ನೆಲಮಂಗಲದಲ್ಲಿ ಈಗಾಗಲೇ ಧರ್ಮಸ್ಥಳ ಬುರುಡೆ ಪ್ರಕರಣ ಚಾಲ್ತಿಯಲ್ಲಿರುವ ಸಂದರ್ಭದಲ್ಲಿ ಮತ್ತೊಂದು ಅಚ್ಚರಿಯ ಬೆಳವಣಿಗೆ ಗಮನಸೆಳೆದಿದೆ. ನೆಲಮಂಗಲ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಆವರಣದಲ್ಲೇ ಮಾನವ ತಲೆ ಬುರುಡೆ ಪತ್ತೆಯಾದ ಘಟನೆ ಆತಂಕಕ್ಕೆ ಕಾರಣವಾಗಿದೆ.
ಆಸ್ಪತ್ರೆಯ ಆವರಣದಲ್ಲಿ ಕಸ ಬಿಸಾಡಲು ಬಳಸುವ ಸ್ಥಳದಲ್ಲಿ ಈ ತಲೆ ಬುರುಡೆ ಕಂಡುಬಂದಿದ್ದು, ಅದನ್ನು ಗಮನಿಸಿದ ವೈದ್ಯರು, ಸಿಬ್ಬಂದಿ ಹಾಗೂ ಅಲ್ಲಿದ್ದ ರೋಗಿಗಳು ನಿಜಕ್ಕೂ ಬೆಚ್ಚಿಬಿದ್ದರು. ಬುರುಡೆ ಸುಮಾರು ನಾಲ್ಕು-ಐದು ವರ್ಷ ಹಳೆಯದಾಗಿರಬಹುದೆಂದು ಪ್ರಾಥಮಿಕ ಶಂಕೆ ವ್ಯಕ್ತವಾಗಿದೆ.
https://www.facebook.com/reel/1243975470893959
ಈ ಕುರಿತು ತಕ್ಷಣವೇ ನೆಲಮಂಗಲ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಆಸ್ಪತ್ರೆಯ AMO ಡಾ. ಸೋನಿಯಾ ಅವರು ಪ್ರಕರಣವನ್ನು ಪೊಲೀಸರಿಗೆ ತಿಳಿಸಿದ್ದಾರೆ. ನಿಯಮಿತ ಸ್ವಚ್ಚತಾ ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಬುರುಡೆ ಪತ್ತೆಯಾಗಿರುವುದಾಗಿ ಅವರು ತಿಳಿಸಿದ್ದಾರೆ.
ಮಾಹಿತಿ ಸ್ವೀಕರಿಸಿದ ನೆಲಮಂಗಲ ಪೊಲೀಸರು ತಕ್ಷಣ ಆಸ್ಪತ್ರೆಗೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಬುರುಡೆಯ ಮೂಲ, ಅದು ಆಸ್ಪತ್ರೆಗೆ ಹೇಗೆ ತಲುಪಿತು, ಯಾವುದೇ ಅಪರಾಧಕ್ಕೆ ಸಂಬಂಧಿಸಿದಿದೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.
ಘಟನೆಯಿಂದ ಆಸ್ಪತ್ರೆ ಸಿಬ್ಬಂದಿ ಮತ್ತು ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ.
