ಮಾರಕಾಸ್ತ್ರಗಳಿಂದ ಇರಿದು (stabbed) ರೌಡಿಶೀಟರ್ ಒಬ್ಬರನ್ನು ಸ್ನೇಹಿತರೆಲ್ಲೇ ಸೇರಿ ಭೀಕರವಾಗಿ ಹತ್ಯೆ (murdered) ಮಾಡಿದ ಘಟನೆ ನೆಲಮಂಗಲದ ಬಳಿಯ ಬಾಲಾಜಿ ಫಾರ್ಮ್ಹೌಸ್ (Balaji Farm House) ನಲ್ಲಿ ನಡೆದಿದೆ (occurred). ಲಗ್ಗೆರೆ (Laggere) ಹಾಗೂ ಹುಲಿಯೂರುದುರ್ಗ (Huliyurdurga) ಠಾಣಾ ವ್ಯಾಪ್ತಿಯ ರೌಡಿಶೀಟರ್ ಆಟೋ ನಾಗ (Auto Naga) ಹತ್ಯೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು (Madanayakanahalli Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪಾರ್ಟಿ ಬಳಿಕ ನಡೆದ ಮರ್ಡರ್
ಗಂಗೊಂಡಹಳ್ಳಿ (Gangondahalli) ಯಲ್ಲಿ ವಾಸವಾಗಿದ್ದ (residing) ನಾಗ (Naga) ಇಂದು ಸ್ನೇಹಿತರೊಂದಿಗೆ ಪಾರ್ಟಿ ಮಾಡುವ ನೆಪದಲ್ಲಿ ಮಧ್ಯಾಹ್ನ 2.30ರ ಸುಮಾರಿಗೆ ಬಾಲಾಜಿ ಫಾರ್ಮ್ಹೌಸ್ (Balaji Farm House) ಗೆ ಬಂದಿದ್ದಾನೆ (arrived). ಸ್ನೇಹಿತರೊಂದಿಗೆ ಮದ್ಯಪಾನ ಮಾಡಿ (consumed alcohol), ಎಲ್ಲರೂ ಒಟ್ಟಾಗಿ ಒಂದೇ ತಟ್ಟೆಯಲ್ಲಿ ಊಟವೂ ಮಾಡಿದ್ದಾರೆ (ate together). ಆದರೆ ಕುಡಿದ ಮತ್ತದಲ್ಲಿದ್ದ ನಾಗ (Naga) ಮೇಲೆ ಸ್ನೇಹಿತರೆಲ್ಲೇ ಸೇರಿ ಡ್ರಾಗರ್ನಿಂದ ಇರಿದು (stabbed) ಹತ್ಯೆ ಮಾಡಿದ್ದಾರೆ (murdered) ಎನ್ನಲಾಗಿದೆ (reported).
ಹಣದ ವ್ಯವಹಾರವೇ ಹತ್ಯೆಗೆ ಕಾರಣ?
ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ (as per initial inputs), ನಾಗ (Naga) ತನ್ನ ಸ್ನೇಹಿತ ಅಭಿ (Abhi) ಎಂಬಾತನಿಗೆ ಅಂದರ್–ಬಾಹರ್ ಹಣದ ವ್ಯವಹಾರದಲ್ಲಿ ಸುಮಾರು ₹22 ಲಕ್ಷ ಸಾಲ ನೀಡಿದ್ದ (advanced). ಇತ್ತೀಚೆಗೆ ಹಣ ವಾಪಸ್ ಕೇಳಿದ್ದ (sought repayment) ನಾಗಗೆ ಹಣ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕೊಲೆಯ ಸಂಚು ರೂಪಿಸಲಾಗಿತ್ತು (hatched) ಎನ್ನಲಾಗಿದೆ (indicated). ಪಾರ್ಟಿ ಮಾಡಿ ಮಾತನಾಡುವ ನೆಪದಲ್ಲಿ ನಾಗನನ್ನು ಫಾರ್ಮ್ಹೌಸ್ಗೆ ಕರೆಸಿ (summoned), ಪೂರ್ವಯೋಜನೆಯಂತೆ ಹತ್ಯೆ ನಡೆಸಲಾಗಿದೆ (carried out) ಎಂದು ಶಂಕಿಸಲಾಗಿದೆ (believed).
ಪೊಲೀಸ್ ತನಿಖೆ ಮುಂದುವರಿಕೆ
ಘಟನಾ ಸ್ಥಳಕ್ಕೆ ಎಸಿಪಿ ಅಶೋಕ್ (ACP Ashok) ಹಾಗೂ ಇನ್ಸ್ಪೆಕ್ಟರ್ ಮುರುಳಿಧರ್ (Inspector Muralidhar) ಭೇಟಿ ನೀಡಿ (arrived) ಪರಿಶೀಲನೆ ನಡೆಸಿದ್ದಾರೆ (verified). ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಂಗಳೂರಿನ (Bengaluru) ವಿಕ್ಟೋರಿಯಾ ಆಸ್ಪತ್ರೆ (Victoria Hospital) ಗೆ ರವಾನಿಸಲಾಗಿದೆ (dispatched). ಆರೋಪಿಗಳು ತಲೆಮರೆಸಿಕೊಂಡಿದ್ದು (vanished), ಅವರ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ (pursuing manhunt).
