ಶಿವಮೊಗ್ಗ: ನಗರದ (Shivamogga) ಬಿಹೆಚ್ ರಸ್ತೆಯ ಲಾಡ್ಜ್ ಒಂದರಲ್ಲಿ ಹುಬ್ಬಳ್ಳಿ (Hubballi) ಮೂಲದ ಉದ್ಯಮಿಯ ಶವ ಪತ್ತೆಯಾಗಿದ್ದು, ಹಲವು ಶಂಕೆಗೆ ಕಾರಣವಾಗಿದೆ.
ಮೃತ ಉದ್ಯಮಿಯನ್ನು ಬಸವರಾಜ್ (50) ಎಂದು ಗುರುತಿಸಲಾಗಿದೆ. ಏ.10 ರಂದು ಅವರು ಲಾಡ್ಜ್‌ನಲ್ಲಿ ರೂಮ್ ಮಾಡಿದ್ದರು. ರೂಮ್‍ನಿಂದ ಹೊರ ಬರದ ಕಾರಣ ಲಾಡ್ಜ್ ಸಿಬ್ಬಂದಿ ಅನುಮಾನದಿಂದ ದೊಡ್ಡಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರ ಸಮ್ಮುಖದಲ್ಲಿ ರೂಮ್ ಬಾಗಿಲು ಒಡೆದಾಗ, ಬಾತ್ ರೂಮ್‍ನಲ್ಲಿ ಅವರ ಶವ ಪತ್ತೆಯಾಗಿದೆ.
ಬಸವರಾಜ್ ಆಟೋ ಮೊಬೈಲ್ಸ್ ವ್ಯವಹಾರ ಮಾಡಿಕೊಂಡಿದ್ದರು. ಇದಕ್ಕೂ ಮೊದಲು ಚಿತ್ರ ಹಂಚಿಕೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆ.