ತಾನು ಇಷ್ಟಪಟ್ಟವಳು ತನ್ನ ಅಣ್ಣನ ಜತೆ ನಗುನಗುತ್ತಾ ಮಾತನಾಡಿದ್ದಕ್ಕೆ ಗುಂಡು ಹಾರಿಸಿದ ವ್ಯಕ್ತಿ A man shot his girlfriend for smiling and talking to his brother.

ತಾನು ಇಷ್ಟಪಟ್ಟವಳು ತನ್ನ ಅಣ್ಣನ ಜತೆ ನಗುನಗುತ್ತಾ ಮಾತನಾಡಿದ್ದಕ್ಕೆ ಗುಂಡು ಹಾರಿಸಿದ ವ್ಯಕ್ತಿ A man shot his girlfriend for smiling and talking to his brother.

ತಾನು ಇಷ್ಟ ಪಟ್ಟ ಯುವತಿ ತನ್ನ ಅಣ್ಣನೊಂಣದಿಗೆ ನಗು ನಗುತ್ತಾ ಮಾತನಾಡಿದ್ದಕ್ಕೆ ಕೋಪಗೊಂಡು ವ್ಯಕ್ತಿ ಆಕೆಗೆ ಗುಂಡು ಹಾರಿಸಿರುವ ಘಟನೆ ಲಕ್ನೋನಲ್ಲಿ ನಡೆದಿದೆ. ರಾತ್ರಿ 10.30 ರ ಸುಮಾರಿಗೆ ಸತೀಶ್ ಯಾದವ್ ಮಹಿಳೆಯ ಮನೆಗೆ ಬಂದಾಗ ಈ ಘಟನೆ ನಡೆದಿದೆ. ಆಕೆಯ ತಾಯಿ ಬಾಗಿಲು ತೆರೆದಾಗ ಸತೀಶ್ ಆಕೆಯನ್ನು ನಿಂದಿಸಲು ಪ್ರಾರಂಭಿಸಿದ್ದಾನೆ ಎಂದು ವರದಿಯಾಗಿದೆ. ಮಹಿಳೆ ಮಧ್ಯಪ್ರವೇಶಿಸಿ ನಿಲ್ಲಿಸಲು ಕೇಳಿದಾಗ, ಸತೀಶ್ ಕೋಪಗೊಂಡು ಆಕೆಯ ಹೊಟ್ಟೆಗೆ ಗುಂಡು ಹಾರಿಸಿದ್ದಾನೆ.

ಲಕ್ನೋ, ಏಪ್ರಿಲ್ 10: ಯುವತಿಯೊಬ್ಬಳು ತನ್ನ ಸಹೋದರನೊಂದಿಗೆ ನಗುನಗುತ್ತಾ ಮಾತನಾಡುತ್ತಿರುವುದನ್ನು ಸಹಿಸಲಾಗದೆ ವ್ಯಕ್ತಿಯೊಬ್ಬ ಆಕೆಗೆ ಗುಂಡು(Firing) ಹಾರಿಸಿರುವ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ಆರೋಪಿ ಸತೀಶ್ ಯಾದವ್, ತನ್ನ ಸಹೋದರನೊಂದಿಗಿನ ಆಕೆಯ ಆಪ್ತತೆಯಿಂದ ಕೋಪಗೊಂಡು ಆಕೆಯ ಮನೆಗೆ ನುಗ್ಗಿ ಗುಂಡು ಹಾರಿಸಿದ್ದಾನೆ ಎಂದು ಆರೋಪಿಸಲಾಗಿದೆ.

ರಾತ್ರಿ 10.30 ರ ಸುಮಾರಿಗೆ ಸತೀಶ್ ಯಾದವ್ ಮಹಿಳೆಯ ಮನೆಗೆ ಬಂದಾಗ ಈ ಘಟನೆ ನಡೆದಿದೆ. ಆಕೆಯ ತಾಯಿ ಬಾಗಿಲು ತೆರೆದಾಗ ಸತೀಶ್ ಆಕೆಯನ್ನು ನಿಂದಿಸಲು ಪ್ರಾರಂಭಿಸಿದ್ದಾನೆ ಎಂದು ವರದಿಯಾಗಿದೆ. ಮಹಿಳೆ ಮಧ್ಯಪ್ರವೇಶಿಸಿ ನಿಲ್ಲಿಸಲು ಕೇಳಿದಾಗ, ಸತೀಶ್ ಕೋಪಗೊಂಡು ಆಕೆಯ ಹೊಟ್ಟೆಗೆ ಗುಂಡು ಹಾರಿಸಿದ್ದಾನೆ. ಆರೋಪಿ ಆಕೆಯನ್ನು ಇಷ್ಟಪಡುತ್ತಿದ್ದನೇ ಅಥವಾ ಅವರಿಬ್ಬರೂ ಪ್ರೀತಿಸುತ್ತಿದ್ದರೇ? ಎಂಬುದಿನ್ನು ಸ್ಪಷ್ಟವಾಗಿಲ್ಲ.

ಮಹಿಳೆ ಸ್ಥಳದಲ್ಲೇ ಕುಸಿದು ಬಿದ್ದು, ತಕ್ಷಣವೇ ಅವರನ್ನು ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ಕರೆದೊಯ್ಯಲಾಯಿತು, ಅಲ್ಲಿ ಅವರ ಸ್ಥಿತಿ ಗಂಭೀರವಾಗಿದೆ. ಘಟನೆಯ ನಂತರ ಆರೋಪಿ ಆಯುಧದೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ. ಸತೀಶ್ ಯಾದವ್ ಅವರ ಸ್ವಂತ ಸಹೋದರ ಸಂದೀಪ್ ಯಾದವ್ – ಆ ಮಹಿಳೆಯೊಂದಿಗೆ ಹೆಚ್ಚುತ್ತಿರುವ ಆಪ್ತತೆ ಸತೀಶ್ ಅವರ ಕೋಪಕ್ಕೆ ಕಾರಣವಾಯಿತು.

ಪ್ರಾಥಮಿಕ ಪೊಲೀಸ್ ತನಿಖೆಯ ಪ್ರಕಾರ, ಸತೀಶ್ ಮಹಿಳೆ ಮತ್ತು ಅವನ ಸಹೋದರನ ನಡುವಿನ ಸಂಬಂಧದ ಬಗ್ಗೆ ಅತೃಪ್ತನಾಗಿದ್ದನು ಮತ್ತು ಕೆಲವು ಸಮಯದಿಂದ ಅವರ ಬಂಧವನ್ನು ವಿರೋಧಿಸುತ್ತಿದ್ದನು.

ಸತೀಶ್ ಯಾದವ್ ಬಂಧನಕ್ಕೆ ಹಲವು ತಂಡಗಳನ್ನು ರಚಿಸಲಾಗಿದ್ದು, ಹಲವು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಇನ್ಸ್‌ಪೆಕ್ಟರ್ ಸುರೇಶ್ ಸಿಂಗ್ ತಿಳಿಸಿದ್ದಾರೆ. ಇಲ್ಲಿಯವರೆಗೆ, ಯುವತಿಯ ಕುಟುಂಬವು ಔಪಚಾರಿಕ ಲಿಖಿತ ದೂರು ಸಲ್ಲಿಸಿಲ್ಲ. ದೂರು ತಲುಪಿದ ತಕ್ಷಣ ಎಫ್‌ಐಆರ್ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *