ಶಾಲಾ ಆಟದ ಮೈದಾನಕ್ಕೆ ಮೀಸಲಿಟ್ಟಿರುವ ಜಾಗವನ್ನು ಅಕ್ರಮವಾಗಿ ಕಬಳಿಸುತ್ತಿದ್ದು ಅದನ್ನು ಉಳಿಸಿಕೊಡಿ ಎಂದು ನೆಲಮಂಗಲ ಸಮೀಪದ ಗೌಡಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆ ಕುರಿತು ಗ್ರಾಮ ಪಂಚಾಯ್ತಿ ಸದಸ್ಯ ಚಂದ್ರಶೇಖರ್ ಜಿ.ವಿ ಮಾತನಾಡಿ ಬೆಂಗಳೂರು ಉತ್ತರ ತಾಲ್ಲೂಕು, ದಾಸನಪುರ ಹೋಬಳಿ, ಗೌಡಹಳ್ಳಿ ಗ್ರಾಮದ ಸರ್ವೆ ನಂ.58 ರಲ್ಲಿ 1:00 ಎಕರೆ ಜಮೀನನ್ನು ಶಾಲೆ ಆಟದ ಮೈದಾನಕ್ಕೆ ಈಗಾಗಲೇ ಸರ್ಕಾರದಿಂದ ಮೀಸಲು ಇಡಲು ಶಿಫಾರಸ್ಸು ಮಾಡಲಾಗಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಮತ್ತು ತಾಲ್ಲೂಕು ದಂಡಾಧಿಕಾರಿ ತಹಶೀಲ್ದಾರ್ ಮತ್ತು ರಾಜಸ್ವ ನಿರ್ವಸ್ಥಕರು ಹಾಗೂ ಗ್ರಾಮ ಲೆಕ್ಕಾಧಿಕಾರಿ ಸರ್ವೆ ಇಲಾಖೆಯ ನಕ್ಷೆಯನ್ನು ಸಹ ಸಿದ್ದ ಪಡಿಸಿ, ವರದಿಯನ್ನು ನೀಡಿರುತ್ತಾರೆ.
ಸದ್ಯ ಈ ಜಾಗವನ್ನು ರತ್ನಮ್ಮ ಮತ್ತು ಸಂಘಟಿಗರು ಏಕಾಏಕಿ ಬಂದು ರಾತ್ರಿಯ ಸಮಯದಲ್ಲಿ ಜೆ.ಸಿ.ಬಿ ಮುಖಾಂತರ ಸ್ವಚ್ಚಗೊಳಿಸಿ ಸ್ವಾಧೀನ ಪಡಿಸಿಕೊಳ್ಳಲು ಪ್ರಯತ್ನಿಸಿಸುತ್ತಿದ್ದು, ಈಗಾಗಲೇ ಸರ್ವೆ ನಂಬರ್ 58 ರಲ್ಲಿ ಬಿಲ್ಡಿಂಗ್ ನಿರ್ಮಾಣ ಮಾಡುತ್ತಿದ್ದಾರೆ. ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನಿರಾಶಿತರಿಗೆ ಮನೆ ನಿರ್ಮಾಣ ಮಾಡುತ್ತಿರುವುದಾಗಿ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಮನೆಗಳಿಗನ್ನ ಪಡೆಯುತ್ತಿರುವ ಫಲಾನುಭವಿಗಳು ಯಾರು ಸ್ಥಳೀಯರಲ್ಲಿ, ಎಲ್ಲರೂ ಹೊರಗಿನವರೇ ಹಾಗೂ ಎಲ್ಲರೂ ಅನುಕೂಲಸ್ಥರೆ. ನಮ್ಮ ಗ್ರಾಮದಲ್ಲಿ ಶಾಲೆ ವಿದ್ಯಾರ್ಥಿಗಳಿಗೆ ಕ್ರೀಡಾ ಚಟುವಟಿಕೆಗಳನ್ನು ಮಾಡಲು ಗ್ರಾಮದಲ್ಲಿ ಬೇರೆಯಾವುದೇ ಜಾಗವಿರುವುದಿಲ್ಲ. ಅಲ್ಲದೆ ಈ ಬೆಳವಣಿಗೆಯ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೂ ಕೂಡ ತರಲಾಗಿದೆ. ಆದುದ್ದರಿಂದ ಗೌಡಹಳ್ಳಿ ಮತ್ತು ಕಾಲೋನಿ ಗ್ರಾಮಸ್ಥರ ಒತ್ತಾಯದ ಮೇರೆಗೆ ಈ ಸರ್ಕಾರಿ ಜಾಗವನ್ನು ಶಾಲೆ ಆಟದ ಮೈದಾನಕ್ಕೆ ಮೀಸಲಿಡ ಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರಾದ ಪದ್ಮ ತಿಮ್ಮೇಗೌಡ, ಗ್ರಾಮಸ್ಥರ ಸಿದ್ದರಾಜು, ಗುರುಪ್ರಸಾದ್, ಶ್ರೀನಿವಾಸ್, ನಾಗರಾಜ್, ತಾಯಮ್ಮ, ಮಂಜುಳಾ, ವನಜಾಕ್ಷಮ್ಮ ಸೇರಿದಂತೆ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು.