ಮೌನ ಕ್ರಾಂತಿಯ ಹರಿಕಾರ ಡಿ. ದೇವರಾಜು ಅರಸು 111ನೇ ಜನ್ಮದಿನಾಚರಣೆ

ತಾಂಡವಪುರ: ಮಾಜಿ ಮುಖ್ಯಮಂತ್ರಿ ಡಿ ದೇವರಾಜ್ ಅರಸು ಅವರ 111 ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು
ಬೆಳಿಗ್ಗೆ ಮಾತನಾಡಿದ ತಾಲೂಕು ದಂಡಾಧಿಕಾರಿಗಳಾದ ಸ್ಮಿತಾ ರಾಮು ರವರು ಜನಪರ ಕಾರ್ಯಗಳು ಸದಾ ಜೀವಂತ. ಸಮುದಾಯಕ್ಕೆ ಡಿ ದೇವರಾಜ್ ಅರಸು ಅವರು ನೀಡಿದ ಕೊಡುಗೆ ಅಪಾರ ಮತ್ತು ಅನನ್ಯ ಎಂದು ತಿಳಿಸಿದರು.


ಶೋಷಿತರ ಅಭಿವೃದ್ಧಿ ಹರಿಕಾರ,ಮಾಜಿ ಮುಖ್ಯಮಂತ್ರಿ ದಿ. ಡಿ. ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆಯನ್ನು ನಂಜನಗೂಡು ತಾಲೂಕಿನಲ್ಲಿ ಅರ್ಥಪೂರ್ಣ ಆಚರಿಸಲಾಯಿತು.
ತಾಲ್ಲೂಕು ಆಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ನಂಜನಗೂಡು ತಾಲ್ಲೂಕು ವತಿಯಿಂದ ಆಡಳಿತ ಕಚೇರಿ ಮುಂಭಾಗ ಆಯೋಜಿಸಿದ್ದ ಸಮಾರಂಭದಲ್ಲಿ ತಹಸೀಲ್ದಾರ್ ಸ್ಮಿತಾ ರಾಮು ರವರು ದಿ. ಡಿ .ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.


ಕಾರ್ಯಕ್ರಮ ವೇಳೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ SSLC ಮತ್ತು PUC ಯಲ್ಲಿ ತಾಲ್ಲೂಕಿಗೆ ಅತ್ಯಧಿಕ ಅಂಕಪಡೆದ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡಾ ಮತ್ತು ಸಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಗೌರವಿಸಿ, ಸನ್ಮಾನಿಸಲಾಯಿತು.
ಹಿಂದುಳಿದ ವರ್ಗಗಳ ತಾಲ್ಲೂಕು ಕಲ್ಯಾಣಾಧಿಕಾರಿ ಶ್ರೀಮತಿ ಸುಕನ್ಯ ಎನ್. ರವರು ಅತಿಥಿಗಳನ್ನು ಸ್ವಾಗತ ಕೋರಿ ಹೊಂದಿಸಿದರು
ಕಾರ್ಯಕ್ರಮದಲ್ಲಿ ರಾಜ್ಯ ಮೃಗಾಲಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ ಗ್ಯಾರಂಟಿ ಯೋಜನೆಗಳ ಸಮಿತಿಯ ಅಧ್ಯಕ್ಷ ಕೆ ಮಾರುತಿ ನಗರಸಭೆ ಪೌರಾಯುಕ್ತ ಧಿಕಾರಿ ಎಂ ಬಸವರಾಜು, ನಗರಸಭೆ ಮಾಜಿ ಸದಸ್ಯ ಗಾಯತ್ರಿ ಮೋಹನ್, ದಸಂಸ ಜಿಲ್ಲಾ ಸಂಚಾಲಕ ಮಲ್ಲಹಳ್ಳಿ ನಾರಾಯಣ್, ಕಾರ್ಯ ಬಸವಣ್ಣ, ಸುರೇಶ್ ಶಂಕರಪುರ, ಪತ್ರ ಬರಹಗಾರ ತಾಲೂಕು ಅಧ್ಯಕ್ಷ ಅರಸು,ಅಕ್ಬರ್ ಖಾದರ್, ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.

Spread the love

Leave a Reply

Your email address will not be published. Required fields are marked *