ಕುಡಿಯಲು ಹಣ ಕೊಡದ ತಾಯಿಯನ್ನು ರಾಡ್‍ನಲ್ಲಿ ಹೊಡೆದು ಕೊಂದ ಮಗ Son beats mother to death with rod for not paying for drinks

ಕುಡಿಯಲು ಹಣ ಕೊಡದ ತಾಯಿಯನ್ನು ರಾಡ್‍ನಲ್ಲಿ ಹೊಡೆದು ಕೊಂದ ಮಗ Son beats mother to death with rod for not paying for drinks

ಬೆಂಗಳೂರು: ಕುಡಿಯಲು ಹಣ ಕೊಡದಿದ್ದಕ್ಕೆ ಹೆತ್ತ ತಾಯಿಯನ್ನೇ ಮಗನೊಬ್ಬ ರಾಡ್‍ನಿಂದ ಹಲ್ಲೆ ಮಾಡಿ ಹತ್ಯೆಗೈದ ಘಟನೆ ಬಗಲಗುಂಟೆಯ (Bagalakunte) ಮುನೇಶ್ವರ ನಗರದಲ್ಲಿ ನಡೆದಿದೆ.

ಹತ್ಯೆಯಾದ ವೃದ್ಧೆಯನ್ನು ಶಾಂತಬಾಯಿ (82) ಎಂದು ಗುರುತಿಸಲಾಗಿದೆ. ಮಹೆಂದ್ರ ಸಿಂಗ್ (52) ಕೊಲೆಗೈದ ಆರೋಪಿಯಾಗಿದ್ದಾನೆ. ಗುರುವಾರ (ಏ.10) ತಾಯಿ ಹಾಗೂ ಮಗನ ನಡುವೆ ಹಣದ ವಿಚಾರಕ್ಕೆ ಜಗಳ ನಡೆದಿದೆ. ಈ ವೇಳೆ ಆತ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ.

ಮಂಹೇಂದ್ರ ಸಿಂಗ್ ಕುಡಿತದ ಚಟಕ್ಕೆ ಬಿದ್ದು ಕೆಲಸಕ್ಕೆ ಹೋಗದೆ ಅಲೆಯುತ್ತಿದ್ದ. ಅಲ್ಲದೇ ನಿತ್ಯ ಹಣಕ್ಕಾಗಿ ತಾಯಿಗೆ ಹಿಂಸೆ ನೀಡಿ ನಿಂದಿಸುತ್ತಿದ್ದ ಎಂದು ತಿಳಿದು ಬಂದಿದೆ. ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.ಈ ಸಂಬಂಧ ಬಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Spread the love

Leave a Reply

Your email address will not be published. Required fields are marked *