ಮಕ್ಕಳಿರಬೇಕು ಮನೆ ತುಂಬ ಅಂತಾರೆ. ಪುಟ್ಟ ಪುಟ್ಟ ಮಕ್ಕಳು ಅಳುವ ಶಬ್ಧ, ನಗುವುದು, ತರ್ಲೆ ಮಾಡುವುದು ಇದೆಲ್ಲಾ ಕೇಳಿದ್ರೆ ಪೋಷಕರಿಗೆ ಆನಂದ ಎನ್ನುತ್ತಾರೆ. ಆದರೆ ಇಲ್ಲೊಬ್ಬ ಪಾಪಿ ತಾಯಿ ಮಗುವಿನ ನಿರಂತರ ಅಳುವ ಶಬ್ಧ ಕೇಳಲಾಗದೆ ಮಗುವನ್ನೇ ಕೊಂದಿದ್ದಾಳೆ.
ಗುಜರಾತ್ : ಮಕ್ಕಳಿರಲವ್ವ (Children) ಮನೆ ತುಂಬ ಅಂತಾರೆ. ಪುಟ್ಟ ಪುಟ್ಟ ಮಕ್ಕಳು ಅಳುವ ಶಬ್ಧ (Crying Sound), ನಗುವ ಶಬ್ಧ, ತರ್ಲೆ, ತಮಾಷೆ (Joke) ತುಂಟಾಟ ಇದೆಲ್ಲವನ್ನು ನೋಡಿ ಪೋಷಕರು ಆನಂದ (Parents Enjoy) ಮಾಡ್ತಾರೆ. ಆದರೆ ಇಲ್ಲೊಬ್ಬ ಪಾಪಿ ತಾಯಿ (Cruel Mother) ತನ್ನ ಮಗುವಿನ ಅಳುವ ಧ್ವನಿ ಕೇಳಲಾಗದೇ ಮಗವಿನ ಉಸಿರನ್ನೇ ನಿಲ್ಲಿಸಿದ್ದಾಳೆ. ತನ್ನ ಮಗುವನ್ನು ತಾನೇ ಕೊಂದು (Kill) ನೀರಿನ ಟ್ಯಾಂಕ್ಗೆ (Water Tank) ಎಸೆದಿರುವ ಅಮಾನವೀಯ ಘಟನೆ ನಡೆದಿದೆ.
ಅಹಮದಾಬಾದ್‌ನಲ್ಲಿ 22 ವರ್ಷದ ಮಹಿಳೆಯೊಬ್ಬರು ತನ್ನ ಶಿಶುವಿನ ನಿರಂತರ ಅಳುವಿಕೆಯಿಂದ ತೊಂದರೆಗೀಡಾಗಿ ನಂತರ ಮಗುವನ್ನೇ ಕೊಂದಿದ್ದಾಳೆ. ಮಗುವಿನ ಅಳುವಿನ ಧ್ವನಿಯಿಂದ ಕಿರಿಕಿರಿಗೊಂಡ ತಾಯಿ ತನ್ನ ಮಗುವನ್ನೇ ಕೊಂದಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೂರು ತಿಂಗಳ ಮಗು ಕಾಣೆಯಾಗಿದೆ ಎಂದು ಕಥೆ ಕಟ್ಟಿದ್ದ ತಾಯಿ