ತಾಲೂಕುಸಂಘಗಳಿಗೆ ನಡೆದ ಚುನಾವಣೆಯಲ್ಲಿ ವಿಜೇತರಾದವರಿಗೆ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ
ದೇವನಹಳ್ಳಿ : ಮಾಧ್ಯಮಕ್ಷೇಮಾಭಿವೃದ್ಧಿಗೆ ಎಲ್ಲರ ಒಗ್ಗಟ್ಟು ಅತ್ಯವಶ್ಯಕ, ಎಲ್ಲರೂ ಒಗ್ಗೂಡಿ ಸಂಘವನ್ನು ಮುನ್ನಡೆಸಿ, ಚುನಾವಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತ ನಂತರ ಎಲ್ಲಾ ಪತ್ರಕರ್ತರು ಒಗ್ಗೂಡಿ ಸಂಘವನ್ನು ಮುನ್ನಡೆಸಿಕೊಂಡು ಹೋಗಬೇಕು ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಕೆಲಸ ಮಾಡಿ ಎಂದು
ಮುಖ್ಯಚುನಾವಣಾಧಿಕಾರಿ ಜಿ.ಎಸ್.ಮಂಜುನಾಥ್ ತಿಳಿಸಿದರು.
ದೇವನಹಳ್ಳಿ ಪಟ್ಟಣದ ಜಿಲ್ಲಾ ಕಾರ್ಯನಿರತರ ಪತ್ರಕರ್ತರ ಭವನದಲ್ಲಿ ದೇವನಹಳ್ಳಿ ಮತ್ತು ನೆಲಮಂಗಲ ತಾಲೂಕುಸಂಘಗಳಿಗೆ ನಡೆದ ಚುನಾವಣೆಯಲ್ಲಿ ವಿಜೇತರಾದವರಿಗೆ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ದೇವನಹಳ್ಳಿ ತಾಲೂಕು ಸಂಘದ ಚುನಾವಣಾ ಜವಾಬ್ದಾರಿಯನ್ನು ರಾಜ್ಯ ಸಂಘ ವಹಿಸಿದ್ದು, ಎಲ್ಲರ ಸಹಕಾರದಿಂದ ಯಾವುದೇ ತೊಂದರೆ ಇಲ್ಲದೆ ಚುನಾವಣೆ ಸುಸೂತ್ರವಾಗಿ ನಡೆದಿದೆ.
ಚುನಾವಣೆಗಳಲ್ಲಿ ಭಾಗವಹಿಸುವುದು ಎಲ್ಲರ ಹಕ್ಕು ಚುನಾವಣೆ ನಂತರ ನಾವೆಲ್ಲರು ಒಂದೇ ಗುಂಪುಗಾರಿಕೆಗಳನ್ನು ಬಿಟ್ಟು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ರಾಜ್ಯ ಕಾರ್ಯಕಾರಿ ಸಮಿಸಿ ಸದಸ್ಯ ಮಂಜುನಾಥ್ ಮಾತನಾಡಿ ಚುನಾವಣೆ ಮುಗಿದಿದ್ದು ಸಂಘವನ್ನು ರಚನೆ ಮಾಡಿ
ಸಂಘದ ಪ್ರಗತಿಗೆ ಎಲ್ಲರು ಒಗ್ಗೂಡಿ ಕೆಲಸ ಮಾಡಬೇಕು ಸಂಘದ ಸದಸ್ಯರಿಗೆ ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ರಾಜ್ಯಸಂಘ ಸರಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಪತ್ರಕರ್ತರ ಬೇಡಿಕೆಗಳನ್ನು ಈಡೇರಿಸುವ ಕೆಲಸ ರಾಜ್ಯಾದ್ಯಕ್ಷರು ಮಾಡುತ್ತಿದ್ದಾರೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿ ಜಿಲ್ಲೆಯ ಎರಡು ತಾಲೂಕುಗಳಲ್ಲಿ ಚುನಾವಣೆ ಸುಸೂತ್ರವಾಗಿ ನಡೆದು ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ. ಗೆದ್ದನಂತರ ಅದೇ ರೀತಿ ಸಂಘವನ್ನು ಹಾಗೂ ಸದಸ್ಯರನ್ನು ಒಗ್ಗೂಡಿಸಿಕೊಂಡು ಸದಸ್ಯರ ಸಮಸ್ಯೆ ಳಿಗೆ ಸ ಕಾರ ನೀಡಬೇಕು.ಸಂಘವನ್ನು ಆರ್ಥಿಕವಾಗಿ ಮುನ್ನಡೆಸಿಕೊಂಡು ಹೋಗಬೇಕು ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಮಾತನಾಡಿ ಕಳೆದ ೨೧ ವರ್ಷಗಳಿಂದ ಸಂಘದಲ್ಲಿ ಚುನಾವಣೆಯೇ ಇಲ್ಲದೆ ಅವಿರೋಧ ಆಯ್ಕೆ ನಡೆಯುತ್ತಿದ್ದು ಆದರೆ ಇತ್ತೀಚೆಗಷ್ಟೆ ಚುನಾವಣೆಗಳು ಪ್ರಾರಂಭವಾಗಿದ್ದು ಎಲ್ಲರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಯಾರು
ಸ್ಥಾನಗಳಿಂದ ವಂಚಿತರಾಗಬಾರದು ,ಆಗಾಗಿ ಚುನಾವಣೆಗಳು ನಡೆಯಬೇಕು, ಎಲ್ಲರು ಚುನಾವಣೆಯನ್ನು
ಸುಸೂತ್ರವಾಗಿ ನಡೆಸಿಕೊಟ್ಟಿದ್ದಾರೆ. ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ಗೋಪಿನಾಥ್, ಜಿಲ್ಲಾ ಉಪಾಧ್ಯಕ್ಷ ರಫೀಉಲ್ಲಾ, ಕೃಷ್ಣ ನಾಯಕ್, ಮುನಿವೀರಣ್ಣ, ಕಾರ್ಯದರ್ಶಿ ಸತೀಶ್,
ನಿರ್ದೇಶಕರಾದ ಜಗದೀಶ್, ಮೊಯಿದ್, ಜಯಲಕ್ಷ್ಮೀ, ರಂಗನಾಥ್, ಚಂದ್ರಪ್ಪ, ದೇವನಹಳ್ಳಿ ತಾಲೂಕು ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ಪಿ.ಹರ್ಷ, ರಾಜುಗೌಡ, ನರಸಿಂಹಪ್ಪ ಕಾರ್ಯದರ್ಶಿ, ಭ್ರಮರಾಂಬಿಕ, ಖಜಾಂಚಿ ಮಹೇಶ್, ನಿರ್ದೇಕರಾದ ಮಲ್ಲಿಕಾರ್ಜುನ, ಅಕ್ಷಯ್, ನಿರ್ಮಲ, ಗುರುಮೂರ್ತಿ ಹಿರ್ಯಪತ್ರಕರ್ತರಾದ
ಕಿಶೋರ್, ಶಾಂತಮೂರ್ತಿ, ಪರ್ವತರಾಜ್ ಗ್ರಾಮಾಂತರ ಜಿಲ್ಲೆಯ ಪತ್ರಕರ್ತರು ಇದ್ದರು.
