ಪ್ರೀತಿಯ ಬಲೆ ಬೀಸಿ ಪ್ರಿಯಕರನನ್ನು ಮನೆಗೆ ಕರೆಸಿಕೊಂಡು ಯುವತಿಯೊಬ್ಬಳು ಆತನ ಗುಪ್ತಾಂಗವನ್ನು ಕತ್ತರಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸಂತ್ರಸ್ತನ ಕುಟುಂಬದವರು ಇದನ್ನು ಲವ್ ಟ್ರ್ಯಾಪ್ ಎಂದು ಕರೆದಿದ್ದಾರೆ. ಎರಡು ಕುಟುಂಬಗಳ ನಡುವೆ ಈಗಾಗಲೇ ಹಲವು ವಿವಾದಗಳಿದ್ದವು. ಆದರೆ ಯುವತಿ ಆತ ತನ್ನ ಮನೆಗೆ ನುಗ್ಗಿದ್ದ, ನನ್ನ ಮೇಲೆ ಹಲ್ಲೆಗೆ ಮುಂದಾಗಿದ್ದ ಆಗ ಅನಿವಾರ್ಯವಾಗಿ ಈ ರೀತಿ ಮಾಡಬೇಕಾಯಿತು ಎಂದು ಹೇಳಿಕೆ ನೀಡಿದ್ದಾಳೆ.
ಉತ್ತರ ಪ್ರದೇಶ, ಏಪ್ರಿಲ್ 17: ಯುವತಿಯೊಬ್ಬಳು ಪ್ರಿಯಕರನನ್ನು ಮನೆಗೆ ಕರೆಸಿ ಗುಪ್ತಾಂಗ ಕತ್ತರಿಸಿರುವ ಭಯಾನಕ ಘಟನೆ ಉತ್ತರ ಪ್ರದೇಶದ ಗೋರಖ್ಪುರದಲ್ಲಿ ನಡೆದಿದೆ. ಆತನನ್ನು ಮನೆಗೆ ಕರೆಸಿಕೊಂಡು ಪ್ರೇಯಸಿ(Lover) ಹಾಗೂ ಆಕೆಯ ನಾಲ್ವರು ಸಹೋದರರು ಸೇರಿ ಗುಪ್ತಾಂಗ ಕತ್ತರಿಸಿದ್ದಲ್ಲದೆ ಚಿತ್ರಹಿಂಸೆ ಕೊಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಂತ್ರಸ್ತನ ಕುಟುಂಬದವರು ಇದನ್ನು ಲವ್ ಟ್ರ್ಯಾಪ್ ಎಂದು ಕರೆದಿದ್ದಾರೆ. ಎರಡು ಕುಟುಂಬಗಳ ನಡುವೆ ಈಗಾಗಲೇ ಹಲವು ವಿವಾದಗಳಿದ್ದವು. ಆದರೆ ಯುವತಿ ಆತ ತನ್ನ ಮನೆಗೆ ನುಗ್ಗಿದ್ದ, ನನ್ನ ಮೇಲೆ ಹಲ್ಲೆಗೆ ಮುಂದಾಗಿದ್ದ ಆಗ ಅನಿವಾರ್ಯವಾಗಿ ಈ ರೀತಿ ಮಾಡಬೇಕಾಯಿತು ಎಂದು ಹೇಳಿಕೆ ನೀಡಿದ್ದಾಳೆ.
ಮಿಥುನ್ ಕುಮಾರ್ ಎಂಬಾತ ತನ್ನ ಪ್ರೇಯಸಿಯನ್ನು ಭೇಟಿಯಾಗಲು ಆಕೆಯ ಮನೆಗೆ ಹೋಗಿದ್ದ, ಆಕೆಯ ಆತನಿಗಿಂತ 8 ವರ್ಷ ದೊಡ್ಡವಳು. ಆತನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಆತ ಹೊಲದಿಂದ ವಾಪಸಾಗುವಾಗ ಆಕೆ ಆತನಿಗೆ ಕರೆ ಮಾಡಿದ್ದಳು. ನಮ್ಮ ಮನೆಯಿಂದ ಮೂರನೇ ಮನೆಯೇ ಅವರದ್ದು. ಆಕೆ ಎರಡು ವರ್ಷಗಳಿಂದ ಮಿಥುನ್ ಜತೆ ಸಂಪರ್ಕದಲ್ಲಿದ್ದಾಳೆ. ತನ್ನ ಭೇಟಿಯಾಗು ಎಂದು ಆತನಿಗೆ ಕರೆ ಮಾಡಿದ್ದಳು.
ಮಿಥುನ್‌ಗೆ ತಿಳಿಯದೆ ಅಲ್ಲಿಗೆ ಹೋಗಿದ್ದಾನೆ, ಆ ಯುವತಿಯ ನಾಲ್ವರು ಸಹೋದರರು ಅಲ್ಲೇ ಕಾಯುತ್ತಿದ್ದರು ಎಂದು ಆರೋಪಿಸಲಾಗಿದೆ. ದೂರಿನ ಪ್ರಕಾರ, ಅವರು ಮಿಥುನ್‌ನನ್ನು ಹಿಡಿದು, ನಿಂದಿಸಿ, ತೀವ್ರವಾಗಿ ಥಳಿಸಿದ್ದಾರೆ. ಸಹೋದರರು ಮಿಥುನ್‌ನ ಕೈ ಮತ್ತು ಕಾಲುಗಳನ್ನು ಕಟ್ಟಿದ್ದರು, ನಂತರ ಆಕೆ ಬ್ಲೇಡ್‌ನಿಂದ ಗುಪ್ತಾಂಗ ಕತ್ತರಿಸಿದ್ದಾಳೆ. ಹಲ್ಲೆಯಿಂದ ತೀವ್ರ ರಕ್ತಸ್ರಾವವಾಯಿತು, ನಂತರ ಆರೋಪಿಗಳು ಮಿಥುನ್‌ನನ್ನು ಮನೆಯಿಂದ ಹೊರಗೆ ಎಸೆದಿದ್ದಾರೆ.
ಗಾಯಗೊಂಡ ವ್ಯಕ್ತಿಯನ್ನು ನೋಡಿದ ಗ್ರಾಮಸ್ಥರೊಬ್ಬರು ಆತನ ತಂದೆಗೆ ಮಾಹಿತಿ ನೀಡಿದರು. ಬಸಂತ್ ಲಾಲ್ ತನ್ನ ಮಗನನ್ನು ಆಸ್ಪತ್ರೆಗೆ ಸಾಗಿಸಿದರು, ಅಲ್ಲಿ ಮಿಥುನ್ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾನೆ. ಅವನ ಸ್ಥಿತಿ ಗಂಭೀರವಾಗಿದೆ. ವೈದ್ಯಕೀಯ ಚಿಕಿತ್ಸೆ ಮತ್ತು ಹೊಲಿಗೆಗಳನ್ನು ನೀಡಲಾಗಿದ್ದರೂ, ಅತಿಯಾದ ರಕ್ತದ ನಷ್ಟದಿಂದಾಗಿ ಅವನು ಪ್ರಜ್ಞೆ ಕಳೆದುಕೊಳ್ಳುತ್ತಲೇ ಇದ್ದಾನೆ.
ಎರಡು ಕುಟುಂಬಗಳ ನಡುವೆ ಮೊದಲೇ ದ್ವೇಷವಿತ್ತು, ಇದಕ್ಕೆ ಒಮ್ಮೆ ಪೊಲೀಸರ ಹಸ್ತಕ್ಷೇಪದ ಅಗತ್ಯವಿತ್ತು ಆದರೆ ಮಾತಿನಲ್ಲೇ ಬಗೆಹರಿಸಿಕೊಂಡಿದ್ದೆವು ಎಂದು ತಂದೆ ಹೇಳಿದ್ದಾರೆ, ಆಕೆ ಉದ್ದೇಶಪೂರ್ವಕವಾಗಿ ಭೇಟಿಯಾಗುವ ನೆಪದಲ್ಲಿ ತನ್ನ ಮಗನನ್ನು ತನ್ನ ಮನೆಗೆ ಕರೆದೊಯ್ದು ಹಲ್ಲೆ ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ. ಎರಡೂ ಕಡೆಯಿಂದ ದೂರುಗಳು ಬಂದಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಗೋರಖ್‌ಪುರ ನಗರ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ತ್ಯಾಗಿ ದೃಢಪಡಿಸಿದ್ದಾರೆ.