ಪತ್ನಿ ಮನೆ ಬಿಟ್ಟು ಹೋಗಿದ್ದಕ್ಕೆ ಆಕೆ ಹಾಗೂ ಆಕೆಯ ತವರು ಮನೆಯವರಿಗೆ ಬುದ್ಧಿ ಕಲಿಸಬೇಕೆಂದು ನಾದಿನಿಯನ್ನು ಕೊಲೆ ಮಾಡಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಆರೋಪಿಯನ್ನು ಬಿಹಾರದ ಮುಂಗೇರ್ ಜಿಲ್ಲೆಯ ಮೂಲದ ಮೋಹಿತ್ ಕುಮಾರ್ ಎಂದು ಗುರುತಿಸಲಾಗಿದೆ. ಆತ ಬಾಲಕಿಯನ್ನು ಕೊಂದು, ಆಕೆಯ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ, ಶಾಲು ಸುತ್ತಿ ಚರಂಡಿಯಲ್ಲಿ ಎಸೆದು ಬಂದಿದ್ದ. ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ನೆರವಿನಿಂದ ಪೊಲೀಸರು ನಂತರ ಶವವನ್ನು ಚರಂಡಿಯಿಂದ ಹೊರತೆಗೆದಿದ್ದಾರೆ.
ಗುರುಗ್ರಾಮ, ಏಪ್ರಿಲ್ 17: ಪತ್ನಿ ಮನೆ ಬಿಟ್ಟು ಹೋಗಿದ್ದಕ್ಕೆ ವ್ಯಕ್ತಯೊಬ್ಬ ನಾದಿನಿಯನ್ನು ಕೊಲೆ(Murder) ಮಾಡಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಪತ್ನಿ ಮನೆ ಬಿಟ್ಟು ಹೋಗಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಆಕೆಯ 10 ವರ್ಷದ ಪುಟ್ಟ ತಂಗಿಯನ್ನು ಕೊಲೆ ಮಾಡಿದ್ದಾನೆ. ಪೊಲೀಸರು ಆರೋಪಿಯನ್ನು ಈಗಾಗಲೇ ಬಂಧಿಸಿದ್ದಾರೆ. ಆರೋಪಿಯನ್ನು ಬಿಹಾರದ ಮುಂಗೇರ್ ಜಿಲ್ಲೆಯ ಮೂಲದ ಮೋಹಿತ್ ಕುಮಾರ್ ಎಂದು ಗುರುತಿಸಲಾಗಿದೆ.
ಆತ ಬಾಲಕಿಯನ್ನು ಕೊಂದು, ಆಕೆಯ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ, ಶಾಲು ಸುತ್ತಿ ಚರಂಡಿಯಲ್ಲಿ ಎಸೆದು ಬಂದಿದ್ದ. ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ನೆರವಿನಿಂದ ಪೊಲೀಸರು ನಂತರ ಶವವನ್ನು ಚರಂಡಿಯಿಂದ ಹೊರತೆಗೆದಿದ್ದಾರೆ. ಬಾಲಕಿಯ ತಂದೆ ಸೋಮವಾರ ಪಾಲಂ ವಿಹಾರ್ ಪೊಲೀಸ್ ಠಾಣೆಯಲ್ಲಿ ತನ್ನ ಕಿರಿಯ ಮಗಳು ಶನಿವಾರದಿಂದ ಕಾಣೆಯಾಗಿದ್ದಾಳೆಂದು ದೂರು ಕೊಟ್ಟಿದ್ದರು.
ಹುಡುಕಾಟ ಆರಂಭಿಸಿದರೂ, ಆರಂಭದಲ್ಲಿ ಪೊಲೀಸರು ಬಾಲಕಿಯನ್ನು ಪತ್ತೆಹಚ್ಚುವಲ್ಲಿ ವಿಫಲರಾದರು. ವಿಚಾರಣೆಯ ಸಮಯದಲ್ಲಿ, ಹುಡುಗಿಯ ಕುಟುಂಬವು ತಮ್ಮ ಹಿರಿಯ ಮಗಳು ಹಾಗೂ ಆಕೆಯ ಪತಿಯ ಸಂಬಂಧ ಅಷ್ಟು ಚೆನ್ನಾಗಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದರು. ನಂತರ ಪೊಲೀಸರು ಬಜ್‌ಗೇರಾದಿಂದ ಕುಮಾರ್‌ನನ್ನು ಬಂಧಿಸಿದರು. ವಿಚಾರಣೆಯ ಸಮಯದಲ್ಲಿ, ತನ್ನ ವೈವಾಹಿಕ ವಿವಾದದಲ್ಲಿ ಮಧ್ಯಪ್ರವೇಶಿಸದಿದ್ದಕ್ಕಾಗಿ ತನ್ನ ಅತ್ತೆ ಹಾಗೂ ಪತ್ನಿ ಮೇಲೆ ಸೇಡು ತೀರಿಸಿಕೊಳ್ಳಲು ಆಕೆಯನ್ನು ಕೊಂದಿದ್ದಾಗಿ ಹೇಳಿದ್ದಾನೆ.
ತನಗೆ ಮದುವೆಯಾಗಿ ಆರು ವರ್ಷಗಳಾಗಿವೆ ಮತ್ತು ಒಂದು ಮಗುವಿದೆ, ಆದರೆ ಹೆಂಡತಿ ತನ್ನನ್ನು ಬಿಟ್ಟು ಹೋಗಿದ್ದಾಳೆ. ತಾನು ಈ ಹಿಂದೆ ತನ್ನ ಮಾವನ ಕತ್ತು ಹಿಸುಕಲು ಪ್ರಯತ್ನಿಸಿದ್ದೆ ಮತ್ತು ತನ್ನ ಅತ್ತೆಯ ಮೇಲೆ ಸೇಡು ತೀರಿಸಿಕೊಳ್ಳಲು ಯೋಜಿಸುತ್ತಿದ್ದೆ ಎಂದು ಹೇಳಿದ್ದಾನೆ.
ಶನಿವಾರ, ಕುಮಾರ್ ಓಂ ನಗರದಿಂದ ಸಾನಿಯಾ ಎಂಬ ಹುಡುಗಿಯನ್ನು ತನ್ನ ಮೋಟಾರ್ ಸೈಕಲ್‌ನಲ್ಲಿ ಬಜ್‌ಗೇರಾದಲ್ಲಿರುವ ತನ್ನ ಬಾಡಿಗೆ ಕೋಣೆಗೆ ಕರೆದೊಯ್ದು ಕತ್ತು ಹಿಸುಕಿ ಕೊಲೆ ಮಾಡಿದ್ದ. ನಂತರ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ, ಶಾಲು ಸುತ್ತಿ, ಚೀಲದೊಳಗೆ ಇರಿಸಿ, ಬಜ್‌ಗೇರಾ ಚರಂಡಿಗೆ ಎಸೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಎಫ್‌ಐಆರ್‌ಗೆ ಈಗ ಕೊಲೆ ಆರೋಪವನ್ನು ಸೇರಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ಹೆಚ್ಚಿನ ತನಿಖೆ ಮುಂದುವರೆದಿದ್ದು, ಕುಮಾರ್ ಬಂಧನದಲ್ಲಿದ್ದಾನೆ.