ನೆಲಮಂಗಲ: ಪರಿಶ್ರಮ ಪಟ್ಟು ಸಮಾಜಕ್ಕಾಗಿ ಬದುಕಿದರೆ ಸರ್ವಕಾಲಕ್ಕೂ ಜೀವಂತವಾಗಿರಬಹುದು ಎಂಬುದಕ್ಕೆ ಮಹರ್ಷಿ ವಾಲ್ಮೀಕಿಯವರು ಸಾಕ್ಷಿಯಾಗಿದ್ದು ಅವರ ಸೇವೆ ಸರ್ವಜನಾಂಗಕ್ಕೂ ಆದರ್ಶವಾಗಿದೆ ಎಂದು ನೆಲಮಂಗಲ ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.
ನಗರದ ತಾಲೂಕುಕಚೇರಿ ಆವರಣದಲ್ಲಿ ತಾಲೂಕುಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಆಯೋಜಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಉದ್ದೇಶಿಸಿಮಾತನಾಡಿದರು.
ಮಹರ್ಷಿ ವಾಲ್ಮೀಕಿಅವರನ್ನು ಒಂದು ಸಮುದಾಯಕ್ಕಷ್ಟೇ ಸೀಮಿತಗೊಲೀಸಬಾರದು, ಅಖಂಡ ಭವ್ಯ ಭಾರತದ ದಾರ್ಶನಿಕ ಪ್ರಮುಖರಲ್ಲಿ ಅಗ್ರಗಣ್ಯರಾಗಿರುವ ವಾಲ್ಮೀಕಿ ರಾಮಾಯಣ ಎಲ್ಲಾ ಸಮಾಜಕ್ಕೂ ಅನ್ವಯಿಸುವಂತಹ ಸಾಕಷ್ಟುನೈತಿಕ ಮೌಲ್ಯಗಳನ್ನು ಒಳಗೊಂಡ ರಾಮಾಯಾಣವನ್ನು ರಚನೆಯನ್ನು ಮಅಡುವಮೂಲಕ ಭೂ ಮಂಡಲದಲ್ಲಿಯೇ ಭಾರತಕ್ಕೆ ಒಂದು ಗುರುತನ್ನು ತಂದುಕೊಟ್ಟವರು, ನಗರದ ರಾಷ್ಟರೀಯ ಹೆದ್ದಾರಿಗೆ ಹೊಂದಿಕೊಂಡಂತ್ತಿರುವ ಝಾಗದಲ್ಲಿ ವಾಲ್ಮೀಕಿ ಭವನವನ್ನು ನಿರ್ಮಿಸಲಾಗಿದ್ದು ಮೂಂದಿನ ವರ್ಷದ ವಾಲ್ಮೀಕಿ ಜಯಂತಿಯನ್ನು ನೂತನ ಭವನದಲ್ಲಿ ಆಚರಿಸಲು ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ, ಶೀರ್ಘದಲ್ಲಿಯೇ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿ ಭವನವನ್ನು ಉದ್ಘಾಟಿಸಲಾಗುತ್ತದೆ ಎಂದು ಭರವಸೆ ನೀಡಿದರು. ಪರಿಶಿಷ್ಟಪಂಗಡದಸಮುದಾಯದ ಅಭಿವೃದ್ಧಿಗೆ ಶ್ರಮಿಸುವ ಜೊತೆಗೆ ವಿಶೇಷಅನುದಾನದ ಮೂಲಕ ಗ್ರಾಮಗಳ ಅಭಿವೃದ್ಧಿ ಮಾಡುವಕೆಲಸಮಾಡುತ್ತೇನೆಎಂದರು.
ನೆಲಮಂಗಲ ಯೋಜನಾ ಪ್ರಅಧಿಕಾರದ ಅಧ್ಯಕ್ಷ ಅಗಳಕುಪ್ಪೆ ಗೋವಿಂದರಾಜು ಮಾತನಾಡಿ ಶಿಕ್ಷಣ ಹಾಗೂ ಪರಿಶ್ರಮ ವ್ಯಕ್ತಿಯನ್ನು ಬದಲಾವಣೆಮಾಡಬಹುದು ಎಂಬುದಕ್ಕೆ ಮಹರ್ಷಿ ವಾಲ್ಮೀಕಿ ನಮಗೆ ದೇವರಾಗಿದ್ದಾರೆ, ಸಮಾಜದಜನರು ವಾಲ್ಮೀಕಿಯ ಜೀವನಚರಿತ್ರೆಯ ಬಗ್ಗೆ ಮಕ್ಕಳಿಗೆ ತಿಳಿಸುವ ಕೆಲಸವಾಗಬೇಕು. ವಾಲ್ಮೀಕಿಯವರು ಬರೆದ ರಾಮಾಯಣ ಜನರಮನೆಮನ ತಲುಪಿದ್ದು ವಾಲ್ಮೀಕಿಯೂ ಮಕ್ಕಳ ಮನಸ್ಸಿನಲ್ಲಿ ಉಳಿಯುವಂತಾಗಬೇಕು ಎಂದು ಕರೆನೀಡಿದರು.
ಸಂದರ್ಭದಲ್ಲಿ ಶ್ರೀಮಹರ್ಷಿ ವಾಲ್ಮೀಕಿ ನಾಯಕಸಂಘದ ಅಧ್ಯಕ್ಷ ಬಿ.ಎನ್ ನರಸಿಂಹಮೂರ್ತಿ, ಎನ್ಪಿಎ ಮಾಜಿಅಧ್ಯಕ್ಷ ನಾರಾಯಣಗೌಡ, ನಗರಸಭೆಸದಸ್ಯ ಆನಂದ್, ಸುಜಾತಮುನಿಯಪ್ಪ, ತಹಸೀಲ್ದಾರ್ ಮಲ್ಲೇಶಬೀರಪ್ಪಪೂಜಾರ,ನಗರಸಭೆ ಪೌರಾಯುಕ್ತ ಗಂಗಾಧರ್, ಬಿಇಓ ಕೆ.ಸಿರಮೇಶ್, ಸಮಾಜಕಲ್ಯಾಣಇಲಾಖೆ ಸಹಾಯಕ ನಿರ್ದೇಶಕಿ ವಾಣಿ,ಮುಖಂಡರಾದ ದೇಗನಳ್ಳಿ ನರಸಿಂಹಮೂರ್ತಿ, ಸಿದ್ದರಾಜು, ಕನಅರ್ಟಕಜನಸೈನ್ಯದ ಅಧ್ಯಕ್ಷ ನರಸಿಂಹಮೂರ್ತಿ. ವೆಂಕಟೇಶ್, ಸುಬ್ಬರಾಯಪ್ಪ, ಅನಿಲ್ಕುಮಾರ್,ವಾಸು ಸೇರಿದಂತೆ ವಿವಿಧ ಇಲಾಖೆಅಧಿಕಾರಿಗಳುಮತ್ತಿತರರಿದ್ದರು.
