ಕೇರಳದಲ್ಲಿ ಕಟ್ಟೆಚ್ಚರಿಕೆ: ಕೇರಳದ ಶಬರಿಮಲೆ ಯಾತ್ರೆ ಪ್ರಾರಂಭವಾಗಿದೆ. ಲಕ್ಷಾಂತರ ಈ ಜನ ಸ್ವಾಮಿಗಳು (ಮಾಲೆ ಧರಿಸಿದವರು) ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಹೋಗುತ್ತಿದ್ದಾರೆ. ಕರ್ನಾಟಕದಿಂದಲೂ ಲಕ್ಷಾಂತರ ಜನ ಭಕ್ತಾದಿಗಳು ಈಗಾಗಲೇ ಯಾತ್ರೆ ಪ್ರಾರಂಭಿಸಿದ್ದಾರೆ. ಆದರೆ, ಈ ನಡುವೆ ಕೇರಳದಲ್ಲಿ ಖತರ್ನಾಕ್ ಕುರುವಾ (Kuruva Gang) ಹಾವಳಿ ಮತ್ತೆ ಶುರುವಾಗಿದೆ.
ಹೀಗಾಗಿ, ಕೇರಳ ಪೊಲೀಸರು ಕೇರಳದಾದ್ಯಂತ ಹೈ ಅಲರ್ಟ್ ಘೋಷಿಸಿದ್ದಾರೆ. ಹಾಗಾದರೆ ಏನಿದು ಕುರುವಾ ಗ್ಯಾಂಗ್ ಇವರ ಉದ್ದೇಶವೇನು, ಅವರ ಟಾರ್ಗೆಟ್ ಏನು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
ದಕ್ಷಿಣ ಭಾರತದ ಪವಿತ್ರ ಯಾತ್ರಾ ಸ್ಥಳಗಳಲ್ಲಿ ಒಂದಾಗಿರುವ ಶಬರಿಮಲೆ ಯಾತ್ರೆ ಮತ್ತೆ ಪ್ರಾರಂಭವಾಗಿದೆ. ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ವಿವಿಧ ರಾಜ್ಯಗಳಿಂದ ಲಕ್ಷಾಂತರ ಜನ ಭಕ್ತಾದಿಗಳು ಹಾಗೂ ಮಾಲಧಾರಿ ಸ್ವಾಮಿಗಳು ಶಬರಿಮಲೆ ಯಾತ್ರೆ ಪ್ರಾರಂಭಿಸಿದ್ದಾರೆ. ಕೇರಳದ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಪ್ರತಿ ವರ್ಷ ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಲಕ್ಷಾಂತರ ಜನ ಭಕ್ತಾದಿಗಳು ಹೋಗುತ್ತಾರೆ. ಇದೇ ಸಮಯವನ್ನು ಈ ಕುರುವಾ ಗ್ಯಾಂಗ್ ಟಾರ್ಗೆಟ್ ಮಾಡಿಕೊಂಡು ದರೋಡೆ ಪ್ರಾರಂಭಿಸುತ್ತದೆ. ಕೇರಳದಲ್ಲಿ 41 ದಿನಗಳ ಈ ತೀರ್ಥಯಾತ್ರೆಯ ಋತುವನ್ನು ಮಂಡಲ (ಋತು) ಎಂದು ಕರೆಯುತ್ತಾರೆ. ಈ ಅವಧಿಯಲ್ಲಿ ದಕ್ಷಿಣ ಭಾರತದ ಲಕ್ಷಾಂತರ ಜನ ಭಕ್ತಾದಿಗಳು ಸೇರಿರುತ್ತಾರೆ. ಇಷ್ಟೊಂದು ಲಕ್ಷ ಜನ ಸೇರುವಾಗ ಅಲ್ಲಿನ ಕಾನೂನು ಸುವ್ಯವಸ್ಥೆಯನ್ನು ಹಾಗೂ ವಾಹನ ಸಂಚಾರ ಸೇರಿದಂತೆ ಹಲವು ವಿಷಯಗಳನ್ನು ಒಮ್ಮೆಗೆ ನಿಭಾಯಿಸುವುದು ಸವಾಲಿನ ಕೆಲಸ. ದಕ್ಷಿಣ ಭಾರತದ ಉಳಿದ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ಕೇರಳ ಸಣ್ಣ ರಾಜ್ಯ. ಇಲ್ಲಿರುವುದು 14 ಜಿಲ್ಲೆಗಳು. ಶಬರಿಮಲೆ ಯಾತ್ರೆ ಪ್ರಾರಂಭವಾದ ಬೆನ್ನಲ್ಲೇ ಇಲ್ಲಿ ಕುರುವಾ ಗ್ಯಾಂಗ್‌ನ ಆತಂಕವೂ ಹೆಚ್ಚಾಗಿದ್ದು, ಪೊಲೀಸರು ಕೆಲವೊಂದು ಅಗತ್ಯ ಮುಂಜಾಗ್ರತೆಗಳನ್ನು ಸೂಚಿಸಿದ್ದಾರೆ.
ಏನಿದು ಕುರುವಾ ಗ್ಯಾಂಗ್: ಪ್ರತಿ ವರ್ಷವೂ ಕೇರಳದಲ್ಲಿ ಶಬರಿಮಲೆ ಯಾತ್ರೆ ಪ್ರಾರಂಭವಾದ ಬೆನ್ನಲ್ಲೇ ಈ ಗ್ಯಾಂಗ್ ಸಕ್ರಿಯವಾಗುತ್ತದೆ. ಈ ಗ್ಯಾಂಗ್ ಮೂಲತಃ ತಮಿಳುನಾಡಿಗೆ ಸೇರಿದ್ದು ಎನ್ನಲಾಗಿದೆ. ಭಕ್ತಾದಿಗಳು ಲಕ್ಷಾಂತರ ಸಂಖ್ಯೆಯಲ್ಲಿ ಕೇರಳದಲ್ಲಿ ಸೇರುವುದರಿಂದ ಈ ಗ್ಯಾಂಗ್ ಅನ್ನು ಪತ್ತೆ ಮಾಡುವುದು ಪೊಲೀಸರಿಗೂ ಸಹ ಸವಾಲಿನ ಕೆಲಸವಾಗಿದೆ. ಈ ಖತರ್ನಾಕ್ ಗ್ಯಾಂಗ್ ಭಕ್ತಾದಿಗಳಿಗೆ ಒಂದಾಗುತ್ತದೆ. ಭಕ್ತಾದಿಗಳ ಸೊಗಲ್ಲಿ ಭಕ್ತರಂತೆ ವರ್ತಿಸಿ ದರೋಡೆ ಮಾಡುತ್ತದೆ ಎನ್ನಲಾಗಿದೆ.
ವಿಚಿತ್ರ ಹಾಗೂ ಖತರ್ನಾಕ್ ಗ್ಯಾಂಗ್: ಈ ಗ್ಯಾಂಗ್ ವಿಚಿತ್ರ ಹಾಗೂ ಖತರ್ನಾಕ್ ಎಂದೇ ಕೇರಳ ಪೊಲೀಸರು ಹೇಳಿದ್ದಾರೆ. ಬೆಳಿಗ್ಗೆ ಸಮಯದಲ್ಲಿ ಕೇರಳದಲ್ಲಿನ ಖಾಲಿ ಮನೆಗಳನ್ನು ನೋಡಿಕೊಂಡು ರಾತ್ರಿ ತಂಡೋಪ ತಂಡವಾಗಿ ಈ ಗ್ಯಾಂಗ್ ದಾಳಿ ನಡೆಸುತ್ತದೆ. ಈ ಗ್ಯಾಂಗ್‌ನ ಮತ್ತೊಂದು ವಿಚಿತ್ರ ವರ್ತನೆ ಎಂದರೆ, ಮಗು ಆಳುವಂತೆ ಹಾಗೂ ಮಹಿಳೆಯರು ಕಿರುಚಿಕೊಳ್ಳುವಂತೆ ಶಬ್ದ ಮಾಡುತ್ತದೆ. ಎನೋ ಅನಾಹುತವಾಗಿದೆ ಎಂದು ಮನೆಯಿಂದ ಯಾರಾದರೂ ಹೊರಗೆ ಓಡೋಡಿ ಬಂದು ನೋಡುವಾಗ ಅಟ್ಯಾಕ್ ಮಾಡುತ್ತದೆ.
ಮನೆಯ ಹೊರಗೆ ಟ್ಯಾಪ್ (ನಳ) ಒಪನ್ ಮಾಡಿ ನೀರು ಬಿಡುವುದು, ಬೆಲ್ ಒತ್ತಿ ಕಿರುಚುವುದು ಈ ಗ್ಯಾಂಗ್‌ನ ಐಡಿಯಾಗಳು. ಈ ರೀತಿ ಭಯಾನಕವಾಗಿ ವರ್ತಿಸಿ ಈ ಗ್ಯಾಂಗ್ ದಾಳಿ ಮಾಡುತ್ತದೆ. ಶ್ರೀಮಂತರು ಹಾಗೂ ಬಡವರು ಎನ್ನುವ ವ್ಯತ್ಯಾಸವೇ ಇಲ್ಲದೇ ದಾಳಿ ನಡೆಸುತ್ತದೆ. ಹೀಗಾಗಿ, ಎಚ್ಚರಿಕೆಯಿಂದ ಇರುವಂತೆ ಹಾಗೂ ರಾತ್ರಿ ವೇಳೆ ಯಾವುದೇ ಶಬ್ದವಾದರೂ ಹೊರಗೆ ಬಂದು ಒಬ್ಬೊಬ್ಬರೇ ನೋಡದಂತೆ ಕೇರಳ ಪೊಲೀಸರು ಎಚ್ಚರಿಸುತ್ತಿದ್ದಾರೆ.
ಕರ್ನಾಟಕದ ಭಕ್ತಾದಿಗಳು ಎಚ್ಚರ ವಹಿಸಿ: ಇನ್ನು ಈ ಸಂದರ್ಭದಲ್ಲಿ ಕರ್ನಾಟಕದ ಲಕ್ಷಾಂತರ ಜನ ಭಕ್ತಾದಿಗಳು ಯಾತ್ರ ಮಾಡುತ್ತಾರೆ. ಈ ವೇಳೆ ಯಾವುದೇ ಅಪರಿಚಿತರನ್ನು ನಿಮ್ಮ ಗುಂಪುಗೊಳೊಂದಿಗೆ ಸೇರಿಸಿಕೊಳ್ಳಬೇಡಿ. ಅನುಮಾನ ವ್ಯಕ್ತವಾದರೆ ಸ್ಥಳೀಯ ಪೊಲೀಸರ ಸಹಾಯ ಪಡೆದುಕೊಳ್ಳಿ. ಯಾತ್ರೆಯಲ್ಲಿ ರಾತ್ರಿ ವೇಳೆ ಯಾರಾದರೂ ಅಪರಿಚಿತರು ನೆರವು ಕೇಳಿದರೆ ಎಚ್ಚರದಿಂದ ಹಾಗೂ ಅನುಮಾನ ಬಾರದೆ ಇದ್ದರೆ ಮಾತ್ರ ಸಹಾಯ ಮಾಡಿ.