ಪ್ರೇಮಿಯೊಂದಿಗೆ ಸಿಕ್ಕಿ ಬಿದ್ದ ಪತ್ನಿ, ದುಪಟ್ಟಾದಿಂದ ಕುತ್ತಿಗೆ ಬಿಗಿದು ಪತಿಯ ಕೊಲೆ Wife, caught with lover, kills husband by strangling him with dupatta

ಪ್ರೇಮಿಯೊಂದಿಗೆ ಸಿಕ್ಕಿ ಬಿದ್ದ ಪತ್ನಿ, ದುಪಟ್ಟಾದಿಂದ ಕುತ್ತಿಗೆ ಬಿಗಿದು ಪತಿಯ ಕೊಲೆ Wife, caught with lover, kills husband by strangling him with dupatta

ತನ್ನ ಗುಟ್ಟು ಪತಿಗೆ ಗೊತ್ತಾಯಿತೆಂದು ಮಹಿಳೆಯೊಬ್ಬಳು ಪತಿಯನ್ನು ಕೊಲೆ ಮಾಡಿರುವ ಘಟನೆ ಹರ್ಯಾಣದಲ್ಲಿ ನಡೆದಿದೆ. ಈಗಲೂ ಕೂಡ ತಮ್ಮ ವಿಷಯ ಪತಿಗೆ ಗೊತ್ತಾಯಿತೆಂಬ ಭಯದಲ್ಲಿ ಆತನನ್ನು ಕೊಂದಿದ್ದಾಳೆ. ಆಕೆ ಯೂಟ್ಯೂಬರ್ ಆಗಿದ್ದು, ಒಂದೂವರೆ ವರ್ಷಗಳ ಹಿಂದೆ ಸುರೇಶ್ ಎಂಬಾತನನ್ನು ಇನ್​ಸ್ಟಾಗ್ರಾಮ್​ನಲ್ಲಿ ಭೇಟಿಯಾಗಿದ್ದಳು. ಪತಿ ಪ್ರವೀಣ್ ಆಕೆ ನಿತ್ಯವೂ ಸೋಷಿಯಲ್ ಮೀಡಿಯಾದಲ್ಲಿ ಸಮಯ ಕಳೆಯುವುದರ ಕುರಿತು ಜಗಳವಾಡುತ್ತಿದ್ದರು.

ಹರ್ಯಾಣ, ಏಪ್ರಿಲ್ 16: ತಾನು ಪ್ರೇಮಿಯೊಂದಿಗಿರುವುದನ್ನು ಪತಿ(Husband) ನೋಡಿದ್ದಕ್ಕೆ, ಆತನ ಕುತ್ತಿಗೆಗೆ ದುಪಟ್ಟಾ ಬಿಗಿದು ಕೊಲೆ ಮಾಡಿರುವ ಘಟನೆ ಹರ್ಯಾಣದಲ್ಲಿ ನಡೆದಿದೆ. ಇತ್ತೀಚೆಗೆ ಮೀರತ್​ನಲ್ಲಿ ಇಂಥದ್ದೇ ಘಟನೆಯೊಂದು ನಡೆದಿದ್ದು, ಮಹಿಳೆ ಹಾಗೂ ಆಕೆಯ ಪ್ರೇಮಿ ಸೇರಿಕೊಂಡು ಪತಿಯನ್ನು ಕೊಲೆ, ತುಂಡಾಗಿ ಕತ್ತರಿಸಿ ಪ್ಲಾಸ್ಟಿಕ್ ಡ್ರಮ್​ನಲ್ಲಿ ಹಾಕಿ ಸಿಮೆಂಟ್​ನಿಂದ ಸೀಲ್ ಮಾಡಿರುವ ಘಟನೆ ನಡೆದಿತ್ತು.

ಈಗಲೂ ಕೂಡ ತಮ್ಮ ವಿಷಯ ಪತಿಗೆ ಗೊತ್ತಾಯಿತೆಂಬ ಭಯದಲ್ಲಿ ಆತನನ್ನು ಕೊಂದಿದ್ದಾಳೆ.  ರವೀನಾ ಯೂಟ್ಯೂಬರ್ ಆಗಿದ್ದು, ಒಂದೂವರೆ ವರ್ಷಗಳ ಹಿಂದೆ ಸುರೇಶ್ ಎಂಬಾತನನ್ನು ಇನ್​ಸ್ಟಾಗ್ರಾಮ್​ನಲ್ಲಿ ಭೇಟಿಯಾಗಿದ್ದಳು. ಪತಿ ಪ್ರವೀಣ್ ಆಕೆ ನಿತ್ಯವೂ ಸೋಷಿಯಲ್ ಮೀಡಿಯಾದಲ್ಲಿ ಸಮಯ ಕಳೆಯುವುದರ ಕುರಿತು ಜಗಳವಾಡುತ್ತಿದ್ದರು.

ಪ್ರವೀಣ್ ಮನೆಗೆ ಬಂದಾಗ ಆತನಿಗಿದ್ದ ಭಯ ನಿಜವಾಗಿತ್ತು, ಆಕೆ ಸುರೇಶ್​ ಎಂಬುವವನ ಜತೆ ಇದ್ದುದನ್ನು ಕಂಡು ತಾಳ್ಮೆ ಕಳೆದುಕೊಂಡಿದ್ದಾನೆ. ಬಳಿಕ ವಾಗ್ವಾದ ನಡೆದಿತ್ತು. ನಂತರ ಮಹಿಳೆ ದುಪಟ್ಟಾದಿಂದ ಪ್ರವೀಣ್​ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಸಂಜೆಯಾಗುವವರೆಗೆ ಹೆಣವನ್ನು ಅಲ್ಲೇ ಇಟ್ಟುಕೊಂಡು ಬಳಿಕ, 6 ಕಿ.ಮೀ ಬೈಕ್​ನಲ್ಲಿ ಹೋಗಿ ಚರಂಡಿಗೆ ದೇಹ ಎಸೆದಿದ್ದರು.

ಮೂರು ದಿನಗಳ ಬಳಿಕ ಪ್ರವೀಣ್ ಅವರ ಕೊಳೆತ ಶವ ಚರಂಡಿಯಲ್ಲಿ ಸಿಕ್ಕಿತ್ತು. ಆ ಪ್ರದೇಶದಲ್ಲಿರುವ ಸಿಸಿಟಿವಿ ಕ್ಯಾಮರಾಗಳಲ್ಲಿ ಈ ಕೃತ್ಯ ಸೆರೆಯಾಗಿದೆ. ಯೂಟ್ಯೂಬರ್​ ಆಗಿದ್ದ ಮಹಿಳೆಗೆ 34 ಸಾವಿರ ಫಾಲೋವರ್ಸ್​ ಇದ್ದಾರೆ. ಆಕೆ ಹಾಸ್ಯ ಹಾಗೂ ಕೌಂಟುಂಬಿಕ ಸಮಸ್ಯೆಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು ಪೋಸ್ಟ್​ ಮಾಡುತ್ತಿದ್ದಳು. ಅವರಿಬ್ಬರಿಗೆ 6 ವರ್ಷದ ಮಗನಿದ್ದಾನೆ. ಆಕೆ ವಿಡಿಯೋ ಚಿತ್ರೀಕರಿಸಲು ಆಗಾಗ ಬೇರೆ ಕಡೆಗೆ ಹೋಗುತ್ತಿದ್ದಳು. ಪ್ರವೀಣ್ ಮತ್ತು ಕುಟುಂಬದ ಇತರರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು ಮತ್ತು ಆಗಾಗ ವಾದಗಳು ನಡೆಯುತ್ತಿದ್ದವು.

ಮಾರ್ಚ್​ 25ರಂದು ಶೂಟಿಂಗ್​ಗೆ ಹೊರ ಹೋಗಿದ್ದಳು, ಬಳಿಕ ಪ್ರವೀಣ್ ಮನೆಗೆ ಬರುವಾಗ ಆಕೆ ಸುರೇಶ್​ ಜತೆ ಮನೆಯಲ್ಲಿದ್ದಳು. ಅದನ್ನು ನೋಡಿ ಜಗಳ ಶುರುವಾಗಿತ್ತು, ಅದು ಕೊಲೆಯ ರೂಪ ತಾಳಿತ್ತು. ಪತ್ನಿಯಿಂದ ಆತ ಕೊಲೆಯಾಗಿಬಿಟ್ಟಿದ್ದ. ಸಂಜೆಯವರೆಗೆ ಕಾದು ಆಮೇಲೆ ಶವವನ್ನು ವಿಲೇವಾರಿ ಮಾಡಿದ್ದರು.

Spread the love

Leave a Reply

Your email address will not be published. Required fields are marked *