Cyber Crime: ಹಣ ಕೊಡದಿದ್ದರೆ ನಗ್ನ ಫೋಟೋ ವೈರಲ್ ಮಾಡ್ತೀವಿ! ಸೈಬರ್ ಕಿರುಕುಳಕ್ಕೆ ವೃದ್ಧ ಜೀವಗಳು ಬಲಿ! Cyber ​​Crime: If you don’t pay, you’ll make your nude photo viral! Elderly lives lost to cyber harassment!

Cyber Crime: ಹಣ ಕೊಡದಿದ್ದರೆ ನಗ್ನ ಫೋಟೋ ವೈರಲ್ ಮಾಡ್ತೀವಿ! ಸೈಬರ್ ಕಿರುಕುಳಕ್ಕೆ ವೃದ್ಧ ಜೀವಗಳು ಬಲಿ! Cyber ​​Crime: If you don’t pay, you’ll make your nude photo viral! Elderly lives lost to cyber harassment!

ಈ ವೃದ್ಧ ದಂಪತಿ ಆತ್ಮಹತ್ಯೆಗೆ ಸೈಬರ್ ವಂಚಕರೇ ಕಾರಣ ಎನ್ನಲಾಗಿದೆ. ಕಳೆದ 1 ತಿಂಗಳ ಹಿಂದೆ ಈ ವೃದ್ಧ ದಂಪತಿ ಬೆನ್ನು ಬಿದ್ದ ಸೈಬರ್ ವಂಚಕರು, ನಗ್ನ ಫೋಟೋ ಇದೆ ಅಂತ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರಂತೆ!


ಬೆಳಗಾವಿ: ಸೈಬರ್ ವಂಚಕರ (cyber frauds) ಮೋಸದ ಜಾಲಕ್ಕೆ ಸಿಲುಕಿ ವೃದ್ಧ ಗಂಡ ಹೆಂಡತಿ (Odl Couple) ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಇಂಥದ್ದೊಂದು ಘಟನೆ ಬೆಳಗಾವಿ (Belagavi) ಜಿಲ್ಲೆಯ ಖಾನಾಪುರ (Khanapur) ತಾಲೂಕಿನ ಬಿಡಿ ಗ್ರಾಮದಲ್ಲಿ ನಡೆದಿದೆ. ನಿವೃತ್ತ ರೈಲ್ವೆ ಉದ್ಯೋಗಿ, 83 ವರ್ಷದ ಡಿಯಾಗೋ ನಜರತ್ (Diego Najarat) ಹಾಗೂ ಅವರ ಪತ್ನಿ, 79 ವರ್ಷದ ಪಾವಿಯಾ ನಜರತ್ (Pavia Najarat) ಆತ್ಮಹತ್ಯೆ ಮಾಡಿಕೊಂಡ ವೃದ್ಧ ದಂಪತಿ. ಸೈಬರ್ ವಂಚಕರು ಈ ದಂಪತಿಗೆ ಪದೇ ಪದೇ ವಿಡಿಯೋ ಕಾಲ್ (Video Call) ಮಾಡಿ, ನಿಮ್ಮ ನಗ್ನ ಫೋಟೋಗಳಿವೆ. ಹಣ (Money) ಕೊಡದಿದ್ದರೆ ವೈರಲ್ (Viral) ಮಾಡ್ತೀವಿ ಅಂತ ಬೆದರಿಕೆ ಹಾಕುತ್ತಿದ್ದರಂತೆ. ಕೊನೆಗೆ ಸೈಬರ್ ವಂಚಕರ ಕಿರುಕುಳ ತಾಳಲಾರದೇ ಪತ್ನಿ ಪಾವಿಯಾ ಜನರತ್ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಅವರ ಪತಿ ಚಾಕುವಿನಿಂದ ಕತ್ತು ಕುಯ್ದುಕೊಂಡು, ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬೆಳಗಾವಿಯಲ್ಲಿ ವೃದ್ಧ ದಂಪತಿ ಆತ್ಮಹತ್ಯೆ

ಬೆಳಗಾವಿಯ ಖಾನಾಪುರ ತಾಲೂಕಿನ ಬಿಡಿ ಗ್ರಾಮದಲ್ಲಿ ವೃದ್ಧ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪಾವಿಯಾ ಜನರತ್ ಎಂಬುವರು ನಿದ್ದೆ ಮಾತ್ರೆ ಸೇವಿಸಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಳಿಕ ಅದನ್ನು ನೋಡಿದ ಅವರ ಪತಿ ಡಿಯಾಗೋ ನಜರತ್, ಡೆತ್ ನೋಟ್ ಬರೆದಿಟ್ಟು, ತಮ್ಮ ಕತ್ತು ಕುಯ್ದುಕೊಂಡು ಸಾವಿಗೆ ಶರಣಾಗಿದ್ದಾರೆ.















Spread the love

Leave a Reply

Your email address will not be published. Required fields are marked *