ಜನಸಾಮಾನ್ಯರ ಆಡಳಿತಾತ್ಮಕ ಕೆಲಸ ಸುಗಮಗೊಳಿಸುವ ನಿಟ್ಟಿನಲ್ಲಿ ಗಡಿಬದಲಾವಣೆ
ನೆಲಮಂಗಲ: ರಾಜ್ಯದ ಆಡಳಿತ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದ್ದು, ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲ್ಲೂಕಿನ ಸೋಲೂರು ಹೋಬಳಿ ವ್ಯಾಪ್ತಿಯ 68 ಗ್ರಾಮಗಳನ್ನು ಬೇರ್ಪಡಿಸಿ, ಅವುಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿಗೆ ಸೇರಿಸುವ ಕುರಿತು ಕರಡು ಅಧಿಸೂಚನೆ ಹೊರಡಿಸಿದೆ.
ಈ ನಿರ್ಧಾರಕ್ಕೆ ಕಾರ್ಯದರ್ಶಿಯವರ ಅನುಮೋದನೆ ಸಿಕ್ಕಿದ್ದು, ಜನಸಾಮಾನ್ಯರ ಆಡಳಿತಾತ್ಮಕ ಸೇವೆಗಳು ಸುಲಭಗೊಳ್ಳುವಂತೆ ಈ ಬದಲಾವಣೆ ಕೈಗೊಳ್ಳಲಾಗಿದೆ. 2026-27ರ ಜನಗಣತಿ ಕಾರ್ಯಕ್ಕೂ ಮುನ್ನ ಗ್ರಾಮ, ಹೋಬಳಿ, ತಾಲ್ಲೂಕು ಮತ್ತು ಜಿಲ್ಲೆಯ ಗಡಿಗಳನ್ನು ನಿಗದಿಪಡಿಸುವುದು ಕಡ್ಡಾಯವಾಗಿರುವುದರಿಂದಲೇ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಸೇರ್ಪಡಿಗೊಳ್ಳಲಿರುವ 68 ಗ್ರಾಮಗಳು: ಸೋಲೂರು, ಕಲ್ಯಾಣಪುರ, ಸೋಲೂರು ಸರ್ಕಲ್, ತೂಬರಪಾಳ್ಯ, ಎಣ್ಣೆಗೇರೆ, ಚಿಕ್ಕನಹಳ್ಳಿ, ವಡ್ಡರಹಳ್ಳಿ, ಗಂಗೇನಪುರ, ಕನಕೆನಹಳ್ಳಿ, ಭೈರಾಪುರ, ಮಲ್ಲಿಕಾರ್ಜುನಪಾಳ್ಯ, ಲಕ್ಕೇನಹಳ್ಳಿ, ಬೀರವಾರ, ಕೊರಮಂಗಲ, ಕನ್ನಸಂದ್ರ, ಪರ್ವತನಪಾಳ್ಯ, ಗುಡೆಮಾರನಹಳ್ಳಿ, ಉಡುಕಂಟೆ, ಮೈಲನಹಳ್ಳಿ, ಪಾಲನಹಳ್ಳಿ, ಶಾಂತಪುರ, ಕಲ್ಲ ಹಳ್ಳಿ ಪಾಳ್ಯ, ಭೈರಸಂದ್ರ, ಮಾಲೂರು, ಭಂಟರಕುಪ್ಪೆ, ನಾಗನಹಳ್ಳಿ, ಮುಮ್ಮನಹಳ್ಳಿ, ಬೊಮ್ಮನಹಳ್ಳಿ, ತೊರೇಚನ್ನಹಳ್ಳಿ, ಮೊಟಗೊಂಡನಹಳ್ಳಿ, ಗೊಲ್ಲಹಳ್ಳಿ, ಕಾಟಗೊಂಡನಹಳ್ಳಿ, ಮರೇನಹಳ್ಳಿ, ಗರ್ಗೇಶ್ವರಪುರ, ಕೊಡಿಹಳ್ಳಿ, ಪೆಮ್ಮನಹಳ್ಳಿ, ಹಕ್ಕಿನಾಳು, ಮರಿಕುಪ್ಪೆ, ಬಸವೇನಹಳ್ಳಿ, ಹೊಸಹಳ್ಳಿ, ಬಾಣವಾಡಿ, ಆಲೂರು, ಶಿರಗನಹಳ್ಳಿ, ಮಲ್ಲಾಪುರ, ಮೂಗನಹಲ್ಲಿ, ಬಿಟ್ಟಸಂದ್ರ, ಹೇಮಾಪುರ, ನರಸಾಪುರ, ರಂಗೇನಹಳ್ಳಿ, ಕೆಂಪಾಪುರ, ತಟ್ಟೇಕೆರೆ, ಲಿಂಗನಹಳ್ಳಿ, ತಿಮ್ಮಸಂದ್ರ, ರಾಮನಹಳ್ಳಿ, ಗೋರೂರು, ರಂಗನಬೆಟ್ಟ, ಮುಪ್ಪೇನಹಳ್ಳಿ, ಚನ್ನಹಳ್ಳಿ, ಅರಿಶಿನಕಂಟೆ, ಉದ್ದಂದಳ್ಳಿ, ಚಿಕ್ಕಸೋಲೂರು, ಹ್ಯಾಗನಹಳ್ಳಿ, ಬೈದರಹಳ್ಳಿ, ಕುದ್ಲೂರು, ಸೋಮದೇವನಹಳ್ಳಿ, ಒಬ್ಬತ್ತನಕಂಟೆ, ಕುಪ್ಪೆಮಳ, ತಿರುಮಲಾಪುರ ಮತ್ತು ಹೊಸೂರು.
ಪರಿಣಾಮ: ಸೋಲೂರು ಹೋಬಳಿ ಸೇರ್ಪಡೆಗೊಂಡ ಬಳಿಕ, ಮಾಗಡಿ ತಾಲ್ಲೂಕಿನ ಗಡಿ ಬದಲಾಗುತ್ತಿದ್ದು, ನೆಲಮಂಗಲ ತಾಲ್ಲೂಕಿನ ವ್ಯಾಪ್ತಿ ವಿಸ್ತರಿಸುತ್ತದೆ. ಜನತೆಗೆ ಹತ್ತಿರದ ತಾಲ್ಲೂಕು ಕೇಂದ್ರದಲ್ಲಿ ನೇರವಾಗಿ ಸೇವೆಗಳು ದೊರಕುವ ಸಾಧ್ಯತೆ ಹೆಚ್ಚಲಿದೆ.
ಮುಂದಿನ ಹಂತ: ಕರಡು ಅಧಿಸೂಚನೆಗೆ ಸಾರ್ವಜನಿಕರಿಂದ ಅಭಿಪ್ರಾಯ ಆಹ್ವಾನಿಸಲಾಗುತ್ತಿದ್ದು, ಅಂತಿಮ ಅನುಮೋದನೆ ನಂತರ ಗಡಿಬದಲಾವಣೆ ಜಾರಿಗೆ ಬರಲಿದೆ.
68 ಗ್ರಾಮಗಳು ಮಾಗಡಿಯಿಂದ ಬೇರ್ಪಟ್ಟು ನೆಲಮಂಗಲ ಸೇರ್ಪಡೆ
ಆಡಳಿತಾತ್ಮಕ ಸೇವೆಗಳ ಸುಗಮತೆ – ಸರ್ಕಾರದ ಉದ್ದೇಶ
ಜನಗಣತಿ ಮುನ್ನ ಗಡಿ ನಿಗದಿಪಡಿಸುವ ಕಡ್ಡಾಯ
ಕರಡು ಅಧಿಸೂಚನೆಗೆ ಕಾರ್ಯದರ್ಶಿಯವರ ಅನುಮೋದನೆ