಿದರು.
ದೇಶದ ವೈವಿಧ್ಯತೆ, ನಾಡಿನ ಪರಂಪರೆ ಮತ್ತು ಸಾಧನೆಗಳನ್ನು ಒಂದೇ ವೇದಿಕೆಯಲ್ಲಿ ಅನಾವರಣಗೊಳಿಸಿದ ಈ ಮೆರವಣಿಗೆ ದಸರಾ ಸಂಭ್ರಮವನ್ನು ಮತ್ತಷ್ಟು ಅರ್ಥಪೂರ್ಣವಾಗಿಸಿತು.


ವೈವಿಧ್ಯಮಯ ರೀತಿಯಲ್ಲಿ ಪರಂಪರೆ ಸಾಂಪ್ರದಾಯದಂತೆ ಈ ದಸರ ಮಹೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗಿದೆ ಎಂದರು, ವಿಶ್ವವಿಖ್ಯಾತ ಮೈಸೂರು ದಸರಾ ಪ್ರಮುಖ ಭಾಗವಾದ ಜಂಬೂಸವಾರಿ ಅದ್ದೂರಿಯಿಂದ ನೆರವೇರಿದೆ.ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಿದರು. ಮೊದಲಬಾರಿಗೆ ಚಿನ್ನದ ಅಂಬಾರಿಯನ್ನ ಹೊತ್ತ ಪ್ರಶಾಂತ ಹಾಕಿದ ಗಾಂಭೀರ್ಯ ಹೆಜ್ಜೆಗೆ ಲಕ್ಷಾಂತರ ಮಂದಿ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ ಸಚಿವರು.
ಅಭಿಮನ್ಯು ಉತ್ತರಾಧಿಕಾರಿಯಾದ ಪ್ರಶಾಂತ್ 750 ಕೆಜಿ ಭಾರದ ಚಿನ್ನದ ಅಂಬಾರಿಯನ್ನ ಹೊತ್ತು ತಾನು ಅಭಿಮನ್ಯು ಉತ್ತರಾಧಿಕಾರಿಯಾಗಲು ಅರ್ಹ ಎಂದು ಸಾಬೀತುಪಡಿಸಿದ… ಪ್ರಶಾಂತ್ ಆನೆ ಎಂದು ಸಚಿವರು ತಿಳಿಸಿದರು.
ಈ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಯನ್ನು ನೋಡಲು ರಾಜ್ಯದ ದೇಶದ ಮೂಲೆ ಮೂಲೆಗಳಿಂದ ಹರಿದು ಬಂದ ಭಕ್ತ ಸಾಗರ ರಸ್ತೆಯ ಬದಿಯಲ್ಲಿ ನಿಂತು ಅಂಬಾರಿ ಹೊತ್ತ ಪ್ರಶಾಂತ್ ಆನೆಯ ನಡಿಗೆಗೆ ಜೈಕಾರ ಹಾಕಿದರು ರಸ್ತೆ ಉದ್ದಕ್ಕೂ ವಿವಿಧ ಜಿಲ್ಲೆಗಳ ಹಾಗೂ ರಾಜ್ಯಗಳ ಶಬ್ದ ಚಿತ್ರಗಳು ಜನರ ಗಮನ ಸೆಳೆದವು.

Spread the love

Leave a Reply

Your email address will not be published. Required fields are marked *