ಯಳಂದೂರು ತಾಲೂಕಿನ ಅಂಬಳೆ ಗ್ರಾಮದ ಸುವರ್ಣವತಿ ನದಿ ದಡದಲ್ಲಿ ಅಕ್ರಮವಾಗಿ ಆಲದಮರಗಳನ್ನು ಕಡಿದು ಸಾಗಾಣಿಕೆ ಯಳಂದೂರು ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿದರೆ.
ಈ ಸಂಬಂಧ ಚಾಮರಾಜನಗರದ ನಿವಾಸಿ ಸುಲ್ತಾನ್ ಬೇಗ್ ಎಂಬಾತನ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಅಂಬಳೆ ಗ್ರಾಮದಿಂದ ಹೊಮ್ಮ ಗ್ರಾಮಕ್ಕೆ ತೆರಳುವ ಮಾರ್ಗ ಸುವರ್ಣವತಿ ನದಿ ದಡದ ಸಾರ್ವಜನಿಕ ಸರಕಾರಿ ಜಾಗದಲ್ಲಿ ಬೆಳೆದಿದ್ದ ಆಲದ ಮರಗಳನ್ನು ಕಡಿದು ವಾಹನದಲ್ಲಿ ಸಾಗಾಣಿಕೆ ಮಾಡುತಿದ್ದ ಖಚಿತ ಮಾಹಿತಿ ಅಧಿಕಾರಿಗಳಿಗೆ ಲಭಿಸಿದು . ಮಾಹಿತಿ ಆಧರಿಸಿ ವಲಯ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿ ಆರ್ ಎಫ್ ಓ ಮಂಜುನಾಥ್, ಲಕ್ಷ್ಮಣ ನೇತೃತ್ವದ ತಂಡ ಅ.22 ರಂದು ಸ್ಥಳಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿ
ಈ ವೇಳೆ ಅಕ್ರಮವಾಗಿ ಕಡಿದು ಸಾಗಾಣಿಕೆ ಮಾಡುತಿದ್ದ ವಾಹನದಲ್ಲಿ 2.5 ಟನ್ ಅಲದ ಮರದ ತುಂಡುಗಳು, ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಮರ ಕಡಿದ ಪ್ರಕರಣಕ್ಕೆ ಸಂಬಂಧಿ ಸಿದಂತೆ ಕೊಳ್ಳೇಗಾಲ ನ್ಯಾಯಾಲಯದ ಅನುಮತಿ ಪಡೆದು ಅ.23 ರಂದು ವಾಹನ ಹಾಗೂ ಮರಗಳನು ಸ್ವಾದಿನ ಪಡೆದು ಸುಲ್ತಾನ್ ಬೇಗ್ ವಿರುದ್ಧ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ
