ಬೆಂಗಳೂರು: ಪತ್ರಿಕೋದ್ಯಮ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಗಣನೀಯ ಸೇವೆಯನ್ನು ಗುರುತಿಸಿ, ಬೆಂಗಳೂರಿನ ಪತ್ರಕರ್ತ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಆನಂದ್ ಸಿ. ತಿರುಮಲ ಅವರನ್ನು 2026ನೇ ಸಾಲಿನ ಅಂತರರಾಷ್ಟ್ರೀಯ ನೊಬ್ಲರ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಜಿ.ಎಸ್. ಹೈಟೆಕ್ ಸೊಲ್ಯೂಷನ್ಸ್ (ರಿ.), ಕರ್ನಾಟಕ ಸಂಸ್ಥೆಯ ವತಿಯಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವು 2026ರ ಅಕ್ಟೋಬರ್ 25ರ ಭಾನುವಾರ ಬೆಳಿಗ್ಗೆ 9.30ಕ್ಕೆ ಗೋವಾ ರಾಜ್ಯದ ವಾಸ್ಕೋ–ಬೈನಾ ಪ್ರದೇಶದ ರವೀಂದ್ರ ಭವನದಲ್ಲಿ ನಡೆಯಲಿದೆ.
ಪತ್ರಿಕೋದ್ಯಮದ ಮೂಲಕ ಸಮಾಜದ ಸಮಸ್ಯೆಗಳಿಗೆ ಧ್ವನಿಯಾಗುವುದರ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಆನಂದ್ ಸಿ. ತಿರುಮಲ ಅವರ ಕಾರ್ಯವನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯು ಅಕ್ಟೋಬರ್ 10ರಂದು ಹೊರಡಿಸಿರುವ ಆಯ್ಕೆ ಪತ್ರದಲ್ಲಿ ತಿಳಿಸಿದೆ.
ಜಿ.ಎಸ್. ಹೈಟೆಕ್ ಸೊಲ್ಯೂಷನ್ಸ್ (ರಿ.), ಕರ್ನಾಟಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ಜಿ. ಶಿವಣ್ಣ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸಮಾರಂಭದಲ್ಲಿ ಡಾ. ಶಾಂತಣ್ಣ ವೈ. ಕಡಿವಾಳ, ಶ್ರೀ ಮಲ್ಲಿಕಾರ್ಜುನ ಶೃಂಗಿಮಠ, ಡಾ. ಆರ್.ಎಸ್. ರಾಜು, ಶ್ರೀ ಕಲೀಂ ಎಸ್. ಹಾಗೂ ಡಾ. ಸಿದ್ದಣ್ಣ ಎಸ್. ಮೇಟಿ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.
ಪತ್ರಿಕೋದ್ಯಮ, ಶಿಕ್ಷಣ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಆನಂದ್ ಸಿ. ತಿರುಮಲ ಅವರಿಗೆ ಈ ಪ್ರಶಸ್ತಿ ಲಭಿಸಿರುವುದು ಅವರ ಸೇವಾ ಪಯಣಕ್ಕೆ ಮತ್ತೊಂದು ಗೌರವವಾಗಿ ಪರಿಗಣಿಸಲಾಗಿದೆ.
