ಬಾಗಲಕೋಟೆ: ನೀರಿನಲ್ಲಿ ಮುಳುಗುತ್ತಿದ್ದ ಯುವಕನ ರಕ್ಷಣೆಗೆ ಹೋದ ಸೈನಿಕ (Soldier) ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಬಾದಾಮಿ (Badami) ತಾಲೂಕಿನ ಮಣ್ಣೇರಿ ಗ್ರಾಮದ ಮಲಪ್ರಭಾ ನದಿಯಲ್ಲಿ (Malaprabha river) ನಡೆದಿದೆ.
ತಾಲೂಕಿನ ಹಂಸನೂರ ಗ್ರಾಮದ ಶೇಖಪ್ಪ ಮುತ್ತಪ್ಪ ಮೂಲಿಮನಿ(15) ಹಾಗೂ ಗದಗ (Gadag) ಜಿಲ್ಲೆಯ ರೋಣ ತಾಲೂಕಿನ ಬೆನಹಾಳ ಗ್ರಾಮದ ಸೈನಿಕ ಮಹಾಂತೇಶ ಹೂವಪ್ಪ ಹೊಸಮನಿ(25) ಮೃತ ದುರ್ದೈವಿಗಳು.
ಶೇಖಪ್ಪ ಮುತ್ತಪ್ಪ ಮೂಲಿಮನಿ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ. ಈಜು ಬಾರದ ಶೇಖಪ್ಪ ರಕ್ಷಣೆಗಾಗಿ ಕೂಗಿದ್ದ. ಈ ವೇಳೆ ಆತನ ರಕ್ಷಣೆಗಾಗಿ ಮಹಾಂತೇಶ ತೆರಳಿದಾಗ ಶೇಖಪ್ಪ ಗಾಬರಿಯಿಂದ ಮಹಾಂತೇಶ ಕುತ್ತಿಗೆಯನ್ನು ಬಿಗಿಯಾಗಿ ಹಿಡಿಕೊಂಡಿದ್ದ. ಇದರಿಂದ ಮಹಾಂತೇಶಗೆ ಈಜಲು ಸಾಧ್ಯವಾಗದೇ ಇಬ್ಬರು ಮೃತಪಟ್ಟಿದ್ದಾರೆ. ಇಬ್ಬರ ಮೃತದೇಹಗಳನ್ನು ನದಿಯಿಂದ ಹೊರ ತೆಗೆಯಲಾಗಿದೆ.
ಘಟನೆ ಕುರಿತು ಬಾದಾಮಿ ಪೊಲೀಸ್ ಠಾಣೆಯಲ್ಲಿ (Badami Police Station) ಪ್ರಕರಣ ದಾಖಲಾಗಿದೆ ಎಂದು ಪಿ.ಎಸ್.ಐ.ವಿಠ್ಠಲ ನಾಯಕ ತಿಳಿಸಿದ್ದಾರೆ.