ನೆಲಮಂಗಲ: ಒತ್ತಡದಿಂದ ಹೃದಯಾಘಾತವಾಗಿ ಗ್ರಾಮ ಆಡಳಿತ ಅಧಿಕಾರಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ (Nelamangala) ತಾಲೂಕಿನ ಲಕ್ಕೂರು ವೃತ್ತದ ಗ್ರಾಮ ಆಡಳಿತ ಅಧಿಕಾರಿ ಮಾದವ್ ರಾವ್ (53) (Madhav Rao) ಸಾವನ್ನಪ್ಪಿದ್ದಾರೆ. ನೆನ್ನೆ ಕೆಲಸ ಮುಗಿಸಿಕೊಂಡು ಮನೆಗೆ ತೆರಳಿದ್ದ ಮಾದವರಾವ್ ರಾತ್ರಿ ಎಂದಿನಂತೆ ಊಟ ಮಾಡಿ ಮಲಗಿದ್ದಾರೆ. ಆದರೆ ಬೆಳಗಿನ ಜಾವ ಹೃದಯಘಾತದಿಂದ (Cardioc Arrest) ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಇನ್ನೂ ಗ್ರಾಮ ಆಡಳಿತ ಅಧಿಕಾರಿಗಳಿಗೆ ಕೆಲಸದ ಒತ್ತಡ ಹೆಚ್ಚುತ್ತಿದೆ, ಇದರಿಂದ ಹೃದಯಾಘಾತದ ಪ್ರಮಾಣ ಸಹ ಹೆಚ್ಚಾಗಿದೆ ಎಂದು ಗ್ರಾಮ ಆಡಳಿತ ಅಧಿಕಾರಿಗಳ ಸಂಘ ರಾಜ್ಯ ಸರ್ಕಾರಕ್ಕೆ ಮನವಿ ಸಹ ಮಾಡಿತ್ತು.
ಒತ್ತಡದಿಂದ 17 ಜನ ಸಾವು: ಒಂದು ಕಂದಾಯ ರ‍್ಷದ ಅವದಿ ಅಂದರೆ ೦೧ ಜುಲೈ ೨೦೨೩ ರಿಂದ ೩೦ ಜೂನ್ ೨೦೨೪ರ
ವರೆಗೆ ಒಟ್ಟು 17 ಜನ ಗ್ರಾಮ ಆಡಳಿತಾಧಿಗಳು ಹೃದಯಾಘಾತದಿಂದ ಸಾವನ್ನಪ್ಪಿರುವ ಆತಂಕಕಾರಿ ವಿಷಯ ಬೆಳಕಿಗೆ
ಬಂದಿದೆ. ಈಗಾಗಿ ಸರ್ಕಾರಕ್ಕೆ ಗ್ರಾಮ ಆಡಳಿತಾಧಿಕಾರಿಗಳ ಮೇಲಿನ ಒತ್ತಡ ಕಡಿಮೇ ಮಾಡಬೇಕು ಎಂದು ಅಧಿಕಾರಿಗಳು
ಮನವಿ ಮಾಡಿದ್ದರು.