ಬೇಸಿಗೆಯಲ್ಲಿ ತಣ್ಣನೆಯ ಕಬ್ಬಿನ ಜ್ಯೂಸ್ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಆಗಿದೆ. ಇದು ದೇಹಕ್ಕೆ ಶಕ್ತಿ ಒದಗಿಸುತ್ತದೆ, ಜೀರ್ಣಕ್ರಿಯೆ ಸುಧಾರಿಸುತ್ತದೆ, ದೇಹವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಚರ್ಮದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.
ಬೇಸಿಗೆಯಲ್ಲಿ ಮಧ್ಯಾಹ್ನ ನೆತ್ತಿ ಸುಡುವಷ್ಟರ ಮಟ್ಟಿಗೆ ಬಿಸಿಲಿರುತ್ತದೆ. ಇಂತಹ ಸಮಯದಲ್ಲಿ ಸಾಕಷ್ಟು ಮಂದಿ ರಸ್ತೆಬದಿಯಲ್ಲಿರುವ ಜ್ಯೂಸ್ ಅಂಗಡಿಯಲ್ಲಿ ಒಂದು ಲೋಟ್ ತಣ್ಣನೆಯ ಕಬ್ಬಿನ ಜ್ಯೂಸ್ ಅನ್ನು ಕುಡಿಯಲು ಬಯಸುತ್ತಾರೆ. ಕಬ್ಬಿನ ಜ್ಯೂಸ್ ಬಾಯಾರಿಕೆಯನ್ನು ನೀಗಿಸುವುದಷ್ಟೇ ಅಲ್ಲದೇ ಸಾಕಷ್ಟು ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ಒದಗಿಸುತ್ತದೆ. ಕಬ್ಬಿನ ಜ್ಯೂಸ್ ಅತ್ಯುತ್ತಮ ಪೌಷ್ಠಿಕಾಂಶ ಮತ್ತು ನೈಸರ್ಗಿಕ ಸಿಹಿಯ ಅಂಶವನ್ನು ಹೊಂದಿದ್ದು, ಜಲಸಂಚಯನ, ಶಕ್ತಿ ಮತ್ತು ಉತ್ತಮ ಜೀರ್ಣಕ್ರಿಯೆ ಸೇರಿದಂತೆ ಹಲವು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
ತ್ವರಿತ ಶಕ್ತಿ ವರ್ಧಕ: ಕಬ್ಬಿನ ಜ್ಯೂಸ್ ಸುಕ್ರೋಸ್‌ನಂತಹ ನೈಸರ್ಗಿಕ ಸಕ್ಕರೆ ಅಂಶಗಳಿಂದ ಸಮೃದ್ಧವಾಗಿದೆ. ಇದು ದೇಹಕ್ಕೆ ತಕ್ಷಣವೇ ಶಕ್ತಿಯನ್ನು ನೀಡುತ್ತದೆ. ಕಬ್ಬಿನ ಜ್ಯೂಸ್ನಲ್ಲಿರುವ ಸರಳ ಸಕ್ಕರೆಯ ಅಂಶವನ್ನು ದೇಹವು ಸುಲಭವಾಗಿ ಹೀರಿಕೊಳ್ಳುತ್ತದೆ. ಇದು ನಮಗೆ ತಕ್ಷಣ ಶಕ್ತಿಯನ್ನು ನೀಡುತ್ತದೆ ಮತ್ತು ದೇಹವನ್ನು ಹೈಡ್ರೀಕರಿಸಿದ ಭಾವನೆಯನ್ನು ನೀಡುತ್ತದೆ. ಹಾಗಾಗಿ, ಬೇಸಿಗೆಯ ಸಮಯದಲ್ಲಿ ಮಧ್ಯಾಹ್ನ ನೀವು ನಿರ್ಜಲೀಕರಣಗೊಂಡಿದ್ದರೆ ಮತ್ತು ಶಕ್ತಿಯ ಕೊರತೆಯನ್ನು ಹೊಂದಿದ್ದರೆ, ಶಾಖವನ್ನು ಕಡಿಮೆ ಮಾಡಿಕೊಳ್ಳಲು ಒಂದು ಲೋಟ ತಣ್ಣನೆಯ ಕಬ್ಬಿನ ಜ್ಯೂಸ್ ಕುಡಿಯಿರಿ.
ಜೀರ್ಣಕ್ರಿಯೆಗೆ ಒಳ್ಳೆಯದು: ಮೊದಲೇ ತಿಳಿಸಿದಂತೆ ಕಬ್ಬಿನ ಜ್ಯೂಸ್ ಜೀರ್ಣಕ್ರಿಯೆಗೆ ಒಳ್ಳೆಯದು. ಅಂದರೆ ಕಬ್ಬಿನ ಜ್ಯೂಸ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದಲ್ಲದೇ, ಈ ಜ್ಯೂಸ್ ಆಮ್ಲೀಯತೆ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ.
ನಿಮ್ಮನ್ನು ಹೈಡ್ರೇಟ್ ಆಗಿಡುತ್ತದೆ: ಕಬ್ಬಿನ ಜ್ಯೂಸ್ ನಮ್ಮ ದೇಹವನ್ನು ಹೈಡ್ರೇಟ್ ಆಗಿಡುತ್ತದೆ ಏಕೆಂದರೆ ಇದರಲ್ಲಿ ನೀರಿನ ಅಂಶ ಹೆಚ್ಚಾಗಿರುತ್ತದೆ.
ಯಕೃತ್ತಿನ ಆರೋಗ್ಯ: ಕಬ್ಬಿನ ಜ್ಯೂಸ್ ಕುಡಿಯುವುದರಿಂದ ಸಿಗುವ ಅತ್ಯಂತ ಅದ್ಭುತ ಪ್ರಯೋಜನವೆಂದರೆ ಯಕೃತ್ತಿನ ಕಾರ್ಯವನ್ನು ಸುಧಾರಿಸುವ ಸಾಮರ್ಥ್ಯ. ಕಬ್ಬಿನ ರಸವು ವಿವಿಧ ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ಇದು ಯಕೃತ್ತಿನ ಸೋಂಕಿನ ವಿರುದ್ಧ ಹೋರಾಡಲು ಮತ್ತು ಬಿಲಿರುಬಿನ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
ಮೂತ್ರಪಿಂಡದ ಕಾರ್ಯಕ್ಕೆ ಪ್ರಯೋಜನಗಳು: ಕಬ್ಬಿನ ರಸವು ಮೂತ್ರವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ, ಇದು ದೇಹದಿಂದ ವಿಷವನ್ನು ಮೂತ್ರಪಿಂಡಗಳ ಮೂಲಕ ಹೊರಹಾಕಲು ಸಹಾಯ ಮಾಡುತ್ತದೆ.
ಚರ್ಮದ ಆರೋಗ್ಯ: ಉತ್ಕರ್ಷಣ ನಿರೋಧಕಗಳು, ಫ್ಲೇವನಾಯ್ಡ್‌ಗಳು ಮತ್ತು ಇತರ ಉರಿಯೂತ ನಿವಾರಕ ಸಂಯುಕ್ತಗಳಿಂದ ಕೂಡಿರುವ ಕಬ್ಬಿನ ಜ್ಯೂಸ್ ಅನ್ನು ಕುಡಿಯುವುದರಿಂದ ಮೊಡವೆಗಳಂತಹ ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಚರ್ಮವನ್ನು ಹೈಡ್ರೀಕರಿಸಿ ಮತ್ತು ಪೋಷಿಸಲು ಸಹಾಯ ಮಾಡುತ್ತದೆ, ಚರ್ಮದ ಮೇಲೆ ವಯಸ್ಸಾದ ಚಿಹ್ನೆಗಳು ಕಾಣಿಸಿಕೊಳ್ಳುವುದನ್ನು ವಿಳಂಬಗೊಳಿಸುತ್ತದೆ.
ನೈಸರ್ಗಿಕವಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಕಬ್ಬಿನ ಜ್ಯೂಸ್ನಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ ಮತ್ತು ವಿಟಮಿನ್ ಎ, ಬಿ1, ಬಿ2 ಮತ್ತು ಸಿ ನಂತಹ ಅಗತ್ಯ ಪೋಷಕಾಂಶಗಳಿವೆ. ಇವೆಲ್ಲವೂ ನಮ್ಮ ರೋಗ ನಿರೋಧಕ ಶಕ್ತಿಯನ್ನು ನೈಸರ್ಗಿಕವಾಗಿ ಹೆಚ್ಚಿಸಲು ಸಹಾಯ ಮಾಡುತ್ತದೆ. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)