ತಂದೆಯ ಹಳೆಯ ಪಾಸ್ ಬುಕ್​​​ನಿಂದಲೇ ಖುಲಾಯಿಸಿತು ಮಗನ ಅದೃಷ್ಟ, ಕೋಟಿಗಟ್ಟಲೇ ಹಣವು ಕೈ ಸೇರಿದ್ದು ಹೇಗೆ? ಇಲ್ಲಿದೆ ಮಾಹಿತಿ Son’s fortune was revealed from his father’s old passbook, how did crores of money end up in his hands? Here’s the information

ತಂದೆಯ ಹಳೆಯ ಪಾಸ್ ಬುಕ್​​​ನಿಂದಲೇ ಖುಲಾಯಿಸಿತು ಮಗನ ಅದೃಷ್ಟ, ಕೋಟಿಗಟ್ಟಲೇ ಹಣವು ಕೈ ಸೇರಿದ್ದು ಹೇಗೆ? ಇಲ್ಲಿದೆ ಮಾಹಿತಿ Son’s fortune was revealed from his father’s old passbook, how did crores of money end up in his hands? Here’s the information

ಅದೃಷ್ಟ ಯಾವಾಗ ಹೇಗೆ ಬದಲಾಗುತ್ತದೆ ಎಂದು ಹೇಳಲು ಅಸಾಧ್ಯ. ಕೆಲವರು ರಾತ್ರಿ ಬೆಳಗಾಗುವುದರೊಳಗೆ ಕೋಟ್ಯಾಧಿಪತಿಗಳಾಗಿರುವ ಘಟನೆಗಳನ್ನು ಕೇಳಿರಬಹುದು. ಆದರೆ, ವ್ಯಕ್ತಿಯೊಬ್ಬನಿಗೆ ಕಸದ ತೊಟ್ಟಿಯಲ್ಲಿ ತನ್ನ ತಂದೆಯ 62 ವರ್ಷದ ಹಳೆಯ ಪಾಸ್‌ಬುಕ್ ಸಿಕ್ಕಿದ್ದು, ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾನೆ. ತಂದೆ ಮರಣ ಹೊಂದಿದ ಹತ್ತು ವರ್ಷಗಳ ಬಳಿಕ ಆತನ ಅದೃಷ್ಟವೇ ಬದಲಾಗಿದೆ. ಅದೇಗೆ ಅಂತೀರಾ ಈ ಕುರಿತಾದ ಕುತೂಹಕಾರಿಯಾದ ಮಾಹಿತಿ ಇಲ್ಲಿದೆ.

ಪ್ರತಿಯೊಬ್ಬರ ಬಳಿ ಬ್ಯಾಂಕ್ ಪಾಸ್ ಬುಕ್ (bank pass book) ಇದ್ದೆ ಇರುತ್ತದೆ. ಕೆಲವರ ಪಾಸ್ ಬುಕ್ ನಲ್ಲಿ ಒಂದೇ ಒಂದು ರೂಪಾಯಿ ಹಣವು ಇರುವುದಿಲ್ಲ, ಇನ್ನು ಕೆಲವರು ತಮ್ಮ ದುಡಿಮೆಯ ಹಣವನ್ನು ಮಕ್ಕಳ ಭವಿಷ್ಯ (future) ಕ್ಕಾಗಿ ಉಳಿಸುತ್ತಾರೆ. ಮಕ್ಕಳ ಹೆಸರಿನಲ್ಲಿ ಠೇವಣಿ (deposit) ಇಟ್ಟಿರುತ್ತಾರೆ. ಪೋಷಕರ ಮರಣದ ನಂತರ ಆ ಹಣವು ಮಕ್ಕಳಿಗೆ ಸೇರುತ್ತಾರೆ. ಅದಲ್ಲದೇ ಪೋಷಕರು ಕೂಡಿಟ್ಟ ಹಣದಲ್ಲಿ ಐಷಾರಾಮಿ ಜೀವನ ನಡೆಯುತ್ತಿರುವವರು ಅದೆಷ್ಟೋ ಜನರಿದ್ದಾರೆ. ಆದರೆ ಇಲ್ಲೊಬ್ಬನಿಗೆ ತನ್ನ ತಂದೆಯ ಹಳೆಯ ಪಾಸ್ ಬುಕ್ (old passbook) ನಿಂದಲೇ ಅದೃಷ್ಟ ಖುಲಾಯಿಸಿದೆ. ಚಿಲಿ (chile) ಯ ಎಕ್ಸೆಕ್ವಿಯಲ್ ಹಿನೊಜೋಸಾ (exequiel hinojosa) ತನ್ನ ತಂದೆಯ ಹಳೆಯ ಪಾಸ್ ಬುಕ್ ನಿಂದಲೇ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾನೆ.

ತಂದೆ ಮರಣ ಹೊಂದಿದ ಹತ್ತು ವರ್ಷದ ಬಳಿಕ ಹಿನೊಜೋಸಾ ನಿಗೆ ತನ್ನ ತಂದೆಯ ಪಾಸ್ ಬುಕ್ ವೊಂದು ಸಿಕ್ಕಿದೆ. ಈ ಪಾಸ್‌ಬುಕ್ ಅನ್ನು 1960-70ರ ದಶಕದ್ದಾಗಿತ್ತು. ಹೌದು, ಮನೆ ಸ್ವಚ್ಛಗೊಳಿಸುತ್ತಿದ್ದಾಗ ಈ ಪಾಸ್ ಬುಕ್ ಸಿಕ್ಕಿದ್ದು, ವೇಸ್ಟ್ ಕಾಗದ ಎಂದುಕೊಂಡು ಅದರ ಬಗ್ಗೆ ಅಷ್ಟೇನು ತಲೆ ಕೆಡಿಸಿಕೊಳ್ಳಲಿಲ್ಲ. ಆಮೇಲೆ ಅದನ್ನು ಸೂಕ್ಷ್ಮವಾಗಿ ಗಮನಿಸಿದಾಗ ತಂದೆಯ ಪಾಸ್ ಬುಕ್ ಎಂದು ತಿಳಿಯಿತು. ಮಗನಿಗೆ ಗೊತ್ತಿಲ್ಲದ್ದಂತೆ ಆತನ ಹೆಸರಿನಲ್ಲಿ 1.40 ಲಕ್ಷ (ಚಿಲಿಯ ಪೈಸೆಗಳಲ್ಲಿ) ಠೇವಣಿ ಇಟ್ಟಿದ್ದರು ಎನ್ನುವುದು ತಿಳಿಯಿತು.

ಹೀಗಾಗಿ ಈ ಬಗ್ಗೆ ಬ್ಯಾಂಕ್ ಗೆ ತೆರಳಿ ಈ ಬಗ್ಗೆ ವಿಚಾರಿಸಿದ ಮೇಲೆ ತಂದೆ ಮರಣ ಹೊಂದಿ ಹತ್ತು ವರ್ಷವಾಗಿದ್ದ ಕಾರಣ ಅವರ ಬ್ಯಾಂಕ್ ಖಾತೆಯೂ ಕ್ಲೋಸ್ ಆಗಿದೆ ಎನ್ನುವುದು ತಿಳಿಯಿತು. ಕೊನೆಗೆ ತನ್ನ ಹೆಸರಿನಲ್ಲಿ ಇಟ್ಟಿದ್ದ ಹಣವು ತನ್ನ ಕೈ ಸೇರುವುದು ಕನಸು ಎಂದುಕೊಂಡೆ ಸುಮ್ಮನೆಯಾದರು. ಆದರೆ ಈ ಹಳೆಯ ಪಾಸ್ ಬುಕ್ ನಲ್ಲಿ ಸ್ಟೇಟ್ ಗ್ಯಾರಂಟಿಡ್ ಎಂದು ಬರೆದಿತ್ತು. ಈ ಹೇಳಿಕೆಯಂತೆ ಬ್ಯಾಂಕ್ ಹಣವನ್ನು ನೀಡದಿದ್ದರೆ, ಸರ್ಕಾರವು ಆ ಹಣವನ್ನು ನಿಡುತ್ತದೆ ಎನ್ನುವುದಗಿತ್ತು. ಹೀಗಾಗಿ ಎಕ್ಸೆಕ್ವಿಯಲ್ ಹಿನೊಜೋಸಾ ಹಣವನ್ನು ಮರಳಿ ಪಡೆಯಲು ಸಾಕಷ್ಟು ಪ್ರಯತ್ನ ಪಟ್ಟರೂ ಸರ್ಕಾರವು ತಂದೆಯು ತನ್ನ ಹೆಸರಿನಲ್ಲಿಟ್ಟ ಠೇವಣಿ ಹಣವನ್ನು ನೀಡಲು ಮುಂದಾಗಿರಲಿಲ್ಲ. ಕೊನೆಗೆ ತನ್ನ ತಂದೆ ಠೇವಣಿ ಇಟ್ಟಿದ್ದ ಹಣವನ್ನು ಮರಳಿ ಪಡೆಯುವ ಸಲುವಾಗಿ ಕಾನೂನಿನ ಮೊರೆ ಹೋಗಿದ್ದು ಆತನ ಅದೃಷ್ಟವೇ ಬದಲಾಗಿದೆ.

ನ್ಯಾಯಾಲಯದ ಮೊರೆ ಹೋದ ಎಕ್ಸೆಕ್ವಿಯಲ್ ಹಿನೊಜೋಸಾ ಪರವಾಗಿಯೇ ನ್ಯಾಯಾಲಯವು ತೀರ್ಪು ನೀಡಿದೆ. ತಂದೆ ಇಟ್ಟಿದ್ದ ಠೇವಣಿಯ ಹಣವು 1.40 ಲಕ್ಷ ಚಿಲಿಯ ಪೈಸೆಗಳಾಗಿದ್ದರೂ ಕೂಡ ಮಗನ ಕೈಗೆ ಬರೋಬ್ಬರಿ 1.2 ಮಿಲಿಯನ್ ಡಾಲರ್‌ (ಭಾರತೀಯ ಕರೆನ್ಸಿಯಲ್ಲಿ 10 ಕೋಟಿ ರೂ.) ಕೈ ಸೇರಿತು. ಹೌದು, ನ್ಯಾಯಾಲಯವು ಹಿನೊಜೋಸಾಗೆ ಬಡ್ಡಿ ಸಮೇತವಾಗಿ ಒಂದು ಬಿಲಿಯನ್ ಚಿಲಿಯ ಪೈಸೆಗಳನ್ನು ಪಾವತಿಸಬೇಕೆಂದು ಸರ್ಕಾರಕ್ಕೆ ಆದೇಶಿಸಿತು. ತಂದೆ ಮರಣ ಹೊಂದಿ ಹತ್ತು ವರ್ಷ ಕಳೆದ ಬಳಿಕ ಹಳೆಯ ಪಾಸ್ ಬುಕ್ ಮಗನ ಅದೃಷ್ಟವನ್ನೇ ಬದಲಾಯಿಸಿತು ಎನ್ನುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ.



Spread the love

Leave a Reply

Your email address will not be published. Required fields are marked *