ಹೊನ್ನೂರು ಬೀಚಹಳ್ಳಿ ಗ್ರಾಮದ ಯಜಮಾನರು, ಮುಖಂಡರು ಕೊಳ್ಳೇಗಾಲ ಶಾಸಕರು ಹಾಗೂಬೌದ್ಧ ಸಮ್ಮೇಳನದ ಅಧ್ಯಕ್ಷರಾದ ಎ.ಆರ್.ಕೃಷ್ಣಮೂರ್ತಿ ಅವರಿಗೆ 55101 ರೂ ಗಳನ್ನು ಹಸ್ತಾಂತರಿಸಿದರು” ಯಳಂದೂರುನ್ಯೂಸ್ : ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಅ.24 ಮತ್ತು 25ರಂದು ನಡೆಯುವ 2ನೇ ಅಂತರರಾಷ್ಟ್ರೀಯ ಬೌದ್ಧ ಸಮ್ಮೇಳನಕ್ಕೆ ತಾಲ್ಲೂಕಿನ ಹೊನ್ನೂರು ಬೀಚಹಳ್ಳಿ ಗ್ರಾಮದಲ್ಲಿಮನೆ,ಮನೆಗೆ ಸಂಗ್ರಹಣೆ ಮಾಡಿ ದೇಣಿಗೆಯನ್ನು ಗ್ರಾಮದ ಯಜಮಾನರು ಹಾಗೂ ಮುಖಂಡರು ಗ್ರಾಮದಲ್ಲಿ ₹ 55101 ರೂ ಗಳನ್ನು ಶಾಸಕ ಎ.ಆರ್.ಕೃಷ್ಣಮೂರ್ತಿ ಅವರಿಗೆ ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಯೋಜಿಸಲು ಎಲ್ಲರ ಸಹಕಾರ ಅಗತ್ಯ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು. ಈ ಸಂದರ್ಭದಲ್ಲಿ ಯಜಮಾನರಾದ ಎಂ ಗುರುಪ್ರಸಾದ್ ತಾಲೋಕು ಪಂಚಾಯತಿ ಮಾಜಿ ಅಧ್ಯಕ್ಷ ಎಂ. ನಿರಂಜನ್,ಮುಖಂಡರಾದ ಡಿ. ರೇವಣ್ಣ, ರಾಜಶೇಖರ್, ಆರ್,ಗುರುಮಲ್ಲೇಶ್,ಹೆಚ್ ಆರ್. ನಾಗರಾಜು, ಮಹದೇವಸ್ವಾಮಿ, ಕುಮಾರಸ್ವಾಮಿ, ಆರ್. ಪುಟ್ಟಬಸವಯ್ಯ,ಪಿ. ಮೋಹನ್, ಕೃಷ್ಣಮೂರ್ತಿ ಇದ್ದರು

Spread the love

Leave a Reply

Your email address will not be published. Required fields are marked *